34-ನೆಕ್ಕಿಲಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಬಿಸಾಡುವವರ ಪತ್ತೆ – 6 ಮಂದಿಯಿಂದ 13 ಸಾವಿರ ರೂಪಾಯಿ ದಂಡ ವಸೂಲಿ

0

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆದು ಹೋಗುವವರನ್ನು ಪತ್ತೆ ಹಚ್ಚಿರುವ ಗ್ರಾಮ ಪಂಚಾಯಿತಿ ಕೃತ್ಯ ಎಸೆದವರ ವಿರುದ್ಧ ಪ್ರಕರಣ ದಾಖಲಿಸಿ, 13 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತ್ಯಾಜ್ಯಗಳನ್ನು ತಂದು ಎಸೆಯುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಯ್ಯ, ಅಧ್ಯಕ್ಷ ಪ್ರಶಾಂತ್ ಹಾಗೂ ಸದಸ್ಯ ಹರೀಶ್ ದರ್ಬೆ ತ್ಯಾಜ್ಯ ಎಸೆದವರನ್ನು ದಾಖಲೆ ಸಮೇತ ಪತ್ತೆ ಮಾಡಿ, ಅವರನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆಸಿಕೊಂಡು 6 ಮಂದಿಯಿಂದ 13ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.

ಗುಪ್ತ ಮಾಹಿತಿ ಆಧಾರದಲ್ಲಿ ಪತ್ತೆ:
“ಪಂಚಾಯಿತಿಯಲ್ಲಿ ತ್ಯಾಜ್ಯ ಘಟಕ ನಿರ್ಮಿಸಲಾಗಿದೆ, ಅದರಂತೆ ವಾಹನದ ಮೂಲಕ ತ್ಯಾಜ್ಯ ಸಂಗ್ರಹವೂ ಮಾಡಲಾಗುತ್ತಿದೆ, ಇದನ್ನು ಸಮರ್ಪಕವಾಗಿ ಬಳಸದ ಕೆಲವರು ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತ್ಯಾಜ್ಯ ಬಿಸಾಡಿ ಹೋಗುತ್ತಿರುವುದು ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮದ ಎಚ್ಚೆರಿಯೂ ನೀಡಲಾಗಿದೆ, ಆದರೂ ಕೆಲವರು ಮತ್ತೆ ತ್ಯಾಜ್ಯ ಎಸೆಯುವ ಕೃತ್ಯ ನಡೆಸುತ್ತಿದ್ದು, ಅಂತಹವರ ಪತ್ತೆಗಾಗಿ ಸಿಸಿ. ಕೆಮರಾ ಹಾಗೂ ಗುಪ್ತ ಮಾಹಿತಿ ಸಂಗ್ರಹಿಸಿಸುತ್ತಿದ್ದು, ಅದರ ಆಧಾರದಲ್ಲಿ ಕೃತ್ಯ ಎಸೆದವರನ್ನು ಪತ್ತೆ ಮಾಡಿ ದಂಡ ವಿಧಿಸಿರುವುದಾಗಿ” ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಯ್ಯ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಮಾಹಿತಿ ನೀಡಿದರವರ ಹೆಸರು ಗುಪ್ತವಾಗಿ ಇಡಲಾಗುವುದು-ಅಧ್ಯಕ್ಷ
ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಬಿಸಾಡುವವರ ಬಗ್ಗೆ ತೀವೃ ನಿಗಾ ಇಡಲಾಗಿದೆ. ಅದಗ್ಯೂ ಯಾರಾದರೂ ಕಸ, ತ್ಯಾಜ್ಯ ಎಸೆಯುವುದನ್ನು ಸಾರ್ವಜನಿಕರು ನೋಡಿದ್ದಲ್ಲಿ ಅಂತವರ ಬಗ್ಗೆ ಪಂಚಾಯಿತಿ ಅಧ್ಯಕ್ಷರು ಯಾ ಪಿಡಿಒ.ರವರಿಗೆ ಮಾಹಿತಿ ನೀಡಬಹುದಾಗಿದೆ. ಅಂತಹವರ ಹೆಸರನ್ನು ಗುಪ್ತವಾಗಿ ಇಡಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here