ಡ್ರಾಮಾ ಜೂನಿಯರ್ ಮೆಗಾ ಆಡಿಷನ್‌ಗೆ ಕಬಕ ಶಾಲಾ ವಿದ್ಯಾರ್ಥಿನಿ ಅಪೂರ್ವ ಆಯ್ಕೆ

0

ಪುತ್ತೂರು: ಕಬಕ ಸರಕಾರಿ ಹಿ.ಪ್ರಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಡ್ರಾಮಾ ಜೂನಿಯರ್ ಆಡಿಷನ್‌ಗೆ ಆಯ್ಕೆಯಾಗಿದ್ದಾರೆ.

ಈಕೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಎಂಬ ಕುಗ್ರಾಮದ ಮಂಜುನಾಥ ಹರ್ಲಾಪುರ ಮತ್ತು ನಿರ್ಮಲಾ ದಂಪತಿಯ ಪುತ್ರಿಯಾಗಿದ್ದು ದಂಪತಿ ಕೂಲಿ ಕೆಲಸಕ್ಕೆಂದು ಕಬಕಕ್ಕೆ ಆಗಮಿಸಿದ್ದು ಅಪೂರ್ವ ಕಬಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ಪುತ್ತೂರು ತಾಲೂಕಿನಲ್ಲಿ ಶಿಕ್ಷಣ ಇಲಾಖೆ ನಡೆಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯ ಸಹಶಿಕ್ಷಕ ಮಲ್ಲೇಶಯ್ಯರವರು ಬರೆದು ನಿರ್ದೇಶಿಸಿರುವ ‘ಭರವಸೆ ಬಾಳಿನ ಬೆಳಕು’ ನಾಟಕದಲ್ಲಿ ಅಭಿನಯಿಸಿದ್ದರು. ೨೦೨೧ರ ಡಿ. ೨೮ರಂದು ಮಂಗಳೂರಿನಲ್ಲಿ ಝೀ ಕನ್ನಡ ವಾಹಿನಿಯವರು ನಡೆಸಿದ ಡ್ರಾಮಾ ಜೂನಿಯರ್ ಆಡಿಷನ್‌ನಲ್ಲಿ ಭಾಗವಹಿಸಿ ಫೆ.೩ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡ್ರಾಮಾ ಜೂನಿಯರ್ ಮೇಗಾ ಆಡಿಷನ್‌ಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here