ಪುತ್ತೂರಿನಲ್ಲಿ ಪ್ರೇರಣಾ ತರಬೇತಿ ಸಂಸ್ಥೆಯ ಉದ್ಘಾಟನೆ

0

ಕರಾವಳಿ ಭಾಗದ ಗ್ರಾಮೀಣ ಮತ್ತು ಬಡವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಕೇಂದ್ರವಾಗಿ ಬೆಳೆಯಲಿ : ಡಾ. ರೇಣುಕಾ ಪ್ರಸಾದ್ ಕೆ.ವಿ

ಕರಾವಳಿ ಭಾಗದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುವ ಮತ್ತು ಅವರ ಉನ್ನತ ವ್ಯಾಸಾಂಗಕ್ಕೆ ದಾರಿದೀಪವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭವಾದ ಪ್ರೇರಣಾ ತರಭೇತಿ ಸಂಸ್ಥೆಯು ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಲಿ ಎಂದು ಡಾ. ರೇಣುಕಾ ಪ್ರಸಾದ್ ಕೆ.ವಿ. ಹೇಳಿದರು.


ಅವರು ಸೆ. ೧೮ ರಂದು ಪುತ್ತೂರಿನ ಕೆನರಾ ಬ್ಯಾಂಕ್ ಬಳಿಯ ಪ್ರಭು ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ನೂತನವಾಗಿ ಆರಂಭವಾದ ಪ್ರೇರಣಾ ತರಭೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಉತ್ತಮ ಕಲಿಕೆ ಹೊಂದಿರುವ ಮಕ್ಕಳಿಗೆ ಸಾಕಷ್ಟು ಉದ್ಯೋಗದ ಅವಕಾಶಗಳು ಲಭ್ಯವಿದೆ. ಉತ್ತಮ ಅಂಕಗಳನ್ನು ಪಡೆದ ಬಡ ಮಕ್ಕಳು ಕೂಡಾ ಉನ್ನತ ಶಿಕ್ಷಣವಾದ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣವನ್ನು ಪಡೆಯುವ ಅವಕಾಶವಿದ್ದರೂ, ಸರಿಯಾದ ಮಾರ್ಗದರ್ಶನವಿಲ್ಲದೆ ಆದರಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮಈ ಕಾರ್ಯವು ಶ್ಲಾಘನೀಯವಾಗಿದೆ. ಈ ನಿಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡುವ ಮೂಲಕ ನಮ್ಮತಾಲೂಕುಕೇಂದ್ರದ ವಿದ್ಯಾರ್ಥಿಗಳು ಕೂಡಾನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿಉನ್ನತ ಶಿಕ್ಷಣವನ್ನು ಪಡೆಯುವಂತಾಗಲಿ ಆ ಮೂಲಕ ನಿಮ್ಮ ಸಂಸ್ಥೆಗೂ ನಮ್ಮ ಊರಿಗೂ ಕೀರ್ತಿ ಬರುತಂತಾಗಲಿ ಎಂದು ಶುಭ ಹಾರೈಸಿದರು.


ಸಮಾರಂಭದಲ್ಲಿ ದೀಪ ಪ್ರಜ್ವಲನೆಯನ್ನು ಪುತ್ತೂರು ವಿಧಾನ ಸಭಾಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಮಾಡಿದರು. ಅಧ್ಯಕ್ಷತೆಯನ್ನು ಪುತ್ತೂರು ನಗರ ಸಭೆ ಅಧ್ಯಕ್ಷರಾದ ಜೀವಂಧರ್ ಜೈನ್ ವಹಿಸಿದರು. ಮುಖ್ಯ ಅಥಿತಿಗಳಾದ ಸೀತಾರಾಮ ರೈ ಸವಣೂರು, ಜಯಂತ ನಡುಬೈಲು, ಪ್ರದೀಪ್ ಆರ್. ಗೌಡ, ಪುತ್ತೂರು ಉಮೇಶ್ ನಾಯಕ್ ಮತ್ತುಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ. ಉಜ್ವಲ್‌ಊರುಬೈಲು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಚೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಮತ್ತುಇತರ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ಪ್ರವೀಣ್ ಕುಂಟ್ಯಾನ ಮತ್ತು ನಾಗೇಶ್ ಕೆಡೆಂಜಿ ಹಾಗೂ ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here