ಶ್ರೀ ಕ್ಷೇತ್ರ ದೈಪಿಲದಲ್ಲಿ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಚಾಲನೆ- ಭವ್ಯ ಮೆರವಣಿಗೆ ಮೂಲಕ ಹಸಿರುವಾಣಿ ಸಮರ್ಪಣೆ- ಧಾರ್ಮಿಕ ಸಭೆ- ಗೌರವಾರ್ಪಣೆ

0

 

ಕಾಣಿಯೂರು: ಚಾರ್ವಾಕ ಗ್ರಾಮದ ದೈಪಿಲ ಶ್ರೀ ಕ್ಷೇತ್ರದಲ್ಲಿ ಗ್ರಾಮ ದೈವ ಶಿರಾಡಿ ರಾಜನ್ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ದೈವಸ್ಥಾನದಲ್ಲಿ ಗ್ರಾಮ ದೈವ ಶಿರಾಡಿ ರಾಜನ್ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ಕಟ್ಟೆಗಳ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ಮತ್ತು ಮೂಲಸ್ಥಾನದಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ದೈವದ ಪ್ರತಿಷ್ಠೆ ಕಾರ್ಯಕ್ರಮದ ಪ್ರಯುಕ್ತ ಊರವರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ಫೆ.6ರಂದು ನಡೆಯಿತು. ಫೆ. 6 ರಿಂದ ಫೆ. 8ರವರೆಗೆ ಕ್ಷೇತ್ರದಲ್ಲಿ ನಡೆಯಲಿರುವ ದೈವದ ಪ್ರತಿಷ್ಠಾ ಕಾರ್ಯಕ್ರಮವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಫೆ. 6ರಂದು ಬೆಳಿಗ್ಗೆ ಅರುವಗುತ್ತಿನ ಚಾವಡಿಯಲ್ಲಿ ಗಣಹೋಮ ಹಾಗೂ ಪ್ರಾರ್ಥನೆ ನಡೆದ ಬಳಿಕ ಅರುವಗುತ್ತಿನಿಂದ ನಾಣಿಲ, ಮುದುವ ಮೂಲಕ ಕಾಣಿಯೂರು, ಬರೆಪ್ಪಾಡಿ ಮುಖ್ಯರಸ್ತೆಯಾಗಿ ಊರವರಿಂದ ಹಸಿರು ಹೊರೆಕಾಣಿಕೆ ಶ್ರೀ ಕ್ಷೇತ್ರಕ್ಕೆ ತಲುಪಿತು. ಸಂಜೆ ತಂತ್ರಿ ಪರಿವಾರ ಅವರ ಆಗಮನ, ದೇವತಾ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಬಿಂಬ ಪರಿಗ್ರಹ, ವಾಸ್ತು ರಾಕ್ಷೆಘ್ನ ಹೋಮ, ವಾಸ್ತು ಬಲಿ, ಬಳಿಕ ಅನ್ನಸಂತರ್ಪಣೆ ನಡೆಯಿತು. ಚಂದ್ರಕಲಾ ಜಯರಾಮ್ ಅರುವಗುತ್ತು, ಅರುವಗುತ್ತಿನ ಯಜಮಾನರಾದ ಪ್ರದೀಪ್. ಆರ್.ಗೌಡ ಮತ್ತು ನಾಲ್ಕು ಮನೆಯವರು, 14 ವರ್ಗದವರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಧಾರ್ಮಿಕ ಸಭೆ: ಶ್ರೀ ಕ್ಷೇತ್ರ ದೈಪಿಲದಲ್ಲಿ ನಡೆದ ದಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅರುವಗುತ್ತಿನ ಯಜಮಾನರಾದ ಪ್ರದೀಪ್. ಆರ್. ಗೌಡ ವಹಿಸಿದ್ದರು. ಚಂದ್ರಕಲಾ ಜಯರಾಮ್ ಅರುವಗುತ್ತು, ವಚನಾ ಪ್ರದೀಪ್, ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಪ್ರವೀಣ್ ಕುಂಟ್ಯಾನ, ಕುಶಾಲಪ್ಪ ಗೌಡ ದೈಪಿಲ, ನಾಲ್ಕು ಮನೆಯವರಾದ ಶೇಖರ ಗೌಡ ಅಂಬುಲ, ಕುಶಾಲಪ್ಪ ಗೌಡ ಬೈಲು, ಶೇಖರ ಗೌಡಮನೆ, ರಾಮಣ್ಣ ಗೌಡ ಖಂಡಿಗ ಉಪಸ್ಥಿತರಿದ್ದರು. ಪದ್ಮರಾಜ್ ಬಿ.ಸಿ ಚಾರ್ವಾಕ ಪ್ರಾರ್ಥಿಸಿದರು. ವಿಶ್ವನಾಥ ಅಂಬುಲ ಸ್ವಾಗತಿಸಿ, ಧರ್ಣಪ್ಪ ಗೌಡ ಅಂಬುಲ ವಂದಿಸಿದರು. ವಿಜಿತ್ ಮಾಚಿಲ, ಪ್ರಶಾಂತ್ ಅಂಬುಲ ಕಾರ್ಯಕ್ರಮ ನಿರೂಪಿಸಿದರು.


ಗೌರವಾರ್ಪಣೆ: ಶ್ರೀ ಕ್ಷೇತ್ರ ದೈಪಿಲ ಗ್ರಾಮ ದೈವ ಶಿರಾಡಿ ರಾಜನ್ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಿಲಾಯಿತು.


ಸಚಿವರಿಂದ ಕಾರ್ಯಾಲಯ ಉದ್ಘಾಟನೆ: ದೈಪಿಲ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಸುಳ್ಯ ಕ್ಷೇತ್ರದ ಶಾಸಕರು ಆಗಿರುವ ಎಸ್ ಅಂಗಾರರವರು ಕಾರ್ಯಾಲಯವನ್ನು ಉದ್ಘಾಟಿಸಿದರು.

ಇಂದು ಕ್ಷೇತ್ರದಲ್ಲಿ ದೈವದ ಪ್ರತಿಷ್ಠೆ:
ದೈಪಿಲ ಶ್ರೀ ಕ್ಷೇತ್ರದಲ್ಲಿ ಫೆ. 7ರಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಬಿಂಬ ಶುದ್ಧಿ, ಅನುಜ್ಞಾ ಕಲಶ ಪೂಜೆ, ಕಲಶಾಭಿಷೇಕ ಹಾಗೂ ಪ್ರಾರ್ಥನೆ, ಚಕ್ರವರ್ತಿ ಕೊಡಮಣಿತ್ತಾಯ ದೈವದ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗ್ರಾಮ ದೈವದ ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವದ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ

LEAVE A REPLY

Please enter your comment!
Please enter your name here