ಬೊಳುವಾರಿನಲ್ಲಿರುವ ಬ್ಯಾಂಕ್ ಸ್ಥಳಾಂತರ !!

0

  • ಸ್ಥಳಾಂತರಿಸಬಾರದಾಗಿ ಗ್ರಾಹಕರಿಂದ ಯೂನಿಯನ್ ಬ್ಯಾಂಕ್‌ಗೆ ಮನವಿ

ಪುತ್ತೂರು: ಬೊಳುವಾರಿನಲ್ಲಿ ಕಳೆದ 40 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಕಾರ್ಪೋರೇಶನ್ ಬ್ಯಾಂಕ್ ಇದೀಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವಾಗಿ ಬದಲಾವಣೆಯಾದ ಬಳಿಕ ಬೇರೆ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ ಎಂಬ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ಸ್ಥಳಾಂತರಿಸಬಾರದಾಗಿ ಗ್ರಾಹಕರು ಮತ್ತು ಸಾರ್ವಜನಿಕರು ಯೂನಿಯನ್ ಬ್ಯಾಂಕ್‌ನ ರೀಜಿನಲ್ ಮೇನೇಜರ್‌ಗೆ ಮನವಿ ಸಲ್ಲಿಸಿದ್ದಾರೆ.

ಬೊಳುವಾರಿನಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ಕೃಷಿಕರು, ವಾಣಿಜ್ಯ ಉದ್ಯಮದವರು, ವರ್ತಕರು ಖಾತೆ ಹೊಂದಿದ್ದು, ಜನರಿಗೆ ಅನುಕೂಲವಾಗುತ್ತಿತ್ತಲ್ಲದೆ ಬಸ್ ತಂಗುದಾಣವು ಹತ್ತಿರದಲ್ಲಿದ್ದು, ವಾಹನ ಪಾರ್ಕಿಂಗ್ ಸೌಲಭ್ಯವೂ ಇರುವುದರಿಂದ ಬಹಳ ಅನುಕೂಲವಾಗುತ್ತಿತ್ತು. ಇದೀಗ ಶಾಖೆಯನ್ನು ಪ್ರಧಆನ ರಸ್ತೆಯ ಬಳಿಯ ನವಾಝ್ ಕಾಂಪ್ಲೆಕ್ಸ್‌ಗೆ ಬದಲಾವಣೆ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಅಲ್ಲಿ ಸಾಕಷ್ಟು ಸ್ಥಳವಕಾಶ ಇರುವುದಿಲ್ಲ. ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ ಈ ನಿಟ್ಟಿನಲ್ಲಿ ಈಗಿರುವ ಸ್ಥಳದಿಂದ ಬ್ಯಾಂಕ್ ಅನ್ನು ಸ್ಥಳಾಂತರಿಸಬಾರದು ಎಂದು ಬ್ಯಾಂಕ್‌ನ ಗ್ರಾಹಕರು ಮತ್ತು ಸಾರ್ವಜನಿಕರು ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here