ಕಡಬ ತಾ.ಪಂ ಸಾಮಾನ್ಯ ಸಭೆ – ಪ್ರಸ್ತಾವನೆಗಳಿಗೆ ಅನುಮೋದನೆ

0

ಪುತ್ತೂರು: ಕಡಬ ತಾ.ಪಂ ಸಾಮಾನ್ಯ ಸಭಯು ಫೆ. 3ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಡಳಿತಾಧಿಕಾರಿ ತೋಟಗಾರಿಕೆ ಜಂಟಿ ನಿರ್ದೇಶಕಿ ಸೀತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

 


2ನೇ ಸಾಮಾನ್ಯ ಸಭೆಯಲ್ಲಿ ವಿವಿಧ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಕಡಬ ಪಶುಸಂಗೋಪನೆ ಇಲಾಖೆ ಕುರಿತು ಪ್ರಸ್ತಾವನೆ ಸಂಬಂಧಿಸಿ ಕಡಬ ತಾಲೂಕಿನ 7 ಬರಡು ರಾಸು ಚಿಕಿತ್ಸಾ / ಜಾನುವಾರು ಆರೋಗ್ಯ ಶಿಬಿರಗಳಿಗೆ ರೂ. 1.75 ಲಕ್ಷ ಅನುದಾನದಲ್ಲಿ ಔಷಧಿ ಮತ್ತು ರಾಸಾಯನಿಕ ಖರೀದಿಸಲು ದರಪಟ್ಟಿ ಅನುಮೋದನೆ, ಪಶು ಆಸ್ಪತ್ರೆ ಕಡಬ ಕಚೇರಿ ಅವಶ್ಯಕವಾಗಿ ಒಂದು ಜೆರಾಕ್ಸ್ ಮೆಷಿನ್ ಮತ್ತು ಸ್ಟೆಬಿಲೈಸರ್ ಖರೀದಿಸಲು ದರಪಟ್ಟಿ ಅನುಮೋದನೆಗಾಗಿ, ಪಿಠೋಪಕರಣ, ಕಪಾಟುಗಳನ್ನು ಖರೀದಿಸಲು ದರಪಟ್ಟಿ ಅನುಮೋದನೆಗಾಗಿ ಮತ್ತು ಕೃಷಿ ಇಲಾಖೆಯ 2021-22ನೇ ಸಾಲಿನ ಪರಿಶಿಷ್ಟ ಪಂಗಡ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಪಂಗಡದ ರೈತರಿಗೆ ಕೃಷಿ ಮಿತ್ರ ಟ್ರಾಲಿ ವಿತರಿಸಲು ಫಲಾನುಭವಿಗಳ ಆಯ್ಕೆ ಅನುಮೋದನೆಗಾಗಿ ಸೇರಿದಂತೆ ಹಲವಾರು ಯೋಜನೆಗಳ ಅನುಮೋದನೆಗೆ ಪ್ರಸ್ತಾಪಿಸಲಾಯಿತು. ಮಾರ್ಚ್ 2022ರ ಅಂತ್ಯಕ್ಕೆ ಎಲ್ಲ ಯೋಜನೆಗಳ ಕಾಮಗಾರಿಗಳ ಉಳಿಕೆ ಮೊಬಲಗಿಗೆ ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಲಾಯಿತು. ಸಭೆಯಲ್ಲಿ ತಾ.ಪಂ ನಾಮನಿರ್ದೇಶಿತ ಸದಸ್ಯ ಶಶಿಕುಮಾರ್ ರೈ ಬಾಲ್ಯೊಟ್ಟು, ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಕಡಬ ತಾ.ಪಂ ಯೋಜನಾಧಿಕಾರಿ ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here