ಆಲಂಕಾರು ಗ್ರಾ.ಪಂ ಮತ್ತು ಸುಬ್ರಹ್ಮಣ್ಯ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿ ಗಳಿಂದ ಆಲಂಕಾರಿನಲ್ಲಿ ಸ್ವಚ್ಚತೆ

0

ಆಲಂಕಾರು: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ, ಭಾರತ ಸರಕಾರವು ನೈರ್ಮಲ್ಯ ಹಾಗೂ ಶುಚಿತ್ವ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನಾಂದೋಲನವನ್ನು ಆಲಂಕಾರು ಗ್ರಾಮ ಪಂಚಾಯತ್‌ ಹಾಗೂ ಎನ್‌ ಎಸ್‌ ಎಸ್‌ ವಿದ್ಯಾರ್ಥಿಗಳ ವಾರ್ಷಿಕ ಶಿಬಿರದ ಸಹಯೋಗದೊಂದಿಗೆ ಆಲಂಕಾರು ಗ್ರಾಮಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರತಿದಿನ ಸ್ವಚ್ಚತೆ ಕಡೆಗೆ ಹತ್ತು ಹೆಜ್ಜೆ ಎಂಬ ಧ್ಯೇಯದೊಂದಿಗೆ ಆಲಂಕಾರು ಪೇಟೆಯಲ್ಲಿ ಸ್ವಚ್ಚತಾ ಆಂದೋಲನ ಮಾಡಲಾಯಿತು.

 

ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ಜ.21 ರಿಂದ ಜ.27 ರ ತನಕ ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿ ಗಳಿಂದ ವಾರ್ಷಿಕ ಶಿಬಿರ ನಡೆಯುತ್ತಿದ್ದು. ಆಲಂಕಾರು,ನೆಕ್ಕರೆ,ಸುರುಳಿ,ಶಾಂತಿಮೊಗರು ರಸ್ತೆಯ ಅಸುಪಾಸಿನಲ್ಲಿ ಸ್ಚಚ್ಚತಾ ಕಾರ್ಯಕ್ರಮ ವನ್ನು ನಾಲ್ಕು ತಂಡಗಳಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನೇರವೆರಿಸಿದರು.ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ ಸ್ವಚ್ಚತೆಗೆ ಚಾಲನೆ ನೀಡಿ ,ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ಸ್ವಾಗತಿಸಿ,ಕಾರ್ಯದರ್ಶಿ ವಸಂತ ಶೆಟ್ಟಿ ವಂದಿಸಿದರು .ಸ್ವಚ್ಚತಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರು, ಸುಬ್ರಹ್ಮಣ್ಯ ಕಾಲೇಜಿನ ಉಪನ್ಯಾಸಕರು,ಎನ್. ಎಸ್.ಎಸ್.ವಿದ್ಯಾರ್ಥಿಗಳು,ಪಂಚಾಯತ್ ಸಿಬ್ಬಂದಿಗಳು ಹಾಗು ಊರವರು ಸಹಕರಿಸಿದರು

LEAVE A REPLY

Please enter your comment!
Please enter your name here