ಬಾಲವನದಲ್ಲಿ ಕನ್ನಡ ಚಟುವಟಿಕೆಗೆ ಬಾಡಿಗೆ ಕೊಡುವುದು ದೊಡ್ಡ ದುರಂತ – ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಪದಸ್ವೀಕಾರ ಸಮಾರಂಭದಲ್ಲಿ ಖಂಡನೆ

0

ಪುತ್ತೂರು: ಫೆ.12ರಂದು ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ| ಶಿವರಾಮ ಕಾರಂತ ಬಾಲವನದ ಬಯಲು ರಂಗಮಂದಿರದಲ್ಲಿ ನಡೆದ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭಕ್ಕೆ ಬಾಡಿಗೆ ಕೊಡುವ ಮೂಲಕ ಕನ್ನಡ ಚಟುವಟಿಕೆಗೂ ಬಾಡಿಗೆ ಕೊಡುವುದು ದೊಡ್ಡ ದುರಂತ. ಇದನ್ನು ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಖಂಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ನಿಕಟ ಪೂರ್ವ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ್ ಅವರು ಪದಸ್ವೀಕಾರ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತಿನಲ್ಲಿ ವಿಚಾರ ಮುಂದಿಟ್ಟರು. ಈ ವೇಳೆ ಸಭೆಯಲ್ಲಿ ಈ ಕುರಿತು ಖಂಡಿಸಬೇಕೆಂಬ ಮಾತು ಕೇಳಿ ಬಂತು.

LEAVE A REPLY

Please enter your comment!
Please enter your name here