ಸುಳ್ಯದ ವಿವೇಕಾನಂದ ಸರ್ಕಲ್ ಜಂಕ್ಷನ್ ರಸ್ತೆಯಲ್ಲಿದ್ದ ಹೊಂಡ ಗುಂಡಿಗಳನ್ನು ಮುಚ್ಚಿಸಿದ ಸತೀಶ್ ಬೂಡುಮಕ್ಕಿ

0

 

ಸುಳ್ಯದ ವಿವೇಕಾನಂದ ಸರ್ಕಲ್ ಜಂಕ್ಷನ್ ನಿಂದ ಅಜ್ಜಾವರಕ್ಕೆ ತಿರುಗುವ ರಸ್ತೆಯಲ್ಲಿ ಹೊಂಡಗುಂಡಿಗಳಿಂದಾಗಿ ಸಾರ್ವಜನಿಕರ ಓಡಾಟ ಕ್ಕೆ ದಿನನಿತ್ಯ ತೊಂದರೆ ಆಗುತ್ತಿರುವುದನ್ನ ಗಮನಿಸಿದ ಅಂಬೇಡ್ಕರ್ ಆರ್ಮಿ, ಅಂಬೇಡ್ಕರ್ ಆದರ್ಶ ಸೇವ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿ ರವರು ಸೆ.18 ರಂದು ಗುಂಡಿ‌ ಮುಚ್ಚಿಸುವ ಕೆಲಸ ಮಾಡಿದ್ದಾರೆ.


ಸತೀಶ್ ರವರು ತಮ್ಮ ಸಂಘಟನೆಯ ಅಜ್ಜಾವರ ಘಟಕ ಅಧ್ಯಕ್ಷರಾದ ಹರೀಶ್ ಮೇನಾಲರವರು, ಸಂಘಟನೆ ಪದಾಧಿಕಾರಿಗಳಾದ ಬಾಲಕೃಷ್ಣ ದೊಡ್ಡೇರಿ, ಚಂದ್ರಶೇಖರ ಪುತ್ತಿಲ, ದಯಾನಂದ ಗಂಧದಗುಡ್ಡೆ, ಶಶಿಧರ ಗಂಧಧ ಗುಡ್ಡೆ, ಸಚಿನ್ ಕಾಂತಮಂಗಲ, ಮೋನಪ್ಪ ಪುತ್ತಿಲರವರ ಸೇರಿಸಿಕೊಂಡು ಕಾಂಕ್ರೀಟ್ ಹಾಕಿ ರಸ್ತೆ ಗುಂಡಿ ಮುಚ್ಚಿದರು. ಹಾಗೂ ಕೆಲಸಕ್ಕೆ ನೀರನ್ನು ಸ್ಥಳೀಯ ನಿವಾಸಿಯಾಗಿರುವ ಸುಳ್ಯ ತಾಲೂಕು ಆರೋಗ್ಯಧಿಕಾರಿ ಡಾ. ನಂದಕುಮಾರ್ ರವರು ನೀಡಿ ಸಹಕರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಕೆಲಸವನ್ನ ಶ್ಲಾಘಸಿ ಹೊಂಡಗುಂಡಿಗಳಿಂದ ತಮ್ಮ ವಾಹನಗಳಿಗಾದ ತೊಂದರೆಗಳ ಅನುಭವವನ್ನ ‌ಹಂಚಿಕೊಂಡರು.

LEAVE A REPLY

Please enter your comment!
Please enter your name here