ಪೆರಾಜೆ : 18 ನೇ ವರ್ಷದ ಸಾರ್ವಜನಿಕಶಾರದಾಂಬಾ ಉತ್ಸವ-ಲೋಕಕಲ್ಯಾಣಾರ್ಥ ಚಂಡಿಕಾಯಾಗ -ಭಜನಾ ಸ್ಪರ್ಧೆ

0

 

 

ಪೆರಾಜೆ ಸಾರ್ವಜನಿಕ ಶ್ರೀ ಶಾರದಾಂಬಾ ಉತ್ಸವ ಸಮಿತಿ ಆಶ್ರಯದಲ್ಲಿ 18 ನೇ ವರ್ಷದ ಸಾರ್ವಜನಿಕ ಶಾರದಾಂಬಾ ಉತ್ಸವದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ ಹಾಗೂ ಭಜನಾ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮ ಅ.5 ರಂದು ಪೆರಾಜೆ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.

ಪ್ರಾತ:ಕಾಲ ಮಹಾಗಣಪತಿ ಹವನವಾಗಿ ಶ್ರೀ ಶಾರದಾ ಮಾತೆಯ ಪ್ರತಿಷ್ಠಾ ಕಾರ್ಯ ವೇದವ್ಯಾಸ ತಂತ್ರಿ ಪೆರಾಜೆ ಯವರ ನೇತೃತ್ವದಲ್ಲಿ ನಡೆಯಿತು. ಬಳಿಕ ಚಂಡಿಕಾಯಾಗ ಪ್ರಾರಂಭಗೊಂಡಿತು. ಉತ್ಸವದ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಗೆ ತಂತ್ರಿಯವರು ಅಕ್ಷರಾಭ್ಯಾಸ ನಡೆಸಿದರು. ಮಧ್ಯಾಹ್ನ ಹೋಮದ ಪೂರ್ಣಾಹುತಿಯಾಗಿ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನ ತಾಲೂಕಿನ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸ್ಪರ್ಧೆಯು ನಡೆಯಿತು.ಉತ್ಸವದ ಸಂದರ್ಭದಲ್ಲಿ ಕಳೆದ 18 ವರ್ಷಗಳಿಂದ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಉಚಿತವಾಗಿ ನಿರ್ವಹಿಸಿರುವ ಸಮಿತಿ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಪದ್ಮನಾಭ ಭಟ್ ರವರನ್ನು ತಂತ್ರಿಗಳು ಮತ್ತು ಸಮಿತಿ ಪದಾಧಿಕಾರಿಗಳು ಸನ್ಮಾನಿಸಿದರು. ಸ್ಪರ್ಧೆಯ ಬಳಿಕ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ಮಾಡಲಾಯಿತು.
ಸಮಿತಿ ಅಧ್ಯಕ್ಷ ವೇದವ್ಯಾಸ ತಂತ್ರಿ, ಕಾರ್ಯದರ್ಶಿ ಉಮೇಶ್ ಕುಂಬಳಚೇರಿ, ಖಜಾಂಜಿ ಮುಖ್ಯಪ್ರಾಣ ಕಲ್ಲುರಾಯ ಮತ್ತು ಸದಸ್ಯರು ಸಹಕರಿಸಿದರು. ಪುತ್ಯ ಸರಕಾರಿ ಶಾಲೆಯ ಶಿಕ್ಷಕ ಮೋಹನ್ ಗೌಡ ಪೆರಾಜೆ ಯವರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here