2 ವರ್ಷದ ಹಿಂದೆ ಕೋವಿಡ್ ಸಂದರ್ಭದಲ್ಲಿ ಜಾತ್ರ ಗೊನೆ ಮುಹೂರ್ತ ವಿಡಿಯೊ ಎಡಿಟ್ ಮಾಡಿ ವೈರಲ್ ಮಾಡಿದ ಪ್ರಕರಣದ ಆರೋಪಿ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಮಂಗಲ ನಿವೃತಿಯಂದೇ ಪೊಲೀಸ್ ವಶಕ್ಕೆ !

0

 

 

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ೨೦೨೦ ರ ಎಪ್ರಿಲ್ ೧ ರಂದು ಕೋವಿಡ್ ಸಂದರ್ಭದಲ್ಲಿ ಸಾಂಪ್ರದಾಯಿಕ‌ ಜಾತ್ರೆಗೆ ನಡೆದ ಗೊನೆ ಮುಹೂರ್ತದ ವಿಡಿಯೋವನ್ನು ವಿದೇಶದಲ್ಲಿದ್ದ ಪುತ್ತೂರಿನ ವ್ಯಕ್ಯಿ ಖಾಸಗಿ ಚಾನೆಲ್ ನ ಲೋಗೊ ಬಳಸಿಕೊಂಡು ಎಡಿಟ್ ಮಾಡಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂದಿಸಿ ಆರೋಪಿ ನೆಹರುನಗರದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯ ನಿವೃತಿ ರಾಶಿಯ ದಿನವೇ ಆರೋಪಿ ಪೊಲೀಸ್ ವಶವಾಗಿದ್ದಾರೆ.
ದೇವಳದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ನೀಡಿದ ದೂರಿನಂತೆ ಪೊಲೀಸರು ೨೦೨೦ ರ ಎಪ್ರಿಲ್ ತಿಂಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆರೋಪಿ ವಿದೇಶದಲ್ಲಿದ್ದು ಆತನ ವಿರುದ್ದ ಎಲ್ ಒ ಸಿ ಮಾಡಲಾಗುತ್ತು. ಇದೀಗ ಆತ ವಿದೇಶದಿಂದ ವಾಪಾಸಾಗುತ್ತಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here