ಬೆಳ್ಳಾರೆ : ಪಿಎಫ್‌ಐ ಕಚೇರಿಗೆ ತಹಶೀಲ್ದಾರ್ ದಾಳಿ – ಕಚೇರಿಗೆ ಬೀಗ

0

ಬೆಳ್ಳಾರೆ ಝಕರಿಯ ಮಸ್ಜಿದ್ ಎದುರುಗಡೆ ಇರುವ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ನಿಷೇಧಿತ ಸಂಘಟನೆಯ ಮೇಲೆ ಸೆ.28ರ ರಾತ್ರಿ 10.46ಕ್ಕೆ ತಹಶೀಲ್ದಾರ್ ದಾಳಿ ನಡೆಸಿ, 2 ಕಬ್ಬಿಣದ ಮೇಜು, 38 ಫೈಬರ್ ಚಯರ್, 5 ಮರದ ಚೆಯರ್, ೩ ಬಹುಮಾನ ಟ್ರೋಫಿ, 1 ವಿದ್ಯುತ್ ಟೇಬಲ್ ಲ್ಯಾಂಪ್, 75 ಎಸ್‌ಡಿಪಿಐ ಬಟ್ಟೆಶಾಲು, 1 ಪಿಎಫ್‌ಐ ದೊಡ್ಡ ಬ್ಯಾನರ್, 1 ಬಿಜೆಪಿ ವಿರುದ್ಧ ಬ್ಯಾನರ್, 1 ಪಿಎಫ್ ಐ ಚಿಹ್ನೆ ಇರುವ ಗೋಡೆ ಗಡಿಯಾರ, 1 ಭಾರತೀಯ ರಾಷ್ಟ್ರಧ್ವಜ, 1 ಕೊಡೆ, 1 ಟ್ವಿಟ್ಟರ್ ಕಲಿಸುವ ಚಿಹ್ನೆ ಇರುವ ಬ್ಲಾಕ್ ಬೋರ್ಡ್, 1 ಕೆಂಪು ಹಸಿರು ಬಣ್ಣದಿಂದ ಸುತ್ತಿದ ಕಬ್ಬಿಣದ ಧ್ವಜ ಕಂಬ, 60 ಸರ್ಕಾರವನ್ನು ವಿರೋಧಿಸುವ ಭಿತ್ತಿ ಪತ್ರಗಳು, 1 ಫ್ಯಾನ್, 1 ಝಕಾರಿಯ ಮಸೀದಿ ಹೆಸರಿನಲ್ಲಿರುವ ವಿದ್ಯುತ್ ಬಿಲ್ ವಶ ಪಡಿಸಿಕೊಂಡು ರಾತ್ರಿ 11.45 ಕ್ಕೆ ಶೋಧ ಕಾರ್ಯಾಚರಣೆ ಮುಗಿಸಿ ಬೀಗ ಜಡಿದು, ಸೀಲು ಮಾಡಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here