ಸಾಲೆತ್ತೂರಿನ ಮದುವೆ ಮನೆಯಲ್ಲಿ ಕೊರಗಜ್ಜನನ್ನು ಹೋಲುವ ವೇಷ ಧರಿಸಿದ್ದ ವರ ಬಾಷಿತ್ ಪೊಲೀಸ್ ವಶಕ್ಕೆ

0

ವಿಟ್ಲ: ಕಳೆದ ಕೆಲದಿನಗಳ ಹಿಂದೆ ಸಾಲೆತ್ತೂರಿನ ಮದುವೆ ಮನೆಯೊಂದರಲ್ಲಿ ಮದುಮಗ ಕೊರಗಜ್ಜನನ್ನು ಹೋಲುವ ವೇಷ ಧರಿಸಿ ಕುಣಿದಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ವರ ಉಮರುಲ್ ಬಾಷಿತ್ ನನ್ನು ಕೇರಳ ರಾಜ್ಯದ ಕೊಚ್ಚಿಯ ನೆಡುಂಬನ್ ಶೇರಿ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇದೀಗ ವಿಟ್ಲ ಠಾಣಾ ಪೊಲೀಸರು ಆತನನ್ನು ಕರೆತರುತ್ತಿರುವ  ಬಗ್ಗೆ ಮಾಹಿತಿ ಲಭಿಸಿದೆ.

ಕೊಳ್ನಾಡು ಗ್ರಾಮದ ಸಾಲೆತ್ತೂರು ನಿವಾಸಿ ಅಝೀಝ್ ಎಂಬವರ ಮಗಳ ಮದುವೆ   ಮಂಜೇಶ್ವರ ತಾಲೂಕಿನ ಉಪ್ಪಳದ ಉಮರುಲ್ ಭಾಷಿತ್ ರವರ ಜೊತೆ ಜ.7ರಂದು ನಡೆದಿತ್ತು.  ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಆಗಮಿಸಿದ್ದರು. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದು, ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನನ್ನು ಹೋಲುವ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿಕೊಂಡು ವರ ಆಗಮಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯವನ್ನು ವರನ ಕಡೆಯವರೇ ಸೆರೆ ಹಿಡಿದಿದ್ದು, ಅದು ವೈರಲ್ ಆಗಿದೆ.  ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ವರ ಸಹಿತ ಆತನ ಕಡೆಯರ ವಿರುದ್ದ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು‌.

                                                       ಕೊರಗಜ್ಜನ ವೇಷ ಧರಿಸಿದ್ದ ಭಾತಿಷ್

ಮದುಮಗ ಉಮರುಲ್  ಭಾಷಿತ್ ನಿರೀಕ್ಷಣಾ ಜಾಮೀನಿಗಾಗಿ  ಮಂಗಳೂರು 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದರು. ಆದರೆ ಉಮರುಲ್ ಬಾಷಿತ್ ರವರ  ಜಾಮೀನು ಅರ್ಜಿಯನ್ನು ನ್ಯಾಯಾಲಯವು   ವಜಾ ಮಾಡಿತ್ತು.

ಘಟನೆಯನ್ನು ಗಂಭೀರವಾಗಿ ತೆಗೆದು ಕೊಂಡಿದ್ದ ವಿಟ್ಲ ಠಾಣಾ ಪೊಲೀಸರು  ತಲೆಮರೆಸಿಕೊಂಡಿರುವ ಆರೋಪಿ ಭಾಷಿತ್ ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ವಿಮಾನ ನಿಲ್ದಾಣಗಳಲ್ಲಿ  ಕಟ್ಟೆಚ್ಚರವನ್ನು ವಹಿಸಿದ್ದರು. ಈ ಮಧ್ಯೆ ನಿನ್ನೆ ತಡರಾತ್ರಿ ಕೇರಳ ರಾಜ್ಯದ ಕೊಚ್ಚಿಯ ನೆಡುಂಬನ್ ಶೇರಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಅಲ್ಲಿನ ಅಧಿಕಾರಿಗಳನ್ನು ವರನನ್ನು ಬಂದಿಸಿದ್ದು, ಇದೀಗ ವಿಟ್ಲ ಠಾಣಾ ಪೊಲೀಸರು ಆತನನ್ನು ವಶಕ್ಕೆ ಪಡೆದು ಕರೆತರುತ್ತಿದ್ದಾರೆ  ಎಂದು ತಿಳಿದುಬಂದಿದೆ. ಘಟನೆಗೆ ಸಂಬಂದಿಸಿದಂತೆ ಆರೋಪಿ ಪೊಲೀಸರ ವಶದಲ್ಲಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ. 

 

ಎನ್ನೆಂಸಿ: ಯುವ ರೆಡ್ ಕ್ರಾಸ್ ಘಟಕದಿಂದ ಜಿನೇವಾ ಒಪ್ಪಂದ ದಿನಾಚರಣೆ

LEAVE A REPLY

Please enter your comment!
Please enter your name here