ಹಲವು ಮಂದಿ ಛಾಯಾಗ್ರಾಹಕರಿಗೆ ಗುರುವಾಗಿದ್ದ ಕಡಬದ ರಮ್ಯ ಸ್ಟುಡಿಯೋ ಮಾಲಕ ಶಿವರಾಮ ಗೌಡ ಮುಂಗ್ಲಿಮನೆ ನಿಧನ

0


ಪುತ್ತೂರು: ಸಾವಿರ ಶಬ್ದ ಹೇಳುವುದನ್ನು ಒಂದು ಚಿತ್ರ ಹೇಳುತ್ತದೆ ಎಂಬಂತೆ ಪೋಟೋಗ್ರಫಿಯಿಂದಲೇ ಜೀವನ ಕಟ್ಟಿಕೊಂಡು ಹಲವು ಮಂದಿ ಛಾಯಾಗ್ರಾಹಕರಿಗೆ ಗುರುವಾಗಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪೊಟೋ ಗ್ರಾಫರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ  ಕಡಬದ ರಮ್ಯ ಸ್ಟುಡಿಯೋ ಮಾಲಕ ಶಿವರಾಮ ಗೌಡ ಮುಂಗ್ಲಿಮನೆ (62ವ) ರವರು ಫೆ.12 ರ ನಸುಕಿನ ಜಾವ ನಿಧನರಾದರು.

ಮೂಲತಃ ಪುತ್ತೂರು ಕಬಕ ಗ್ರಾಮದ ಮುಂಗ್ಲಿಮನೆ ನಿವಾಸಿ ಶಿವರಾಮ ಗೌಡ ಅವರು ಕಡಬದಲ್ಲಿ ಸ್ಟುಡಿಯೋ ಮಾಡಿ ಅಲ್ಲೇ ವಾಸ್ತವ್ಯ ಹೊಂದಿದ್ದರು. ಹಲವು ವರ್ಷಗಳಿಂದ ಪೊಟೋಗ್ರಫಿಯಲ್ಲಿ ಪರಿಣಿತಿ ಹೊಂದಿದ್ದರು. ಅವರು ಡಯಾಲಿಸಿಸ್ ಗಾಗಿ ಮಂಗಳೂರು ಆಸ್ಪತ್ರೆ ತೆರಳಿದ್ದ ವೇಳೆ ಅಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. ಶಿವರಾಮ ಗೌಡ ಅವರು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಸದಸ್ಯರಾಗಿದ್ದು, ಕಡಬ ಗೌಡ ಸಂಘದ ಸಂಚಾಲಕರಾಗಿದ್ದರು. ಪೊಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಲಯನ್ಸ್, ಜೇಸಿಐ, ವರ್ತಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ನಿಲಾವತಿ, ಪುತ್ರಿ ಮೆಡಿಕಲ್ ಓದುತ್ತಿರುವ ಕೀರ್ತಿ, ಸಹೋದರರಾದ ಬಾಲಕೃಷ್ಣ ಗೌಡ, ಪುತ್ತೂರು ಗೌಡ ಸೇವಾ ಸಂಘದ ಪದಾಧಿಕಾರಿ ರವಿ ಮುಂಗ್ಲಿಮನೆ, ಜನಾರ್ದನ, ಭಾಸ್ಕರ್, ಸೋಮಶೇಖರ್, ನ್ಯಾಯವಾದಿ ತೀರ್ಥಪ್ರಸಾದ್, ಯುವರಾಜ್, ಶಶಿಧರ್, ಸಹೋದರಿ ರಮ್ಯ ಅವರನ್ನು ಅಗಲಿದ್ದಾರೆ.

ಪುತ್ತೂರು ಮುಂಗ್ಲಿಮನೆಯಲ್ಲಿ ಅಂತ್ಯಕ್ರಿಯೆ:
ಶಿವರಾಮ ಗೌಡ ಮುಂಗ್ಲಿಮನೆಯವರ ಮೃತ ದೇಹವನ್ನು ಕಡಬಕ್ಕೆ ಕೊಂಡೊಯ್ದು ಅಲ್ಲಿ ಅಂತಿಮ ನಮನ ಸಲ್ಲಿಸಿ ಬೆಳಿಗ್ಗೆ ಪುತ್ತೂರು ಕಬಕ ಗ್ರಾಮದ ಮುಂಗ್ಲಿಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಮೃತರ ಸಹೋದರ ರವಿ ಮುಂಗ್ಲಿಮನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here