ಜಿಡೆಕಲ್ಲುವಿನಲ್ಲಿ ಕುಸಿದು ಬೀಳುವ ಹಂತದಲ್ಲಿರುವ ಮನೆ- ಸರಕಾರಿ ಸೌಲಭ್ಯಕ್ಕೆ ಅರ್ಹರಾದರೂ ಎಸ್ಸಿ ಕುಟುಂಬಕ್ಕೆ ತಲುಪದ ಸೌಲಭ್ಯ

0

ಪುತ್ತೂರು: ಮಳೆಗಾದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಈಗಲೋ ಆಗಲೂ ಬೀಳುವ ಸ್ಥಿತಿಯಲ್ಲಿರುವ ಮನೆಯ ದುರಸ್ಥಿಗಾಗಿ ಬಡ ಪರಿಶಿಷ್ಟ ಜಾತಿ ಪಂಗಡದ ಅನಾರೋಗ್ಯದ ಪೀಡಿತ ವ್ಯಕ್ತಿಯೊಬ್ಬರು ಸರಕಾರಿ ಸೌಲಭ್ಯದ ನೆರವಿನ ನಿರೀಕ್ಷೆಯಲ್ಲಿದ್ದಾರೆ

ಪುತ್ತೂರು ಜಿಡೆಕಲ್ಲು ದಿ| ಕರಿಯ, ಭಾಗಿ ದಂಪತಿಯ ಒಬ್ಬನೆ ಪುತ್ರ ಕೊರಗಪ್ಪ ಅವರು ಕಾಲು ನೋವಿನಿಂದ ಬಳಲುತ್ತಿದ್ದು ಕೂಲಿ ಕೆಲಸ ಮಾಡಲು ಅಶಕ್ತರಾಗಿದ್ದು ಬದುಕು ಸಾಗಿಸುವುದು ಹೇಗೆಂದು ತಳಮಳದಲ್ಲಿರುವಾಗ ಇದೀಗ ಮಳೆಗಾಲದ ಸಂದರ್ಭ ಮನೆಯ ಒಂದು ಭಾಗದಲ್ಲಿ ಪಕ್ಕಾಸುಗಳು ಮುರಿದು ಹಂಚುಗಳು ಬಿದ್ದು ಹೋಗಿವೆ. ಮನೆಯು ತೀರಾ ಹಳೆದಾಗಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಪರಿಶಿಷ್ಟ ಜಾತಿ ಸಮುದಾಯದವರಾದ ಕೊರಗಪ್ಪ ಅವರಿಗೆ ಸರಕಾರಿ ಸೌಲಭ್ಯಗಳಿದ್ದರೂ ಅದನ್ನು ಪಡೆಯುವ ಕುರಿತು ಮಾಹಿತಿ ಇಲ್ಲದೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಂದೆ ತಾಯಿಯನ್ನು ಕಳೆದು ಕೊಂಡ ಕೊರಗಪ್ಪ ಅವರು ಏಕಾಂಗಿಯಾಗಿ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು, ಅಲ್ಲಿ ಇಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಇವರ ಮನೆ ದುರಸ್ಥಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಸರಕಾರಿ ಇಲಾಖೆಗಳು ಇತ್ತ ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನನ್ನ ಅಣ್ಣನ ಮಗ ಕೊರಗಪ್ಪ ಅವರು ಕಾಲು ನೋವಿನಿಂದ ಬಳಲುತ್ತಿದ್ದು ಕೂಲಿ ಕೆಲಸ ಮಾಡಲು ಅಶಕ್ತರಾಗಿದ್ದಾರೆ. ಅವರಿಗೆ ಹಿಂದೆ ಮುಂದೆ ಯಾರು ಇಲ್ಲ. ನಾನು ಸುಳ್ಯದಲ್ಲಿ ವಾಸ್ತವ್ಯ ಹೊಂದಿದ್ದು, ಆಗಾಗ ಇಲ್ಲಿಗೆ ಬಂದು ಅವನ ಆರೈಕೆ ಮಾಡಬೇಕಾಗಿದೆ. ಸರಕಾರದಿಂದ ಸಿಗುವ ಸೌಲಭ್ಯವನ್ನು ಒದಗಿಸಿದಲ್ಲಿ ಕೊರಗಪ್ಪನ ಜೀವನ ಉತ್ತಮವಾಗಿ ನಡೆಯಬಹುದು. ಸ್ಥಳೀಯ ನಗರಸಭಾ ಸದಸ್ಯರು ಕೂಡಾ ಇಲ್ಲಿಗೆ ಬರುತ್ತಿಲ್ಲ – ಶಂಕರ ಸುಳ್ಯ, ಕೊರಗಪ್ಪ ಅವರ ಚಿಕ್ಕಪ್ಪ

LEAVE A REPLY

Please enter your comment!
Please enter your name here