ಹೊಸ ಪ್ರಸ್ತಾವನದ ಅನುದಾನ ಲ್ಯಾಪ್ಸ್ ಆಗಬಾರದು – ತಾ.ಪಂ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸಂಧ್ಯಾ ಕೆ

0


ಪುತ್ತೂರು: ಹೊಸ ಪ್ರಸ್ತಾವನೆಗಳಿದ್ದರೆ ಅದಕ್ಕೆ ಅನುಮೋದನೆ ಪಡೆದು ಕೊಂಡು ಮುಂದಿನ ದಿನಗಳಲ್ಲಿ ಖರ್ಚು ಮಾಡಬೇಕು. ಯಾವುದೇ ಅನುದಾನ ಲ್ಯಾಪ್ಸ್ ಆಗಬಾರದು ಎಂದು ತಾ.ಪಂ ಆಡಳಿತಾಧಿಕಾರಿ ಸಂಧ್ಯಾ ಕೆ ಅವರು ಹೇಳಿದರು.


ಅವರು ಫೆ.3ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನುದಾನ ಖರ್ಚಾಗಬೇಕು. ತಿಂಗಳ ಗುರಿಗಳು ಪೂರೈಸಬೇಕು. ಜೊತೆಗೆ ಹೊಸ ಯೋಜನೆಗೆ ಪ್ರಸ್ತಾವನೆ ಸಲ್ಲಿಸಬೇಕೆಂದರು. ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮತಮ್ಮ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಯೋಜನಾಧಿಕಾರಿ ಶೈಲಜಾರವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here