ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಹೊರೆ ಕಾಣಿಕೆ ಸಮರ್ಪಣೆ, ಫೆ.7, 8 ಜಾತ್ರೋತ್ಸವ

0

ಪುತ್ತೂರು: ಫೆ. 7 ಮತ್ತು 8ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಫೆ. 6 ರಂದು ಊರ ಭಕ್ತಾಧಿಗಳಿಂದ ಹೊರೆ ಕಾಣಿಕೆ ಸಮರ್ಪಣೆಯು ಸವಣೂರು ಪುದುಬೆಟ್ಟು ಜಿನಮಂದಿರದಿಂದ ಹೊರಟು ಸವಣೂರು ಮುಖ್ಯರಸ್ತೆಯಾಗಿ ದೇವಾಲಯಕ್ಕೆ ತಲುಪಿತು. ಸವಣೂರು ಜಿನಮಂದಿರದ ವಠಾರದಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತುರವರು ತೆಂಗಿನಕಾಯಿ ಒಡೆಯುವ ಮೂಲಕ ಹೊರೆ ಕಾಣಿಕೆಗೆ ಚಾಲನೆಯನ್ನು ನೀಡಿದರು.

ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಉತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಸವಣೂರಿನ ಹಿರಿಯ ಉದ್ಯಮಿ ಎನ್.ಸುಂದರ ರೈ ಸವಣೂರು, ತಾರಾನಾಥ ಶೆಟ್ಟಿ ಸವಣೂರುಗುತ್ತು, ಉತ್ಸವ ಸಮಿತಿಯ ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಕಾರ್‍ಯದರ್ಶಿ ದಯಾನಂದ ಮಾಲೆತ್ತಾರು, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಸುಣ್ಣಾಜೆ, ನಿಕಟಪೂರ್ವಾಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಆರ್.ಕೋಡಿಬೈಲು, ಸವಣೂರು ಗ್ರಾಮದೈವ ಜೀರ್ಣ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಕೆ.ಆರ್.ಕೋಡಿಬೈಲು, ಕಾರ್‍ಯದರ್ಶಿ ಗಣೇಶ್ ಪಟ್ಟೆ, ಕೋಶಾಧಿಕಾರಿ ರಾಘವ ಗೌಡ ಗುರುಂಪುತ್ತಾರು, ಮಾಜಿ ಅಧ್ಯಕ್ಷ ಬೆಳಿಯಪ್ಪ ಗೌಡ ಚೌಕಿಮಠ, ಉತ್ಸವ ಸಮಿತಿಯ ಉಪಾಧ್ಯಕ್ಷ ಗಂಗಾಧರ್ ಸುಣ್ಣಾಜೆ, ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಸತೀಶ್ ಬಲ್ಯಾಯ ಕನಡಕುಮೇರು, ಬಾಬು ಗೌಡ ಕೆಯ್ಯೂರು, ನಾರಾಯಣ ಪೂಜಾರಿ ಕೆಯ್ಯೂರು, ಮೂಡಂಬೈಲು ಜಯರಾಮ ರೈ ಕನಡಕುಮೇರು, ಕಿರಣ್ ಕೋಡಿಬೈಲು, ಸವಣೂರು ಶ್ರೀ ಶಾರದಾಂಭಾ ಸೇವಾ ಸಮಿತಿಯ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ ಸೊಂಪಾಡಿ, ನಿತ್ಯಾನಂದ ಸವಣೂರು, ರಾಮಕೃಷ್ಣ ಪ್ರಭು ಸವಣೂರು, ಆದರ್ಶ.ಜೆ. ರೈ ಕನಡಕುಮೇರು, ಹರೀಶ್ ಗೌಡ ಸುಣ್ಣಾಜೆ, ಕಿಶೋರ್ ಕೋಡಿಬೈಲು, ಕೀರ್ತನ್ ಕೋಡಿಬೈಲು, ಜಯಶ್ರೀ ಅಡೀಲು, ಲೋಚನ್ ಅಡೀಲು, ವರ್ಷಣಿ ಅಡೀಲು, ಶಿವಪ್ರಸಾದ್ ಬಂಬಿಲ, ಚಂದ್ರ ಗೌಡ ಪಟ್ಟೆ, ನಾರಾಯಣ ಪೂಜಾರಿ ಮಾಲೆತ್ತಾರು, ಕೃಷ್ಣಪ್ಪ ಗೌಡ ಮಾಲೆತ್ತಾರು, ಶ್ರೀಧರ್ ಗೌಡ ಕೊಯಕುಡೆ, ಕೇಶವ ಗೌಡ ಕೊಯಕುಡೆ, ಮೀನಾಕ್ಷಿ ಶೆಟ್ಟಿ ಬಾರಿಕೆ, ಮಮತಾ ಬೇರಿಕೆ, ರೋಶನ್ ಮಾಲೆತ್ತಾರು, ಪ್ರಕಾಶ್ ಮಾಲೆತ್ತಾರು, ದಾಮೋದರ್ ಗೌಡ ಪಟ್ಟೆ, ಬಾಳಪ್ಪ ಗೌಡ ಪಟ್ಟೆ, ವಿಠಲ ಗೌಡ ಪಟ್ಟೆ, ಜಗನ್ನಾಥ ಸಾಲಿಯಾನ್ ನಾಲ್ಗುತ್ತು, ರುಕ್ಮಯ್ಯ ಗೌಡ ಹೊಸವೊಕ್ಲು, ನಿತೀಶ್ ಹೊಸವೊಕ್ಲು, ವೆಂಕಪ್ಪ ಗೌಡ ಮಾಲೆತ್ತಾರು, ಕಾಂತಪ್ಪ ಪೂಜಾರಿ ಚೌಕಿಮಠ, ವಿಜಯ ಗೌಡ ಚೌಕಿಮಠ, ನಂದಕುಮಾರ್ ಮಾಲೆತ್ತಾರು ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

ವಿಷ್ಣುಪುರದ ಕಟ್ಟೆಯಲ್ಲಿ ಗಣಹೋಮ
ಜಾತ್ರೋತ್ಸವದ ಅಂಗವಾಗಿ ಫೆ. 6 ರಂದು ಸವಣೂರು ವಿಷ್ಣುಪುರದಲ್ಲಿರುವ ಕಟ್ಟೆಯಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಅರ್ಚಕ ನಾರಾಯಣ ಬಡೆಕಿಲ್ಲಾಯ ನೇತ್ರತ್ವದಲ್ಲಿ ಗಣಹೋಮ ನಡೆಯಿತು. ಸಹ ಅರ್ಚಕ ಕಾರ್ತಿಕ್ ಬಡೆಕಿಲ್ಲಾಯ ಸಹಕರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಪುಟ್ಟಣ್ಣ ಗೌಡ ಅಂಗಡಿಮೂಲೆ, ಸತೀಶ್ ಅಂಗಡಿಮೂಲೆ, ಹರಿಪ್ರಸಾದ್ ಅಂಗಡಿಮೂಲೆ, ಗಣೇಶ್ ಪಟ್ಟೆ, ರವೀಂದ್ರನಾಥ ರೈ ನೋಲ್ಮೆ, ಪ್ರಜ್ವಲ್ ಕೆ.ಆರ್. ಕೋಡಿಬೈಲು, ಪ್ರಮೋದ್ ಕೆ.ಆರ್ ಕೋಡಿಬೈಲು, ಸತೀಶ್ ಬಲ್ಯಾಯ ಕನಡಕುಮೇರು ಸಹಿತ ಅನೇಕ ಮಂದಿ ಭಾಗವಹಿಸಿದ್ದರು.

ದೇವಾಲಯಕ್ಕೆ ಹೂವಿನ ಅಲಂಕಾರ
ಬಾಬು ಗೌಡ ಕೆಯ್ಯೂರು ಮತ್ತು ನಾರಾಯಣ ಪೂಜಾರಿ ಕೆಯ್ಯೂರುರವರ ಸೇವಾರ್ಥವಾಗಿ ದೇವಾಲಯಕ್ಕೆ ಹೂವಿನ ಅಲಂಕಾರ ನಡೆಯಲಿದೆ.

ಫೆ.7, 8 ದೇವಾಲಯದಲ್ಲಿ ಜಾತ್ರೋತ್ಸವ
ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಫೆ. 7 ಮತ್ತು 8 ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಜಾತ್ರೋತ್ಸವ ಜರಗಲಿದೆ.

ಫೆ. 7 ರಂದು ಪದ್ಮನಾಭ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪರಿವಾರ ದೇವರುಗಳ ಪ್ರತಿಷ್ಠಾದಿನದ ಪೂಜೆ, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ಜರಗಲಿದೆ. ಶ್ರೀ ದೇವರ ಭಕ್ತಾಭಿಮಾನಿಗಳು ಅನ್ನದಾನದ ಸೇವಾಕರ್ತರಾಗಿರುತ್ತಾರೆ. ಸಂಜೆ ದೀಪಾರಾಧನೆ, ತಾಯಂಬಕ ಸೇವೆ, ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತಕಟ್ಟೆ ಪೂಜೆ ಹಾಗೂ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಫೆ. 8 ರಂದು ಬೆಳಿಗ್ಗೆ ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ದೇವಾಲಯದ ಉತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈಯವರ ಅನ್ನದಾನದ ಸೇವಾಕರ್ತರಾಗಿರುತ್ತಾರೆ. ರಾತ್ರಿ ಶ್ರೀ ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ಜರಗಲಿದೆ. ಬೆಂಗಳೂರಿನ ಕವಿತಾ ವಿ.ಶೆಟ್ಟಿ ಮತ್ತು ದೇಷ್ನಾ ಶೆಟ್ಟಿರವರು ಅನ್ನದಾನದ ಸೇವಕರ್ತರಾಗಿರುತ್ತಾರೆ ಎಂದು ದೇವಾಲಯದ ಆಡಳಿತದಾರ ಸವಣೂರುಗುತ್ತು ಡಾ.ರತ್ನಾಕರ ಶೆಟ್ಟಿ ಮತ್ತು ಕುಟುಂಬಸ್ಥರು, ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಉತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಕಾರ್‍ಯದರ್ಶಿ ದಯಾನಂದ ಮಾಲೆತ್ತಾರು, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಸುಣ್ಣಾಜೆರವರುಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here