ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬನ್ನೂರು ಆರ್‌ಟಿಒ ಪಕ್ಕ 75 ಸೆಂಟ್ಸ್ ಜಾಗ ಗುರುತು – ತಹಸೀಲ್ದಾರ್

0

 

  • ಈ ಹಿಂದೆ ಮೀಸಲಿಟ್ಟ ಜಾಗದಲ್ಲೇ ಭವನ ನಿರ್ಮಾಣಕ್ಕಾಗ್ರಹಿಸಿ ಮೂವರು ಎಸ್ಸಿ,ಎಸ್ಟಿ ಮುಖಂಡರ ಸಭಾ ತ್ಯಾಗ
  • ಸಭೆಯಲ್ಲಿ ಉಳಿದ ಸದಸ್ಯರಿಂದ ೭೫ ಸೆಂಟ್ಸ್ ಜಾಗ ಮಂಜೂರು ಮಾಡುವಂತೆ ಆಗ್ರಹ

ಪುತ್ತೂರು: ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸರಕಾರಿ ಆಸ್ಪತ್ರೆಯ ಬಳಿ ಮಂಜೂರಾಗಿದ್ದ ೧೯ ಸೆಂಟ್ಸ್ ಜಾಗವನ್ನು ಸರಕಾರಿ ಆಸ್ಪತ್ರೆಗೆ ನೀಡಿ, ಅದಕ್ಕೆ ಬದಲಾಗಿ ಬನ್ನೂರು ಪ್ರಾದೇಶಿಕ ಸಾರಿಗೆ ಕಚೇರಿ ಪಕ್ಕದಲ್ಲಿ ೭೫ ಸೆಂಟ್ಸ್ ಜಾಗ ಗುರುತು ಮಾಡಿರುವುದನ್ನು ಆಕ್ಷೇಪಿಸಿ ಮೂವರು ಪರಿಶಿಷ್ಟ ಜಾತಿ, ಪಂಗಡದ ಪ್ರಮುಖರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಿತರಕ್ಷಣೆ ಮತ್ತು ಭದ್ರತೆ ಕುರಿತ ಸಭೆಯಲ್ಲಿ ಸಭಾ ತ್ಯಾಗ ಮಾಡಿದ ಹಾಗು ಸಭೆಯಲ್ಲಿ ಉಳಿದವರು ಮುಂದಿನ ಸಭೆಯೊಳಗೆ ಈಗ ಗುರುತಿಸಿದ ಜಾಗವನ್ನು ತಾಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಆಗ್ರಹಿಸಿದ ಘಟನೆ ಜ.೨೨ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಿತರಕ್ಷಣೆ ಮತ್ತು ಭದ್ರತೆ ಕುರಿತ ಸಭೆಯಲ್ಲಿ ನಡೆದಿದೆ. ತಹಸೀಲ್ದಾರ್ ರಮೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಭೆ ನಡೆಯಿತು.

LEAVE A REPLY

Please enter your comment!
Please enter your name here