ಗಾಂಧಿ ಹುತಾತ್ಮರ ದಿನಾಚರಣೆ: ರಾಗಿಕುಮೇರ್ ಗೆ ಪಾದಯಾತ್ರೆ

0

ಪುತ್ತೂರು: ಗಾಂಧಿಕಟ್ಟೆ ಸಮಿತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗಿದ್ದು, 1943ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಗಿಕುಮೇರ್ ಪರಿಶಿಷ್ಟ ಜಾತಿ ಕಾಲೊನಿಗೆ ಪಾದಯಾತ್ರೆ ಮಾಡಿದ್ದ ಪ್ರದೇಶಕ್ಕೆ ಈ ವರ್ಷ ಪಾದಯಾತ್ರೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಹುತಾತ್ಮರ ದಿನಾಚರಣೆ ನಡೆಸಿದರು.

ಸೈರನ್ ಮೊಳಗಿಸಿ ಗೌರವಾರ್ಪಣೆ ನಡೆದ ಬಳಿಕ ಗಾಂಧಿಕಟ್ಟೆಯಿಂದ ರಾಗಿಕುಮೇರ್‌ಗೆ ಪಾದಯಾತ್ರೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಡಾ| ಯತೀಶ್ ಉಲ್ಲಾಳ್, ತಹಶೀಲ್ದಾರ್ ರಮೇಶ್ ಬಾಬು ಹಾಗೂ ಡಿವೈಎಸ್‌ಪಿ ಡಾ. ಡಾನಾ.ಪಿ ಕುಮಾರ್‌, ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಕ್ಸೇವಿಯರ್ ಡಿ ಸೋಜ, ನಿವೃತ್ತ ಯೋಧ ರಮೇಶ್ ಬಾಬು, ಸುಲೈಮಾನ್ ಕಲ್ಲರ್ಪೆ, ಗಾಂಧೀಕಟ್ಟೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಗಾಂಧೀ ಪ್ರತಿಮೆ ಹಾರಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಅಗ್ನಿ ಶಾಮಕ ದಳದವರಿಂದ ಸೈರನ್ ಮೊಳಗಿಸಲಾಯಿತು.

ಗಾಂಧಿ ಪ್ರತಿಮೆಗೆ ಮಾಲಾರ್ಪಣೆ, ರಾಮಕೃಷ್ಣ ಪ್ರೌಢಶಾಲಾ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ನಾಯಕತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ.
ಇಂದು ಗಾಂಧಿಕಟ್ಟೆಯಲ್ಲಿ ಹುತಾತ್ಮರ ಸಭಾ ಕಾರ್ಯಕ್ರ‌ಮದ ಬಳಿಕ ವಿದ್ಯಾರ್ಥಿಗಳಿಂದ ಭಜನೆ ನಡೆದು ನಂತರ ಗಾಂಧಿ ಪಾದಸ್ಪರ್ಶ ಮಾಡಿದ್ದ ರಾಗಿಕುಮೇರ್ ಎಸ್ಸಿಕಾಲನಿಗೆ ಪಾದಯಾತ್ರೆ ನಡೆಸಿದರು.

LEAVE A REPLY

Please enter your comment!
Please enter your name here