ಬನ್ನೂರು ಅಲುಂಬುಡ ಕುಟುಂಬಸ್ಥರ ತರವಾಡು ಮನೆಯಲ್ಲಿ ನೇಮೋತ್ಸವ

0

 

ಪುತ್ತೂರು: ಬನ್ನೂರು ಗ್ರಾಮದ ಅಲುಂಬುಡದಲ್ಲಿರುವ ಅಲುಂಬುಡ ಕುಟುಂಬಸ್ಥರ ತರವಾಡು ಮನೆಯಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಫೆ.3 ಹಾಗೂ 4ರಂದು ನಡೆಯಿತು.


ಫೆ.3ರಂದು ಬೆಳಿಗ್ಗೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಗಣಪತಿ ಹೋಮ, ನಾಗತಂಬಿಲ, ರಕ್ತೇಶ್ವರಿ ತಂಬಿಲ ಹಾಗೂ ಮುಡಿಪು ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ, ನಂತರ ಜಾವತೆ, ಕಲ್ಲುರ್ಟಿ, ಕುಪ್ಪೆ ಪಂಜರ್ಲಿ ಮತ್ತು ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು. ಫೆ.4ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ, ಅನ್ನಸಂತರ್ಪಣೆ, ಗುಳಿಗ ದೈವದ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು. ದಿನೇಶ್ ಏನೆಕಲ್ಲು(ಜಾವತೆ), ಮೋಹನ ಶರವೂರು(ಕಲ್ಲುರ್ಟಿ),ವಿಶ್ವನಾಥ ಶರವೂರು(ಕುಪ್ಪೆ ಪಂಜುರ್ಲಿ), ರಂಜಿತ್ ಏನೆಕಲ್ಲು(ವರ್ಣರ ಪಂಜುರ್ಲಿ), ಕರುಣಾಕರ ಏನೆಕಲ್ಲು(ಧರ್ಮದೈವ ರುದ್ರಚಾಮುಂಡಿ)ಹಾಗೂ ಪ್ರಶಾಂತ್ ಬಳ್ಳಮಂಜ(ಗುಳಿಗ)ರವರು ನರ್ತನ ಸೇವೆ ಮಾಡಿದರು. ಕೆ.ಕಾರ್ತಿಕ್ ಗೌಡ ಅಂದ್ರಟ್ಟ ಡ್ಕರವರು ಕಾರ್ತಿಕೇಯರವರು ದೈವದ ಮಧ್ಯಸ್ಥರಾಗಿದ್ದರು.


ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ ಆಡಳಿತ ಮೊಕ್ತೇಸರ ರಾಮಣ್ಣ ಗೌಡ ಹಲಂಗ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ನಿಕಟಪೂರ್ವ ಅಧ್ಯಕ್ಷ ಹೆಚ್.ಡಿ.ಶಿವರಾಮ ಗೌಡ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಶ್ರೀಧರ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಬಿ.ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಪುತ್ತೂರು ಶಾಖಾ ಮೇನೇಜರ್ ಹರೀಶ್ ಗೌಡ, ಸಂಘದ ಸಿಬ್ಬಂದಿಗಳು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ ಕೆಯ್ಯೂರು, ಕೇಶವ ಅಲುಂಬುಡ, ರಮೇಶ ನೀರ್ಪಾಜೆ, ಶೀನಪ್ಪ ರೈ ಮೇಲ್ಮಜಲು, ಲಕ್ಷ್ಮಣ ಗೌಡ ಹಲಂಗ, ಧರ್ಣಪ್ಪ ಗೌಡ ನೆಕ್ಕಿಲ, ಮೌನೇಶ್ ಆನೆಮಜಲು, ಹರಿಪ್ರಸಾದ್ ಆನೆಮಜಲು, ಶೇಖರ ಆನೆಮಜಲು, ರಾಜ ನೀರ್ಪಾಜೆ ಸೇರಿದಂತೆ ಹಲವು ಮಂದಿ ಆಗಮಿಸಿದ್ದರು. ಅಲುಂಬುಡ ತರವಾಡು ಮನೆಯ ಎ.ಶಿವಣ್ಣ ಗೌಡ, ಅಲುಂಬುಡ ಸೇವಾ ಪ್ರತಿಷ್ಟಾನದ ಗೌರವಾಧ್ಯಕ್ಷ ಗುಡ್ಡಪ್ಪ ಗೌಡ ಬನ್ನೂರು, ಕೊರಗಪ್ಪ ಗೌಡ ಪಟ್ಟೆ, ಬೊಮ್ಮಣ್ಣ ಗೌಡ ಮುಕ್ರಂಪಾಡಿ, ಅಧ್ಯಕ್ಷ ನಾರಾಯಣ ಗೌಡ ಬನ್ನೂರು, ಉಪಾಧ್ಯಕ್ಷ ಈಶ್ವರ ಗೌಡ ಬಾರಿಂಜ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಗೌಡ ಸರ್ವೆ, ಖಜಾಂಜಿ ವಾಮನ ಗೌಡ ಎ.ವಿ.ಅಲುಂಬುಡ, ಜೊತೆ ಕಾರ್ಯದರ್ಶಿಗಳಾದ ಸುರೇಶ್ ಗೌಡ ಅಲುಂಬುಡ, ಗಂಗಾಧರ ಗೌಡ ಅಲುಂಬುಡ, ಹೊನ್ನಪ್ಪ ಗೌಡ ಬನ್ನೂರು ಎ.ವಿ.ನಾರಾಯಣ ಗೌಡ ಅಲುಂಬುಡ, ಕೆ.ಪದ್ಮಪ್ಪ ಗೌಡ ರಾಮಕುಂಜ, ಬೆಳಿಯಪ್ಪ ಗೌಡ ಸರ್ವೆ, ಸುರೇಶ್ ಗೌಡ ಸರ್ವೆ, ಲೋಕೇಶ ಗೌಡ ಸರ್ವೆ ಸೇರಿದಂತೆ ಅಲುಂಬುಡ ತರವಾಡು ಮನೆಯ ಬನ್ನೂರು, ಮುಕ್ರಂಪಾಡಿ, ಬಾರಿಂಜ, ಸರ್ವೆ, ಓನಡ್ಕ ಮನೆಯವರು ಪಾಲ್ಗೊಂಡಿದ್ದರು.

 

 

 

 

 

 

LEAVE A REPLY

Please enter your comment!
Please enter your name here