ಹಿರೇಬಂಡಾಡಿ ಗ್ರಾ.ಪಂ. ಗ್ರಾಮ ಸಭೆ

0

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾ.ಪಂ.ನ ಗ್ರಾಮ ಸಭೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ತಯಾರಿ ಗ್ರಾಮ ಸಭೆ ಗ್ರಾ.ಪಂ.ನ ಸಮುದಾಯ ಭವನದಲ್ಲಿ ಗುರುವಾರ ನಡೆಯಿತು.

 


ಗ್ರಾ.ಪಂ. ಅಧ್ಯಕ್ಷೆ  ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಆದ ಕಾಮಗಾರಿಗಳ ವರದಿ ಮಂಡಿಸಲಾಯಿತ್ತಲ್ಲದೆ, ವಾರ್ಡ್ ಸಭೆಗಳಲ್ಲಿ ಬಂದ ಬೇಡಿಕೆಗಳ ಪಟ್ಟಿಯನ್ನು ಓದಲಾಯಿತು. ಬಳಿಕ ಗ್ರಾಮಸ್ಥರು ಸಮಸ್ಯೆ, ಬೇಡಿಕೆಗಳನ್ನು ಮಂಡಿಸುವ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡರು.

ವಿವಿಧ ಇಲಾಖೆಗಳ ಅಧಿಕಾರಿಗಳಾದ ಉಮಾವತಿ, ವರ್ಷಾ ಕಯ್ಯ, ಜಗತ್ ಕೆ., ಸುಬ್ರಹ್ಮಣ್ಯ ಸಂಟ್ಯಾರ್, ಕೆ. ರಾಜೇಶ್, ಜಿತೇಶ್ ಕೆ., ಡಾ. ಆಕಾಶ್, ಹರೀಶ್ ಪಿ., ಮುಹಮ್ಮದ್ ಅಶ್ರಫ್, ತಿರುಪತಿ ಎನ್ ಭರಮಣ್ಣನವರ್ ಇಲಾಖಾ ಮಾಹಿತಿ ನೀಡಿದರು.

ಗ್ರಾಮಸ್ಥರಾದ ಕೇಶವ ಕನ್ಯಾನ, ರವೀಂದ್ರ ಪಟಾರ್ಟಿ, ದಯಾನಂದ ಸರೋಳಿ, ಶೇಷಪ್ಪ ನೆಕ್ಕಿಲು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಶಾಂಭವಿ, ಸವಿತಾ, ಗೀತಾ, ನಾರಾಯಣ ಎಸ್., ಸದಾನಂದ ಶೆಟ್ಟಿ, ಶೌಕತ್ತಲಿ ಎ.ಎಚ್., ಸತೀಶ್ ಎನ್. ಶೆಟ್ಟಿ, ಲಕ್ಷ್ಮೀಶ, ನಿತಿನ್, ಉಷಾ ಎಚ್.ಎನ್., ವಾರಿಜಾಕ್ಷಿ, ಹೇಮಲತಾ ಉಪಸ್ಥಿತರಿದ್ದರು. ನೋಡಲ್ ಅಧಿಕಾರಿಯಾಗಿದ್ದ ಪುತ್ತೂರು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಸಭೆಯನ್ನು ನಿಯಂತ್ರಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪರಮೇಶ್ವರ ವಂದಿಸಿದರು. ಸಿಬ್ಬಂದಿ ಸೋಮನಾಥ ಎನ್. ಸಹಕರಿಸಿದರು.

LEAVE A REPLY

Please enter your comment!
Please enter your name here