ಡಾ. ಅನುರಾಧಾ ಕುರುಂಜಿಯವರಿಗೆ ಅಡ್ಪಂಗಾಯದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂದಿರದ ವತಿಯಿಂದ ಅಭಿನಂದನಾ ಸಮಾರಂಭ

0

ಸುಳ್ಯದ ಸಾಹಿತಿ, ಸಂಘಟಕಿ, ಸಂಪನ್ಮೂಲ ವ್ಯಕ್ತಿ, ಇತ್ತೀಚೆಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪುರಸ್ಕೃತೆ ಡಾ. ಅನುರಾಧಾ ಕುರುಂಜಿಯವರನ್ನು ಸೆ. 19ರಂದು ಅಡ್ಪಂಗಾಯದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂದಿರದ ಸನ್ನಿಧಾನದಲ್ಲಿ ನಡೆದ ಸಂಕ್ರಮಣ ಪೂಜಾ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂದಿರದ ಧರ್ಮದರ್ಶಿ, ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯ ಹಾಗೂ ಕುರುಂಜಿ ಕುಟುಂಬದ ಹಿರಿಯರಾದ ಬಾಲಣ್ಣ ಗೌಡ ಅವರು ಶಾಲು‌, ಹಾರ, ಹಣ್ಣು ಹಂಪಲು, ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶೀಲಾವತಿ ಕುರುಂಜಿ, ಪಾಲಿಟೆಕ್ನಿಕ್ ಉದ್ಯೋಗಿ ಅರುಣ ಕುರುಂಜಿ, ತೀರ್ಥಪ್ರಸಾದ್ ಅಡ್ಪಂಗಾಯ, ಹಿಮಕರ ಕುರುಂಜಿ, ಮಂಗಳೂರಿನ ಪೋಂಪೆ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಮಂಜುನಾಥ್ ಎಸ್ ಎ, ಉಪನ್ಯಾಸಕಿ ಮೀನಾಕ್ಷಿ ಮಂಜುನಾಥ್, ಡಾ. ಅನುರಾಧಾ ಕುರುಂಜಿಯವರ ಪತಿ ಚಂದ್ರಶೇಖರ್ ಬಿಳಿನೆಲೆ ಹಾಗೂ ಅಯ್ಯಪ್ಪ ವ್ರತಧಾರಿಗಳು, ಕುರುಂಜಿ ಕುಟುಂಬದವರು, ಅಯ್ಯಪ್ಪ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here