ಮದುವೆಗೆ ಬಂದು ಕದ್ದು ಮುಚ್ಚಿ ಹುಡುಗಿಯರ ಪೊಟೋ ಕ್ಲಿಕ್ಕಿಸಿದಾತನಿಗೆ ಧರ್ಮದೇಟು-ಸಂತ್ರಸ್ತ ಮಹಿಳೆಯೊಬ್ಬರ ಫೇಸ್‌ಬುಕ್‌ ಪೋಸ್ಟ್ ವೈರಲ್

0

ಪುತ್ತೂರು: ಮದುವೆ ಸಮಾರಂಭಕ್ಕೆ ಬಂದ ವ್ಯಕ್ತಿಗಳಿಬ್ಬರು ಊಂಡು ಹೋಗುವುದು ಬಿಟ್ಟು ಕದ್ದು ಮುಚ್ಚಿ ಸಿಕ್ಕ ಸಿಕ್ಕ ಹುಡುಗಿಯರ ಪೊಟೋ ಕ್ಲಿಕ್ಕಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು, ಅಲ್ಲಿದ್ದವರಿಂದ ಗೂಸ ತಿಂದ ಘಟನೆ ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯೊಬ್ಬರ ಫೇಸ್‌ಬುಕ್‌ ಪೋಸ್ಟ್ ವೈರಲ್ ಆಗಿದೆ.

ಪುತ್ತೂರು ಕಾವು ದೇವಸ್ಥಾನವೊಂದರ ಸಭಾಭವನಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧವೇ ಇಲ್ಲದ ಅಪರಿಚಿತ ವ್ಯಕ್ತಿಗಳಿಬ್ಬರು ಬಂದು ಕದ್ದು ಮಚ್ಚಿ ಹುಡುಗಿಯರ ಪೊಟೋ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರ ಸೊಂಟದಲ್ಲಿನ ಮೊಬೈಲ್ ಕಸಿದುಕೊಂಡಿದ್ದಾರೆ. ಪರಿಶೀಲನೆ ನಡೆಸಿದಾಗ ಗ್ಯಾಲರಿಯಲ್ಲಿ ನೂರಾರು ಹುಡುಗಿಯರ ಪೊಟೊ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ನೆರೆದಿದ್ದವರು ವಿಚಾರಿಸಿದಾಗ ಸಂಪ್ರದಾಯಸ್ಥರೊಬ್ಬರ ಪುತ್ರ ಹೇಳಿದಕ್ಕಾಗಿ ಪೊಟೋ ಕ್ಲಿಕ್ಕಿಸಿದ್ದೇವೆ ಎಂದು ಹೇಳಿದ್ದಾರೆ. ಹಾಗೆಂದು ಸಿಕ್ಕ ಸಿಕ್ಕ ಹುಡುಗಿಯರ ಪೊಟೋ ತೆಗೆಯುವುದು ತಪ್ಪು ಎಂದು ನೆರೆದಿದ್ದ ಜನ ಅಪರಿಚಿತರಿಬ್ಬರ ಮೊಬೈಲ್ ವಶಕ್ಕೆ ಪಡೆದು ಅವರಿಗೆ ಭೂರಿ ಭೋಜನ ನೀಡಿದ್ದಾರೆ. ಗೂಸಾ ತಿಂದ ಬಳಿಕ ಅಪರಿಚಿತರಿಬ್ಬರು ತಪ್ಪೊಪ್ಪಿಕೊಂಡು ಇನ್ನು ಹಾಗೆ ಮಾಡುವುದಿಲ್ಲ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

LEAVE A REPLY

Please enter your comment!
Please enter your name here