ಧರ್ಮ ನೇಮೋತ್ಸವಕ್ಕೆ ಸಜ್ಜಾಗುತ್ತಿರುವ ಪುತ್ತೂರು ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಲ್ಲಿ ಪೂರ್ವಭಾವಿ ಸಿದ್ಧತೆ

0

  • ನೇಮೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ -ರಾಧಾಕೃಷ್ಣ ನಾಯಕ್

ಪುತ್ತೂರು: ಫೆ.18ರಿಂದ 20ರ ವರೆಗೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಲ್ಲಿ ಕೊಟ್ಟಿಬೆಟ್ಟು ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಡೆಯುವ ಭೂಮಿ ದೈವ ರಕ್ತೇಶ್ವರಿ, ಏಳ್ನಾಡು ದೈವ ಪಿಲಿಚಾಮುಂಡಿ, ಧರ್ಮದೈವ ಶ್ರೀಜೂಮಾದಿ ಬಂಟ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ, ಬೈರವ ದೈವಗಳ ಧರ್ಮನೇಮೋತ್ಸವಕ್ಕೆ ಪೂರ್ವಭಾವಿಯಾಗಿ ಟ್ರಸ್ಟ್‌ನ ಪದಾಧಿಕಾರಿಗಳಿಂದ, ಕುಟುಂಬದ ಸದಸ್ಯರಿಂದ, ಭಕ್ತರಿಂದ ವಿವಿಧ ತಯಾರಿಗಳು ಕರಸೇವೆಯ ಮೂಲಕ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದೆ.

ಧರ್ಮನೇಮೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ಪುತ್ತೂರಿನ ಹೃದಯ ಭಗದಲ್ಲಿರುವ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆಯಲ್ಲಿ 3 ದಿನಗಳ ಕಾಲ ನಡೆಯುವ ಧರ್ಮನೇಮೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ. ಸಂಪ್ರದಾಯ ಬದ್ದವಾಗಿ, ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಡೆಯಲು ನಮ್ಮೆಲ್ಲರ ಏಕ ಮನಸ್ಸಿನ ತಯಾರಿ ಮತ್ತು ದುಡಿಮೆಯಿಂದ ಸಾಧ್ಯ ಇದಕ್ಕಾಗಿ ನಾವು ಶ್ರಮಿಸಬೇಕೆಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯ ಯಜಮಾನ ಕೆ. ರಾಧಕೃಷ್ಣ ನಾಯಕ್ ಪೂರ್ವ ಸಿದ್ಧತೆಯ ವೇಳೆ ತಿಳಿಸಿದರು.

ಸಂಕ್ರಮಣ ತಂಬಿಲ
ಫೆ.12ರ ಸಂಕ್ರಮಣದಂದು ಕೊಟ್ಟಿಬೆಟ್ಟು ಏಳ್ನಾಡು ಗುತ್ತು ಮನೆಯಲ್ಲಿ ತಂಬಿಲ ಸೇವೆ ಕುಟುಂಬಸ್ಥರ ಸಮ್ಮಖದಲ್ಲಿ ನಡೆಯಿತು. ಪ್ರತೀ ತಿಂಗಳ ಸಂಕ್ರಮಣದಂದು ಇಲ್ಲಿ ತಂಬಿಲ ಸೇವೆ ನಡೆಯುತ್ತದೆ.

LEAVE A REPLY

Please enter your comment!
Please enter your name here