ಪುತ್ತೂರು ನಗರಸಭೆ 2022-23ನೇ ಸಾಲಿಗೆ ರೂ.77 ಲಕ್ಷ ಮಿಗತೆ ಬಜೆಟ್ – ಅಧ್ಯಕ್ಷ ಕೆ.ಜೀವಂಧರ್ ಜೈನ್ ಮಂಡನೆ

0

 • ಬಜೆಟ್ ಮಂಡನೆಯಲ್ಲಿ ಪ್ರಥಮ ಬಾರಿಗೆ ಪ್ರಸಂಶೆ ವ್ಯಕ್ತಪಡಿಸಿದ ಪ್ರತಿಪಕ್ಷ

 


ಪುತ್ತೂರು: ೨೦೨೨-೨೩ನೇ ಸಾಲಿನಲ್ಲಿ ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಹಲವು ನೂತನ ಯೋಜನೆಗಳನ್ನೊಳಗೊಂಡು ರೂ.೭೭ ಲಕ್ಷ ಮಿಗತೆ ಬಜೆಟ್‌ನ್ನು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಂಡನೆ ಮಾಡಿದರು.ಇದೇ ಮೊದಲ ಬಾರಿಗೆ ವಿಪಕ್ಷಗಳಿಂದಲೂ `ಉತ್ತಮ ಬಜೆಟ್’ ಎಂಬ ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ.ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಪ್ರತಿಪಕ್ಷ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರುವುದು ಇದಕ್ಕೆ ಕಾರಣ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ.-.೨೫ರಂದು ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ನಡೆದ ನಗರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಜೀವಂಧರ್ ಜೈನ್ ಬಜೆಟ್ ಮಂಡನೆ ಮಾಡಿದರು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮತ್ತು ಪುತ್ತೂರಿನ ಸಮಸ್ತ ನಾಗರಿಕರ ಆಶೀರ್ವಾದ ಬೇಡುತ್ತಾ ಅಧ್ಯಕ್ಷ ಜೀವಂಧರ್ ಜೈನ್ ಬಜೆಟ್ ಮಂಡನೆ ಮಾಡಿದರು.

ಮುಖ್ಯಾಂಶಗಳು: ೨೦೨೨-೨೩ನೇ ಸಾಲಿನ ನಗರಸಭೆಯ ಪ್ರಮುಖ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ಅಂಗಡಿ ಬಾಡಿಗೆ, ಮಾರುಕಟ್ಟೆ ಶುಲ್ಕ, ಉದ್ದಿಮೆ ಪರವಾನಗಿ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣಾ ಶುಲ್ಕ ಇತ್ಯಾದಿಗಳಿಂದ ಸಂಗ್ರಹವಾಗುವ ಒಟ್ಟು ಸ್ವಂತ ರಾಜಸ್ವ ಆದಾಯ ರೂ.೧೪.೧೯ ಕೋಟಿಗಳು,ರಾಜ್ಯ ಸರ್ಕಾರದಿಂದ ಬಿಡುಗಡೆ ಆಗತಕ್ಕ ರಾಜಸ್ವ ಅನುದಾನಗಳಾದ ವೇತನ ಅನುದಾನ, ಕುಡಿಯುವ ನೀರಿನ ಅನುದಾನ, ವಿದ್ಯುತ್ ಅನುದಾನ, ರಾಜ್ಯ ಹಣಕಾಸು ಮುಕ್ತ ನಿಽ ಅನುದಾನ ಮತ್ತು ಇತರೇ ರಾಜಸ್ವ ಅನುದಾನ ರೂ.೧೦.೪೫ ಕೋಟಿಗಳು.ಎರಡು ಆದಾಯಗಳು ಸೇರಿ ಒಟ್ಟು ರೂ.೨೪.೬೪ ಕೋಟಿ ರಾಜಸ್ವ ಕಂದಾಯ ನಿರೀಕ್ಷಿಸಲಾಗಿದೆ.ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ೧೫ನೇ ಹಣಕಾಸು ಅನುದಾನ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನ, ಸ್ವಚ್ಛ ಭಾರತ್ ಮಿಷನ್ ಅನುದಾನ ಹಾಗೂ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ, ಲೋಕಸಭಾ, ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಕುಡಿಯುವ ನೀರಿನ ಅನುದಾನ, ಪ್ರಾಕೃತಿಕ ವಿಕೋಪ ಅನುದಾನ, ಡೇ-ನಲ್ಮ್ ಅನುದಾನ, ಅಂಗನವಾಡಿ ಮತ್ತು ಶಾಲಾ ಕಟ್ಟಡ ರಿಪೇರಿ ಅನುದಾನ, ಮಲ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ ಅನುದಾನ, ಎಸ್.ಎ-.ಸಿ ವಿಶೇಷ ಅನುದಾನ, ಇತರೇ ಅನುದಾನ ಸೇರಿ ಒಟ್ಟು ರೂ. ೧೧.೯೨ಕೋಟಿ ಅನುದಾನಗಳನ್ನು ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ.೪.೯೯ ಕೋಟಿ ನಿರೀಕ್ಷಿಸಲಾಗಿದೆ.ನಗರಸಭೆಯ ಸ್ವಂತ ಅನುದಾನ, ಎಲ್ಲಾ ಅನುದಾನಗಳು, ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ.೪೧.೫೫ ಕೋಟಿ ಆದಾಯವನ್ನು ೨೦೨೨-೨೩ನೇ ಸಾಲಿನಲ್ಲಿ ನಿರೀಕ್ಷಿಸಲಾಗಿದೆ.ಆರಂಭದ ಶಿಲ್ಕು ರೂ. ೧೧.೮೨ ಕೋಟಿ ಆಗಿದ್ದು, ನಗರಸಭೆಗೆ ೨೦೨೨-೨೩ನೇ ಸಾಲಿಗೆ ನಿರೀಕ್ಷಿಸಲಾದ ಸ್ವಂತ ಆದಾಯ ರೂ.೧೪.೧೯ಕೋಟಿ ಆಗಿದ್ದು, ೨೦೨೨-೨೩ನೇ ಸಾಲಿನಲ್ಲಿ ನಿರೀಕ್ಷಿಸಲಾದ ರಾಜಸ್ವ ಅನುದಾನ ರೂ. ೧೦.೪೫ ಕೋಟಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾದ ನಿರ್ದಿಷ್ಟ ಅನುದಾನ ರೂ.೧೧.೯೨ ಕೋಟಿ, ಇತರೇ ಹೊಂದಾಣಿಕೆ ಮೊತ್ತ ರೂ.೪.೯೯ ಕೋಟಿ, ಒಟ್ಟು ಆರಂಭಿಕ ಶುಲ್ಕ ಸೇರಿಸಿ ರೂ. ೫೩.೩೭ಕೋಟಿ, ೨೦೨೨-೨೩ ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯತೆಗಳಿಗೆ ಹಂಚಿಕೆ ಮಾಡಲಾದ ಮೊತ್ತ ರೂ. ೫೨.೬೦ ಕೋಟಿ ಸೇರಿ ರೂ. ೭೭ ಲಕ್ಷದ ಮಿಗತೆ ಬಜೆಟ್ ಮಂಡನೆ ಮಾಡಲಾಗಿದೆ.

ಪ್ರಮುಖ ಆದಾಯಗಳ ವಿವರ; ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯಾಗಿ ರೂ.೫.೬೭ ಕೋಟಿ, ನೀರಿನ ಸಂಪರ್ಕದಿಂದ ನೀರಿನ ಶುಲ್ಕವಾಗಿ ೩.೧೦ ಕೋಟಿ, ಬಡಾವಣೆ ಅಭಿವೃದ್ಧಿ ಶುಲ್ಕವಾಗಿ ರೂ.೧.೫೦ ಕೋಟಿ, ಕಟ್ಟಡ ಪರವಾನಗಿ ರೂ.೪೫ ಲಕ್ಷ, ಉದ್ದಿಮೆ ಪರವಾನಗಿ ಶುಲ್ಕ ರೂ.೫೦ ಲಕ್ಷ, ನೀರಿನ ನಳ ಜೋಡಣೆ ಶುಲ್ಕದಿಂದ ರೂ.೧೦ ಲಕ್ಷ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದ ರೂ. ೧.೨೫ ಕೋಟಿ, ವಾಣಿಜ್ಯ ಸಂಕೀರ್ಣದ ಬಾಡಿಗೆಯಿಂದ ರೂ.೨೫ ಲಕ್ಷ, ಮಾರುಕಟ್ಟೆ ಮತ್ತು ನೆಲ ಬಾಡಿಗೆಗಳಿಂದ ರೂ.೨೫ ಲಕ್ಷ, ಸೆಸ್‌ಪೂಲ್ ವಾಹನದ ಬಾಡಿಗೆಯಿಂದ ರೂ.೨೦ಲಕ್ಷ, ಖಾತೆ ಬದಲಾವಣೆ, ಖಾತಾ ಪ್ರತಿ, ಪ್ರತಿ ನೀಡಿಕೆಗಳಿಂದ ರೂ.೦.೧೫೫ ಕೋಟಿ, ಆಸ್ತಿ ತೆರಿಗೆ ದಂಡ ಮತ್ತು ಇತರೇ ದಂಡಗಳಿಂದ ರೂ.೭೮ ಲಕ್ಷ, ಪುರಭವನದ ಬಾಡಿಗೆಯಿಂದ ರೂ. ೩೦ ಲಕ್ಷ, ಜಾಹೀರಾತು ಶುಲ್ಕದಿಂದ ರೂ.೫ ಲಕ್ಷ, ಮುದ್ರಾಂಕ ಶುಲ್ಕದಿಂದ ರೂ.೨೫ ಲಕ್ಷ ಆದಾಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ನಿರೀಕ್ಷಿತ ಆದಾಯಗಳಿಂದ ಮೂಲಭೂತ ಸೌಕರ್ಯಗಳಿಗೆ ಹಂಚಿಕೆ: ವಾರ್ಡುಗಳಲ್ಲಿ ರಸ್ತೆ ರಿಪೇರಿ ಮತ್ತು ನಿರ್ಮಾಣ ರೂ.೮.೦೦ ಕೋಟಿ, ಚರಂಡಿ ರಿಪೇರಿ ಮತ್ತು ನಿರ್ಮಾಣ ರೂ.೨.೫೦ ಕೋಟಿ, ಪ್ರತಿ ವಾರ್ಡುಗಳಲ್ಲಿ ನೀರು ಸರಬರಾಜು ಹಾಗೂ ನಿರ್ವಹಣೆಗಾಗಿ ರೂ.೫.೭೬ ಕೋಟಿ, ಭೂಮಿ ಖರೀದಿಗಾಗಿ ರೂ.೧.೨೫ ಕೋಟಿ, ವೃತ್ತಗಳು ಹಾಗೂ ಇತರೇ ಸ್ಥಿರಾಸ್ತಿಗಳ ಅಭಿವೃದ್ಧಿಗಾಗಿ ರೂ.೫೦ ಲಕ್ಷ, ಕಟ್ಟಡ ನಿರ್ಮಾಣಕ್ಕಾಗಿ ರೂ. ೪೫ ಲಕ್ಷ,ನಗರ ವ್ಯಾಪ್ತಿಯಲ್ಲಿ ಬರುವ ಆಶ್ರಯ ಬಡಾವಣೆಗಳ ರೂ.೫೦ ಲಕ್ಷ, ಸಾರ್ವಜನಿಕ ಶೌಚಾಲಯದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ.೨೦ ಲಕ್ಷ, ನಗರಸಭೆಯ ಕಛೇರಿಯ ಪೀಠೋಪಕರಣಗಳ ಖರೀದಿಗಾಗಿ ರೂ.೧೦ ಲಕ್ಷ, ಸಣ್ಣ ಸೇತುವೆ ಹಾಗೂ ಮೋರಿಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ. ೨೫ಲಕ್ಷ, ಮಳೆ ನೀರು ಹರಿಯುವ ಚರಂಡಿಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ.೫೦ ಲಕ್ಷ, ಸ್ಮಶಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರೂ.೩೫ ಲಕ್ಷ, ಉದ್ಯಾನವನ ನಿರ್ಮಾಣಕ್ಕಾಗಿ ರೂ.೧.೦೦ ಕೋಟಿ, ನಗರಸಭೆಯ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ.೩.೦೦ ಕೋಟಿ, ಘನತ್ಯಾಜ್ಯ ಸಂಸ್ಕರಣಾ ಮತ್ತು ನಿರ್ವಹಣಾ ಘಟಕದ ಅಭಿವೃದಿಗಾಗಿ ರೂ.೧.೫೦ ಕೋಟಿ, ನಗರಸಭೆಯ ವಿವಿಧ ಕಾರ್ಯಗಳಿಗಾಗಿ ಹೊಸ ವಾಹನಗಳನ್ನು ಹಾಗೂ ಯಂತ್ರೋಪಕರಣ ಖರೀದಿಗಾಗಿ ರೂ.೧.೧೨ ಕೋಟಿ, ಪ.ಜಾತಿ ಹಾಗೂ ಪ.ಪಂಗಡದವರ ಅಭಿವೃದ್ಧಿಗಾಗಿ ಹಾಗೂ ಸದರಿಯವರ ಪ್ರದೇಶದ ಅಭಿವೃದ್ಧಿಗಾಗಿ ಶೇ.೨೪.೧೦ರ ನಿಽಯಡಿಯಲ್ಲಿ ರೂ.೧.೦೧ ಕೋಟಿ, ಬಡತನ ರೇಖೆಗಿಂತ ಕೆಳಗಿರುವ ಬಿ.ಪಿ.ಎಲ್ ಕುಟುಂಬಗಳ ಅಭಿವೃದ್ಧಿಗಾಗಿ ಹಾಗೂ ಸದರಿಯವರ ಪ್ರದೇಶದ ಅಭಿವೃದ್ಧಿಗಾಗಿ ಶೇ.೭.೨೫ರ ನಿಽಯಡಿಯಲ್ಲಿ ರೂ. ೦.೩೦ ಕೋಟಿ, ಭಿನ್ನ ಸಾಮರ್ಥ್ಯ ಹೊಂದಿರುವವರಿಗೆ ಶೇ.೫ರ ನಿಽಯಡಿಯಲ್ಲಿ ರೂ.೦.೨೧ ಕೋಟಿ, ನೈಸರ್ಗಿಕ ವಿಕೋಪಗಳಿಂದ ಆಗುವ ಹಾನಿ ಹಾಗೂ ಸಹಾಯಧನ ಪಾವತಿಸಲು ರೂ.೫ ಲಕ್ಷ, ಕಛೇರಿ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಇನ್ನಷ್ಟು ತ್ವರಿತಗೊಳಿಸುವ ನಿಟ್ಟಿನಲ್ಲಿ ಅವಶ್ಯಕವಾಗಿರುವ ಗಣಕಯಂತ್ರ ಮತ್ತು ಇತರೇ ಯಂತ್ರಗಳನ್ನು ಖರೀದಿಸಲು ರೂ.೦.೧೫ ಕೋಟಿ, ಹೊಸ ದಾರಿ ದೀಪಗಳ ಅಳವಡಿಸಲು ಹಾಗೂ ನಿರ್ವಹಣೆಗಾಗಿ ರೂ.೧.೪೫ ಕೋಟಿ, ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಅಽಕಾರಿಗಳು ಹಾಗೂ ಸಿಬ್ಬಂದಿಗಳ ವೇತನಕ್ಕಾಗಿ ನಿರೀಕ್ಷಿತ ಅನುದಾನದಲ್ಲಿ ರೂ.೨.೭೫ ಕೋಟಿ, ಸಂಗ್ರಹವಾಗುವ ಆಸ್ತಿ ತೆರಿಗೆ ಹಾಗೂ ಇತರೇ ವಸೂಲಿ ಮಾಡುವ ತೆರಿಗೆಗಳಿಂದ ಸರ್ಕಾರಕ್ಕೆ ಪಾವತಿಸಬೇಕಾಗಿರುವ ತೆರಿಗೆಗಳಿಗಾಗಿ ರೂ. ೧.೫೮ ಕೋಟಿ, ಸಂಗ್ರಹವಾಗುವ ಆಸ್ತಿ ತೆರಿಗೆ ಹಾಗೂ ಇತರೇ ವಸೂಲಿ ಮಾಡುವ ತೆರಿಗೆಗಳಿಂದ ಸರ್ಕಾರಕ್ಕೆ ಪಾವತಿಸಬೇಕಾಗಿರುವ ಸೆಸ್ಸುಗಳಿಗಾಗಿ ರೂ.೧.೦೫ ಕೋಟಿ, ನಗರಸಭೆಯ ವಿವಿಧ ಕಟ್ಟಡಗಳಿಗೆ ಮಳೆ ನೀರು ಕೋಯ್ಲು ಹಾಗೂ ತೆರೆದ ಚರಂಡಿಗಳಲ್ಲಿ ಹರಿಯುವ ಬೂದು ನೀರು ಸಂಸ್ಕರಣೆಗಾಗಿ ರೂ.೫೦ ಲಕ್ಷ, ನೀರು ಸಂಸ್ಕರಣೆಗಾಗಿ ಮಲ ಮತ್ತು ಸೆಪ್ಟೇಜ್ ನಿರ್ವಹಣೆಗಾಗಿ ರೂ. ೩.೫೦ ಕೋಟಿ ಕಾದಿರಿಸಲಾಗಿದೆ.ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಗರಸಭೆಗೆ ಬಿಡುಗಡೆಯಾಗುವ ಅನುದಾನವನ್ನು ಸಂಪೂರ್ಣ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು, ಇದರೊಂದಿಗೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೆ.ಜೀವಂಧರ್ ಜೈನ್ ಹೇಳಿದರು.

ಆಡಳಿತದಲ್ಲಿ ಸುಧಾರಣೆಗಳು: ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳ ಪರವಾನಗಿಗಳ ನವೀಕರಣವನ್ನು ಸರಳಗೊಳಿಸಲು ಎಲ್ಲಾ ಉದ್ದಿಮೆದಾರರಿಗೆ ಪರವಾನಗಿಯನ್ನು ಪಡೆಯಲು ಸುಲಭವಾಗುವಂತೆ ` ಈಝಿ ಆ- ಡುಯಿಂಗ್ ಬ್ಯುಸಿನೆಸ್’ ಎಂಬ ವ್ಯಾಪಾರ ತಂತ್ರ್ರಾಂಶದಲ್ಲಿ ಪರವಾನಗಿಯ ಸ್ವಯಂ ನವೀಕರಣವನ್ನು ಜಾರಿಗೆ ತರಲಾಗಿದೆ.(ಪರವಾನಗಿಗೆ ಅನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ, ಅನ್‌ಲೈನ್ ಮುಖಾಂತರ ಶುಲ್ಕವನ್ನು ಪಾವತಿಸಿ, ಅನ್‌ಲೈನ್‌ನಲ್ಲಿ ಪರವಾನಗಿಯ ಪ್ರತಿಯನ್ನು ಪಡೆಯಬಹುದಾಗಿದೆ),ಉದ್ದಿಮೆ ಯಾ ವ್ಯಾಪಾರ ಪರವಾನಗಿಯ ಬೈಲಾಗಳನ್ನು ಸಿದ್ಧಪಡಿಸಲಾಗುವುದು, ಉದ್ದಿಮೆದಾರರು ಹಾಗೂ ವರ್ತಕರ ಸಂಘದೊಂದಿಗೆ ಚರ್ಚಿಸಿ ಉದ್ದಿಮೆಯ ಸ್ವರೂಪಕ್ಕೆ ಸಂಬಂಽಸಿದಂತೆ ಶುಲ್ಕ ಹಾಗೂ ಘನತ್ಯಾಜ್ಯ ನಿರ್ವಹಣಾ ಶುಲ್ಕವನ್ನು ಜಾರಿಗೊಳಿಸಲು ಕ್ರಮವಹಿಸಲಾಗುವುದು. ಇದರಿಂದ ಸಣ್ಣ, ಮಧ್ಯಮ ಹಾಗೂ ದೊಡ್ಡ ವ್ಯಾಪಾರಿಗಳಿಗೆ ಶುಲ್ಕ ಪಾವತಿಯಲ್ಲಿ ಆಗುತ್ತಿರುವ ತೊಂದರೆಯನ್ನು ಕಡಿಮೆಗೊಳಿಸಲಾಗುವುದು.ಜಾಹೀರಾತು ತೆರಿಗೆ ಹಾಗೂ ಇದಕ್ಕೆ ಸಂಬಂಽಸಿದ ಬೈಲಾಗಳನ್ನು ಸಿದ್ಧಪಡಿಸಲಾಗುವುದು.ನಗರ ವ್ಯಾಪ್ತಿಯಲ್ಲಿ ಅನಽಕೃತ ಜಾಹೀರಾತು, ಬ್ಯಾನರ್ ಹಾಗು ಇತರೇ ಪ್ರಚಾರವನ್ನು ತಡೆಯಲು ಹಾಗೂ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಅನ್‌ಲೈನಲ್ಲಿಯೇ ಅನುಮತಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.ನಗರ ಪ್ರದೇಶವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕಟ್ಟಡ ಹಾಗೂ ವಾಣಿಜ್ಯಗಳು ಹೆಚ್ಚುತ್ತಿರುವುದರಿಂದ ನಗರದ ಭವಿಷ್ಯದ ದೃಷ್ಠಿಯಿಂದ ಕಟ್ಟಡ ಪರವಾನಗಿಯ ಬೈಲಾಗಳನ್ನು ಸಿದ್ದಪಡಿಸಲಾಗುವುದು.ಸರ್ಕಾರದ ಸುತ್ತೋಲೆಗಳು, ಪುತ್ತೂರು ನಗರ ಯೋಜನಾ ಪ್ರಾಽಕಾರ, ನಗರದಲ್ಲಿರುವ ಸಂಘ ಸಂಸ್ಥೆಗಳ ಸಲಹೆಯನ್ನು ಪಡೆದು ಜಾರಿಗೊಳಿಸಲು ಕ್ರಮವಹಿಸಲಾಗುವುದು.ನಗರ ಸಭೆಯ ಪೌರಕಾರ್ಮಿಕರು, ಚಾಲಕರು ಹಾಗೂ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ಬನ್ನೂರು ಸಂಸ್ಕರಣಾ ಘಟಕದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲು ಕ್ರಮವಹಿಸಿದೆ.

ಎಲ್ಲಾ ಪೌರಕಾರ್ಮಿಕರು ಹಾಗೂ ಚಾಲಕರಿಗೆ ಉತ್ತಮ ಆರೋಗ್ಯವನ್ನು ಹೊಂದಲು ವರ್ಷಕ್ಕೆ ೩ ಬಾರಿ ಆರೋಗ್ಯ ತಪಾಸಣೆಯನ್ನು ಹಾಗೂ ಎಲ್ಲರಿಗೂ ಆರೋಗ್ಯ ವಿಮೆಯನ್ನು ಮಾಡಿಸಲು ಕ್ರಮ ವಹಿಸಲಾಗಿದೆ. ನಗರಸಭೆಯಲ್ಲಿ ಖಾಲಿ ಇರುವ ಅಽಕಾರಿಗಳು ಹಾಗೂ ಸಿಬ್ಬಂಽಗಳ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಹಂತದಲ್ಲಿ ಕ್ರಮವಹಿಸಲಾಗುವುದು. ಪೌರಕಾರ್ಮಿಕರು, ಲೋಡರ್‍ಸ್, ಹೆಲ್ಪರ್‍ಸ್‌ಗಳ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ಪಾವತಿಯಡಿ ಭರ್ತಿ ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಸಾರ್ವಜನಿಕ ಆರೋಗ್ಯ: ಕಳೆದ ಎರಡು ವರ್ಷಗಳಿಂದ ವಿಶ್ವದಲ್ಲಿ ಎಲ್ಲಾ ನಾಗರಿಕರಿಗೆ ಆತಂಕವನ್ನು ಸೃಷ್ಠಿಸಿರುವ ಮಹಾಮಾರಿ ಕೋವಿಡ್-೧೯ ರೋಗವನ್ನು ನಮ್ಮ ಪುತ್ತೂರು ಜನತೆ ಧೈರ್ಯದಿಂದ ಎದುರಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ಶೇ.೧೦೦ರಷ್ಟು ಕೋವಿಡ್ ಲಸಿಕೆಯನ್ನು ಪುತ್ತೂರಿನ ನಾಗರಿಕರಿಗೆ ಒದಗಿಸಲಾಗಿದೆ. ನಗರದ ಎಲ್ಲಾ ಸದಸ್ಯರು, ಎಲ್ಲಾ ಇಲಾಖೆಯ ಅಽಕಾರಿಗಳು ಹಾಗೂ ಸಿಬ್ಬಂದ್ಧಿಗಳು ಕೋವಿಡ್-೧೯ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು ಎಲ್ಲರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಸಾಂಕ್ರಾಮಿಕ ರೋಗದ ಪ್ರಕರಣಗಳು ಅತೀ ಹೆಚ್ಚು ಕಂಡು ಬರುವುದರಿಂದ, ಪುತ್ತೂರು ನಗರ ವ್ಯಾಪ್ತಿಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಗರಸಭೆಯ ವತಿಯಿಂದ -ಗಿಂಗ್ ಹಾಗೂ ಮದ್ದು ಸಿಂಪಡಣೆಯ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು.ಸಾರ್ವಜನಿಕರಿಗೆ ಮಲೇರಿಯಾ ಹಾಗೂ ಡೆಂಗ್ಯೂ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಬಗ್ಗೆ ಮಾಹಿತಿ, ಶಿಕ್ಷಣ ಹಾಗೂ ಸಂವಹನದ ಮುಖಾಂತರ ಪ್ರಚಾರ ನೀಡಲಾಗುವುದು.ಪುತ್ತೂರು ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದರಿಂದ, ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆಯನ್ನು ನೀಡಲು ನಗರಸಭೆಯ ನಿಽಯಡಿ ರೂ.೧೫ ಲಕ್ಷ ಕಾದಿರಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಘನತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ: ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಪುತ್ತೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಹಸಿರು ನಗರವಾನ್ನಗಿಸಲು ಈಗಾಗಲೇ ಹಲವು ಹೊಸ ಯೋಜನೆಗಳೊಂದಿಗೆ ಹೆಜ್ಜೆಯನ್ನು ಇಡಲಾಗಿದೆ.ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಿಂದ ಹಸಿ ಕಸ, ಒಣ ಕಸ ಹಾಗು ಅಪಾಯಕಾರಿ ಕಸವಾಗಿ ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸಲು ಈಗಾಗಲೇ ಕ್ರಮವಹಿಸಲಾಗಿದ್ದು ಶೇ. ೧೦೦ರಷ್ಟು ಅನುಷ್ಠಾನಗೊಳಿಸಲಾಗುವುದು.ಈ ಯೋಜನೆಗೆ ವಾಹನಗಳನ್ನು ಹಾಗೂ ಯಂತ್ರೋಪಕರಣಗಳನ್ನು ಖರೀದಿಸಲಾಗಿದ್ದು, ಹೆಚ್ಚಿನ ಅವಶ್ಯವಿರುವ ವಾಹನಗಳನ್ನು ಹಾಗೂ ಯಂತೋಪಕರಣಗಳನ್ನು ಖರೀದಿಸಲು ಕ್ರಮವಹಿಸಲಾಗಿದೆ.ಹಸಿ ಕಸ ಹಾಗು ಒಣ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಸ್ವಚ್ಛ ಪುತ್ತೂರು ಟ್ರಸ್ಟ್ `ರೋಟರಿ ಕ್ಲಬ್ ಪೂರ್ವ’ ಇವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಈಗಾಗಲೇ ನಗರ ವ್ಯಾಪ್ತಿಯ ಒಣ ತ್ಯಾಜ್ಯವನ್ನು ಬೇರ್ಪಡಿಸಲು ಹಾಗೂ ವೈಜ್ಞಾನಿಕವಾಗಿ ಮರು ಬಳಕೆ ಮಾಡಲು ಮೊದಲನೇಯ ಹಂತದಲ್ಲಿ `ಮಟೀರಿಯಲ್ ರಿಕವರಿ -ಸಿಲಿಟಿ’ಯನ್ನು ತೆರೆಯಲಾಗಿದೆ. ಹಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಬಯೋಗ್ಯಾಸ್ ಸ್ಥಾವರವನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ `ಶೂನ್ಯತ್ಯಾಜ್ಯ ವಿಲೇವಾರಿ ಘಟಕ’ವಾಗಿ ಮಾಡಲು ಕ್ರಮವಹಿಸಲಾಗುವುದು. ಇದರ ಜೊತೆಗೆ ಸ್ವಚ್ಛ ಭಾರತ್ ಮಿಷನ್‌ಯೋಜನೆ ಸ್ವಚ್ಛ ಸರ್ವೇಕ್ಷಣ್ -೨೦೨೨ ಹಾಗೂ ತ್ಯಾಜ್ಯ ಮುಕ್ತ ನಗರವಾನ್ನಗಿಸಲು ಸಾರ್ವಜನಿಕರ ಸಹಾಭಾಗಿತ್ವ ಅತೀ ಅಗತ್ಯ. ಸ್ವಚ್ಛತೆಯಲ್ಲಿ ಪುತ್ತೂರು ನಗರವನ್ನು ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ಏರಿಸಲು ನಗರಸಭೆಯೊಂದಿಗೆ ಕೈಜೋಡಿಸಿ ಸಹಕರಿಸುವಂತೆ ಅಧ್ಯಕ್ಷರು ವಿನಂತಿಸಿದರು.೨೦೨೨ನೇ ಸಾಲಿನಲ್ಲಿ ನಗರಸಭೆಯು ಸ್ವಚ್ಛ ಸರ್ವೇಕ್ಷಣ್-೨೦೨೨, ೩ ಸ್ಟಾರ್‌ರೇಟಿಂಗ್ ಹಾಗೂ ಓ.ಡಿ.ಎ- + (ಬಯಲು ಶೌಚ ಮುಕ್ತ+)ನಲ್ಲಿ ಭಾಗವಹಿಸಿದೆ ಎಂದರು.

ಆಸ್ತಿ ತೆರಿಗೆ, ಕಟ್ಟಡ ಪರವಾನಗಿ ಹಾಗೂ ಜನಹಿತ ತಂತ್ರಾಂಶ: ಸಾರ್ವಜನಿಕರಿಗೆ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಲು ಅನೂಕೂಲವಾಗುವಂತೆ `ಇ-ಸ್ವೀಕೃತಿ’ ಎಂಬ ಶೀರ್ಷಿಕೆಯಡಿಯಲ್ಲಿ ತಂತ್ರಾಂಶವನ್ನು ಗಣಕೀಕರಣಗೊಳಿಸಲಾಗಿದ್ದು, ಸಾರ್ವಜನಿಕರು ಆನ್‌ಲೈನ್ ಮುಖಾಂತರ ತೆರಿಗೆಯನ್ನು ಪಾವತಿಸಲು ತಂತ್ರಾಂಶವನ್ನು ಉಪಯೋಗಿಸಬಹುದಾಗಿದೆ.ಸಾರ್ವಜನಿಕರಿಗೆ ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ `ಜನಹಿತ’ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.ಅಲ್ಲದೆ -ಸ್ಬುಕ್, ಟ್ವಿಟರ್, ವಾಟ್ಸ್‌ಆಪ್, ಇನ್‌ಸ್ಟಾಗ್ರಾಮ್, ವೆಬ್ ಸೈಟ್, ಸ್ವಚ್ಛತಾ ಆಪ್, ಜನಹಿತ ಮೊಬೈಲ್ ಆಪ್ ಹಾಗೂ ದೂರವಾಣಿ ಮುಖಾಂತರ ದೂರುಗಳನ್ನು ಸಲ್ಲಿಸಿ ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.ರಾಜ್ಯ ಸರ್ಕಾರವು `ನಿರ್ಮಾಣ್-೨’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಕಟ್ಟಡ ಪರವಾನಗಿಯನ್ನು ಅನ್‌ಲೈನ್ ಮುಖಾಂತರ ಪಡೆಯಬಹುದಾಗಿದೆ.ಎಲ್ಲಾ ಪರವಾನಗಿಗಳನ್ನು ಡಿಜಿಟಲ್ ಸಹಿ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ತಂತ್ರಾಂಶವನ್ನು ಉಪಯೋಗಿಸಿ ವಿವಿಧ ಸೇವೆಗಳ ಮಾಹಿತಿಯನ್ನು ನಗರಸಭೆ ಕಾರ್ಯಾಲಯದ ವೆಬ್ ಸೈಟ್ ಮುಖಾಂತರ ನೀಡಲಾಗುವುದು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಮಾಡಲಾಗಿರುವ ತಂತ್ರಾಂಶಗಳ ಕೈಪಿಡಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಜಲಸಿರಿ ೨೪*೭ ನೀರು ಸರಬರಾಜು ಯೋಜನೆ: ಪುತ್ತೂರು ನಗರವು ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದ್ದು, ನಗರದ ಎಲ್ಲಾ ಜನರಿಗೆ ವಾರದ ಎಲ್ಲಾ ದಿನಗಳಲ್ಲಿಯೂ ೨೪ ಗಂಟೆಗಳ ಕಾಲ ನೀರು ಸರಬರಾಜು ಮಾಡಲು ರಾಜ್ಯ ಸರ್ಕಾರದ ಸಂಸ್ಥೆಯಾಗಿರುವ ಕೆ.ಯು.ಐ.ಡಿ.ಎ-.ಸಿ ವತಿಯಿಂದ `ಜಲಸಿರಿ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.ಈ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಸಂಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.ನೀರಿನ ಶುದ್ಧೀಕರಣ ಘಟಕವನ್ನು ೬.೮ ಎಮ್.ಎಲ್.ಡಿ ಯಿಂದ ೧೫.೦ ಎಮ್.ಎಲ್.ಡಿ ಗೆ ಹೆಚ್ಚಿಸಲಾಗುವುದು, ನಗರದ ವಿವಿಧ ಭಾಗಗಳಲ್ಲಿ ಪ್ರಸ್ತುತ ಇರುವ ೪ ಓವರ್ ಹೆಡ್ ಟ್ಯಾಂಕ್‌ಗಳೊಂದಿಗೆ ಹೆಚ್ಚುವರಿ ೬ ಸಂಖ್ಯೆಯ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಸಿಟಿಗುಡ್ಡೆಯಲ್ಲಿ ಪ್ರಸ್ತುತ ೯.೦ ಲಕ್ಷ ಲೀಟರ್ ಸಾಮರ್ಥ್ಯದ ಜಿ.ಎಲ್.ಎಸ್.ಆರ್ ಬದಲಿಗೆ ಹೊಸದಾಗಿ ೨೪ ಲಕ್ಷ ಲೀಟರ್ ಸಾಮರ್ಥ್ಯದ ಜಿ.ಎಲ್.ಎಸ್.ಆರ್ ನಿರ್ಮಿಸಲಾಗುತ್ತಿದೆ.ಈ ಯೋಜನೆಯಿಂದ ನಗರದ ಎಲ್ಲಾ ಭಾಗದ ಮನೆಗಳಿಗೆ ವಾರದ ಎಲ್ಲಾ ದಿನಗಳಲ್ಲಿಯೂ ೨೪ ಗಂಟೆಗಳ ನೀರು ಸರಬರಾಜು ಮಾಡಲು ಕ್ರಮವಹಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಪಾರ್ಕಿಂಗ್ ವ್ಯವಸ್ಥೆ: ಪುತ್ತೂರು ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ, ಇದರಿಂದ ವಾಹನಗಳ ದಟ್ಟಣೆ ಹೆಚ್ಚುತ್ತಿರುವುದು ಸಾಮಾನ್ಯವಾಗಿದೆ.ಸಾರ್ವಜನಿಕರಿಗೆ ವಾಹನ ದಟ್ಟಣೆ ಹಾಗೂ ವಾಹನಗಳ ಪಾರ್ಕಿಂಗ್ ಸಮಸ್ಯೆಯನ್ನು ಕಡಿಮೆಗೊಳಿಸಲು ನಗರಸಭೆಯ ವತಿಯಿಂದ ವಿವಿಧ ಪ್ರದೇಶಗಳಲ್ಲಿ ಜಾಗವನ್ನು ಗುರುತಿಸಿ ಸ್ವಾಽನ ಪಡಿಸಿಕೊಂಡು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮವಹಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ನಗರೋತ್ಥಾನ ಯೋಜನೆ: ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿರುವ ನಗರೋತ್ಥಾನ ಯೋಜನೆಯಡಿಯಲ್ಲಿ ನಗರಸಭೆಯ ಅಭಿವೃದ್ಧಿಗಾಗಿ ರೂ.೩೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಣಯಿಸಲಾಗಿದ್ದು, ಎಲ್ಲಾ ೩೧ ವಾರ್ಡುಗಳಲ್ಲಿ ಬರುವ, ಆಯ್ಕೆ ಮಾಡಲಾದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿಗಳ ಅಭಿವೃದ್ಧಿ, ಸಾರ್ವಜನಿಕರಿಗಾಗಿ ನಗರದ ವಿವಿಧ ಭಾಗಗಳಲ್ಲಿರುವ ಉದ್ಯಾನವನಗಳ ಅಭಿವೃದ್ಧಿ, ಎಲ್ಲಾ ೩೧ ವಾರ್ಡುಗಳಲ್ಲಿ ಬರುವ, ಆಯ್ಕೆ ಮಾಡಲಾದ ರಸ್ತೆಗಳಿಗೆ ಬೀದಿ ದೀಪ ಹಾಗೂ ಹೈಮಾಸ್ಟ್ ದೀಪಗಳ ಆಳವಡಿಕೆ, ಆಟದ ಮೈದಾನ ಹಾಗೂ ಎನ್.ಎಸ್.ಕಿಲ್ಲೆ ಮೈದಾನದ ಅಭಿವೃದ್ಧಿ, ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ರಸ್ತೆಗಳ ಅಭಿವೃದ್ಧಿ, ನಗರಸಭೆಯ ಪ.ಜಾತಿ ಹಾಗು ಪ.ಪಂಗಡದವರ ಅಭಿವೃದ್ಧಿಗಾಗಿ ಮತ್ತು ಪರಿಸರದ ಪ್ರದೇಶದ ಅಭಿವೃದ್ಧಿ, ಪೌರಕಾರ್ಮಿಕರಿಗೆ ತಂಗಲು ನಗರಸಭೆಯ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯದ ನಿರ್ಮಾಣ, ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ. ಜಾತಿ, ಪ. ಪಂಗಡದವರ ಹಾಗು ಅಂಗವಿಕಲರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವುದು, ವಿಕಲಚೇತನರ ಕಲ್ಯಾಣಕ್ಕಾಗಿ ದ್ವಿಚಕ್ರ ವಾಹನ ಹಾಗೂ ವೈಯುಕ್ತಿಕ ಸಹಾಯಧನ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವೈಯುಕ್ತಿಕ ಸಹಾಯಧನ ಹಾಗು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ನಗರ ಹಸಿರೀಕರಣ, ಪರಿಸರ ಸಂರಕ್ಷಣೆ: ನಗರಸಭೆ ವ್ಯಾಪ್ತಿಯಲ್ಲಿ ಜಪಾನಿನ ದೇಶದ `ಮಿಯಾವಾಕಿ’ ಮಾದರಿಯಲ್ಲಿ ಗಿಡ ಮರಗಳನ್ನು ನೆಡುವ ಬಗ್ಗೆ ಪ್ರಾಯೋಗಿಕವಾಗಿ ಬನ್ನೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಮಳೆಗಾಲದ ಮುಂಚಿತವಾಗಿ ಪ್ರಾರಂಭಿಸಲಾಗುವುದು. ನಂತರ ನಗರದ ವಿವಿಧ ಪ್ರದೇಶಗಳಲ್ಲಿ ಖಾಲಿ ಇರುವ ಜಾಗಗಳಲ್ಲಿ ಅನುಷ್ಠಾನಗೊಳಿಸಲಾಗುವುದು.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅಽಸೂಚನೆಯಂತೆ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಽಸಲಾಗಿದೆ.ಎಲ್ಲಾ ಉದ್ದಿಮೆದಾರರು ಹಾಗೂ ವಾಣಿಜ್ಯಗಳಲ್ಲಿ ಹಂತ ಹಂತವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲು ಕ್ರಮವಹಿಸಲಾಗುವುದು.

ಬಿರುಮಲೆ ಬೆಟ್ಟ, ಉದ್ಯಾನವನ ಅಭಿವೃದ್ಧಿ: ಪುತ್ತೂರು ನಗರವನ್ನು ಪ್ರವಾಸಿ ತಾಣವಾಗಿಸಲು ಬಿರುಮಲೆ ಬೆಟ್ಟದ ಅಭಿವೃದ್ಧಿ ಹಾಗೂ ಮಕ್ಕಳಿಗೆ ಅಗತ್ಯವಾಗಿ ಬೇಕಾಗುವ ಉದ್ಯಾನವನ ಅಭಿವೃದ್ಧಿ ಪಡಿಸಲಾಗುವುದು ಎಂದು ಅಧ್ಯಕ್ಷರು ವಿವರಿಸಿದರು.

ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ವಿಕಲಚೇತನರಿಗೆ ನಿವೇಶನ ಹಂಚಿಕೆ: ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಪ್ರದೇಶಗಳಲ್ಲಿ ನಿವೇಶನಗಳನ್ನು ಗುರುತಿಸಲಾಗಿದ್ದು. ನಗರಸಭೆಯ ವತಿಯಿಂದ ಸದರಿ ಪ್ರದೇಶದ ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು ಹಾಗೂ ನಿವೇಶನಗಳನ್ನು ನಿರ್ಮಿಸಿ ಆಶ್ರಯ ಸಮಿತಿಯ ಅಡಿಯಲ್ಲಿ ಕಳೆದ ಹಲವು ವರ್ಷಗಳಿಂದ ನಿವೇಶನಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಪ.ಜಾತಿ,ಪಂಗಡ, ಹಿಂದುಳಿದ ವರ್ಗ ಮತ್ತು ವಿಕಲಚೇತನರಿಗೆ ಹಂಚಿಕೆ ಮಾಡಲು ಕ್ರಮವಹಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಸದಸ್ಯರ ಅಭಿಪ್ರಾಯಗಳು: ಬಜೆಟ್ ಮಂಡನೆಯಾದ ಬಳಿಕ ನಗರಸಭಾ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಉತ್ತಮ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಆರಂಭದಲ್ಲಿ ಅಭಿನಂದನೆ ಸಲ್ಲಿಸಿದರು.ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಬಿಪಿಎಲ್ -ಲಾನುಭವಿಗಳಿಗೆ ಸಿಗುವ ಸೌಲಭ್ಯದಂತೆ ತೀರಾ ಬಡತನದಲ್ಲಿರುವ ಎಪಿಎಲ್ -ಲಾನುಭವಿಗಳಿಗೂ ಸವಲತ್ತು ಕೊಡುವ ವ್ಯವಸ್ಥೆ ಆಗಬೇಕೆಂದರು.ಈ ಕುರಿತು ನಗರಸಭೆ ತೀರ್ಮಾನ ಮಾಡಲಾಗದಿದ್ದರೂ ಸರಕಾರಕ್ಕೆ ಮನವಿ ಮಾಡುವ.ಇದರ ಜೊತೆಗೆ ಪುತ್ತೂರು ಸ್ಮಶಾನಕ್ಕೆ ಹಲವು ಮಂದಿ ಕೊಡುಗೆ ನೀಡಿದ್ದಾರೆ.ಅಲ್ಲಿಗೆ ಮುಂದೆ ಗ್ಯಾಸ್ ಟ್ರೇ ವ್ಯವಸ್ಥೆ ಮಾಡಬೇಕೆಂದರು.ಉಪಾಧ್ಯಕ್ಷೆ ವಿದ್ಯಾ ಗೌರಿ ಅವರು ಮಾತನಾಡಿ ಬಜೆಟ್ ತಯಾರಿ ಮಾಡುವ ಮೊದಲು ಅಧ್ಯಕ್ಷರು ಸಾರ್ವಜನಿಕ ಸಭೆ ಕರೆಸಿ ಅವರ ಅಭಿಪ್ರಾಯ ಪಡೆದಿರುವುದಲ್ಲದೆ ಅದನ್ನು ಬಜೆಟ್‌ನಲ್ಲಿ ಸೇರಿಸಿರುವುದು ಉತ್ತಮ ವಿಚಾರ ಎಂದರು. ಸಂತೋಷ್ ಬೊಳುವಾರು ಅವರು ಮಾತನಾಡಿ ಘನತ್ಯಾಜ್ಯ ತೆರಿಗೆ ಕಡಿಮೆ ಮಾಡಲು ವಿನಂತಿಸಿದರು.ಪದ್ಮನಾಭ ಅವರು ಮಾತನಾಡಿ ಕನಕದಾಸ ಕಾಲೋನಿ ನಿವಾಸಿಗಳಿಗೆ ಮನೆ ಅಡಿಸ್ಥಳ ಕೊಡಿಸಲು ಮನವಿ ಮಾಡಿದರು. ರಿಯಾಝ್ ಅವರು ಮಾತನಾಡಿ ನಗರಕ್ಕೆ ಸಂಬಂಧಪಟ್ಟ ಬಜೆಟ್‌ನಂತೆ ಕಾಣುತ್ತಿದೆ.ಗ್ರಾಮೀಣ ಭಾಗವೂ ನಗರಸಭೆ ವ್ಯಾಪ್ತಿಗೆ ಸೇರಿಕೊಂಡಿದೆ.ಅಲ್ಲಿಯ ಅಭಿವೃದ್ಧಿಗೂ ಅನುದಾನ ನೀಡಬೇಕೆಂದು ಮನವಿ ಮಾಡಿದರು.ನಗರಸಭೆ ವ್ಯಾಪ್ತಿಗೆ ಬಜೆಟ್ ಮಾಡಿದಾಗ ಅಲ್ಲಿಗೆ ಸೇರ್ಪಡೆಗೊಂಡ ಗ್ರಾಮ ಎಂದು ಬರುವುದಿಲ್ಲ ಎಂದು ಭಾಮಿ ಅಶೋಕ್ ಶೆಣೈ ಹೇಳಿದರು.ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಸ್ವಚ್ಛ ಮತ್ತು ಸುಂದರ ಪುತ್ತೂರಿಗಾಗಿ ಉತ್ತಮ ಬಜೆಟ್ ಮಂಡನೆ ಆಗಿದೆ. ಆನ್‌ಲೈನ್ ಉದ್ಯಮ ಪರವಾನಿಗೆ ಸೇರಿದಂತೆ ಉತ್ತಮ ಯೋಜನೆಗೆ ಅಭಿನಂದನೆ ಸಲ್ಲಿಸಿದರು.ಶಕ್ತಿ ಸಿನ್ಹ ಅವರು ಮಾತನಾಡಿ ಉತ್ತಮ ಬಜೆಟ್ ನೀಡಿದ್ದೀರಿ. ಆದರೂ ಇಲ್ಲಿ ಸಿಬ್ಬಂದಿಗಳ ಕೊರತೆ ಇದೆ.ಅದನ್ನು ನಿವಾರಣೆ ಮಾಡಬೇಕು ಎಂದರು.ಗೌರಿ ಬನ್ನೂರು ಅವರು ಮಾತನಾಡಿ ಕುಡಿಯುವ ನೀರಿಗೆ ಸಂಬಂಧಿಸಿ ಕೊಳವೆ ಬಾವಿಗೆ ಮಳೆ ಕೊಯ್ಲು ಮಾಡುವ ಯೋಜನೆ ಮಾಡುವಂತೆ ಮನವಿ ಮಾಡಿದರು.ಮಳೆ ಕೊಯ್ಲುಗೆ ಸಂಬಂಧಿಸಿ ತೆರೆದ ಬಾವಿಗಳ ಸಮೀಕ್ಷೆ ಮಾಡುವಂತೆ ವಿನಂತಿಸಿದರು.ಸುಂದರ ಪೂಜಾರಿ ಬಡಾವು ಅವರು ಮಾತನಾಡಿ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದರು.ಬಜೆಟ್‌ನಲ್ಲಿ ಮಂಡಿಸಿರುವುದನ್ನು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ತರುವಂತೆ ಮನೋಹರ್ ಕಲ್ಲಾರೆ ವಿನಂತಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಸದಸ್ಯರಾದ ಶಶಿಕಲಾ ಸಿ.ಎಸ್, ಯಶೋದಾ ಪೆರಿಯತ್ತೋಡಿ,-ತಿಮಾತ್ ಝೆರಾ ಅಧ್ಯಕ್ಷರನ್ನು ಅಭಿನಂದಿಸಿದರು.ಸಭೆಯ ಕೊನೆಯಲ್ಲಿ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಪ್ರತಿ ಪಕ್ಷದಲ್ಲಿರುವಾಗ ಎಲ್ಲಿಯಾದರೂ ಸಣ್ಣ ಹುಳುಕು ತೆಗೆದು ಆ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಇದೆ.ಆದರೆ ಇವತ್ತು ಬಜೆಟ್‌ನ್ನು ಎಲ್ಲರೂ ಒಪ್ಪಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.ಆದ ಕಾರಣ ಪ್ರತಿಪಕ್ಷದವರಿಗೂ, ಅಧ್ಯಕ್ಷರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯರಾದ ಶೀನಪ್ಪ ನಾಯ್ಕ, ಯೂಸೂ- ಡ್ರೀಮ್, ವಸಂತ ಕಾರೆಕ್ಕಾಡು, ನವೀನ್ ಪೆರಿಯತ್ತೋಡಿ, ಪ್ರೇಮ್ ಕುಮಾರ್, ಶಿವರಾಮ ಸಪಲ್ಯ, ದೀಕ್ಷಾ ಪೈ, ಪ್ರೇಮಲತಾ ಜಿ ನಂದಿಲ, ಮಮತಾ ರಂಜನ್, ಮೋಹಿನಿ ವಿಶ್ವನಾಥ್, ಲೀಲಾವತಿ ಅಣ್ಣು ನಾಯ್ಕ, ರೋಬಿನ್ ತಾವ್ರೋ, ಇಂದಿರಾ ಪಿ, ರೋಹಿಣಿ ಕೇಶವ ಪೂಜಾರಿ, ಪೂರ್ಣಿಮ, ಅಭಿಯಂತರರಾದ ಶ್ರೀಧರ್ ನಾಯ್ಕ್, ಕೃಷ್ಣಮೂರ್ತಿ, ಕಚೇರಿ ಮೆನೇಜರ್ ಪಿಯೂಸ್ ಡಿಸೋಜ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಅಕೌಂಟೆಂಟ್ ರವಿಂದ್ರ, ಲೆಕ್ಕಿಗ ಸಿ.ಆರ್ ದೇವಾಡಿಗ, ಕಂದಾಯ ನಿರೀಕ್ಷಕ ರಾಧಾಕೃಷ್ಣ ಗೌಡ ಬನ್ನೂರು, ನೀರಿನ ವಿಭಾಗದ ವಸಂತ ಉಪಸ್ಥಿತರಿದ್ದರು.

ಮುಖ್ಯ ಯೋಜನೆಗಳು

ಈ ಬಾರಿಯ ಬಜೆಟ್‌ನಲ್ಲಿ ಹೊಸ ಯೋಜನೆಯಾಗಿ ಉದ್ಯಾನವನ ನಿರ್ಮಾಣಕ್ಕಾಗಿ ರೂ.೧ ಕೋಟಿ, ಉದ್ಯಮ ಪರವಾನಿಗೆ ಸುಲಭಗೊಳಿಸಲು `ಈಝಿ ಆ- ಡುಯಿಂಗ್ ಬ್ಯುಸಿನೆಸ್’ ಅಡಿಯಲ್ಲಿ ವ್ಯಾಪಾರ ತಂತ್ರಾಂಶದಲ್ಲಿ ಪರವಾನಿಗೆಯ ಸ್ವಯಂ ನವೀಕರಣ, ಜಾಹೀರಾತು, ಪ್ರಚಾರಕ್ಕೆ ಆನ್‌ಲೈನ್ ಮೂಲಕವೇ ಅರ್ಜಿ, ಆನ್‌ಲೈನ್‌ನಲ್ಲೇ ಅನುಮತಿ, ಕಟ್ಟಡ ಪರವಾನಿಗೆ ಬೈಲಾಗಳನ್ನು ಸಿದ್ದಪಡಿಸುವುದು, ನಗರಸಭೆಯ ಖಾಲಿ ಇರುವ ಅಽಕಾರಿಗಳು, ಹುದ್ದೆಗಳ ಭರ್ತಿ ಮಾಡಲು ಸರಕಾರದ ಹಂತದಲ್ಲಿ ಕ್ರಮವಹಿಸುವುದು, ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ, ರೇಬೀಸ್ ಲಸಿಕೆ ನೀಡುವುದು, ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಬೇರ್ಪಡಿಸಲು ಮತ್ತು ಮರುಬಳಕೆಗೆ ಮೊದಲನೆ ಹಂತದಲ್ಲಿ `ಮಟೀರಿಯಲ್ ರಿಕವರಿ -ಸಿಲಿಟಿ’ ತೆರೆಯುವುದು, ಮುಂದಿನ ದಿನ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾಡುವುದು,ಸಾರ್ವಜನಿಕರಿಗೆ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಲು ಅನುಕೂಲವಾಗುವಂತೆ `ಇ-ಸ್ವೀಕೃತಿ’ ಶೀರ್ಷಿಕೆಯಡಿಯಲ್ಲಿ ತಂತ್ರಾಂಶವನ್ನು ಗಣಕೀಕರಣಗೊಳಿಸುವುದು.ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ `ಜನಹಿತ’ ತಂತ್ರಾಂಶ ಅಭಿವೃದ್ಧಿ, ಜೊತೆಗೆ -ಸ್ಬುಕ್, ಟ್ವಿಟರ್, ವಾಟ್ಸ್‌ಆಪ್, ಇನ್‌ಸ್ಟಾಗ್ರಾಮ್, ವೆಬ್‌ಸೈಟ್, ಸ್ವಚ್ಛತಾ ಆಪ್, ಜನಹಿತ ಮೊಬೈಲ್ ಆಪ್ ಹಾಗೂ ದೂರವಾಣಿ ಮುಖಾಂತರ ದೂರುಗಳನ್ನು ಸಲ್ಲಿಸಿ ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದು.ಕಟ್ಟಡ ಪರವಾನಗಿ ಕೂಡಾ ಆನ್‌ಲೈನ್ ಮೂಲಕ ಜೊತೆಗೆ ಎಲ್ಲಾ ಪರವಾನಿಗೆಗಳಿಗೆ ಡಿಜಿಟಲ್ ಸಹಿ ಮೂಲಕ ಸಾರ್ವಜನಿಕರಿಗೆ ನೀಡುವುದು.೨೪ ಗಂಟೆ ಕುಡಿಯುವ ನೀರು, ಜಪಾನ್ ದೇಶದ `ಮಿಯಾವಾಕಿ’ ಮಾದರಿಯಲ್ಲಿ ಗಿಡ ಮರಗಳನ್ನು ನೆಡುವ ಪ್ರಾಯೋಗಿಕ ಕಾರ್ಯಕ್ರಮ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ, ಬಿರುಮಲೆ ಬೆಟ್ಟ ಅಭಿವೃದ್ಧಿ, ಮಕ್ಕಳಿಗೆ ಅಗತ್ಯವಾಗಿ ಬೇಕಾಗುವ ಉದ್ಯಾನವನ ಅಭಿವೃದ್ಧಿ ಮಾಡುವುದು ಸೇರಿದಂತೆ ಬಜೆಟ್ ಹೊರತಾಗಿ ನಗರೋತ್ಥಾನ ಯೋಜನೆಯಡಿಯಲ್ಲಿ ರೂ. ೩೦ ಕೋಟಿ ಅನುದಾನದಲ್ಲಿ ಹಲವು ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.

 • ವಿಪಕ್ಷ ಸದಸ್ಯರಿಂದಲೂ ಅಭಿನಂದನೆ
 • `ಈಝಿ ಆ- ಡುಯಿಂಗ್
  ಬ್ಯುಸಿನೆಸ್’ ಆನ್‌ಲೈನ್ ಮೂಲಕ
  ಉದ್ಯಮ ಪರವಾನಿಗೆ
 • ಡಿಜಿಟಲ್ ಸಹಿಯೊಂದಿಗೆ ಪರವಾನಿಗೆ
  ತ್ಯಾಜ್ಯಗಳ ವೈಜ್ಞಾನಿಕ
  ಬೇರ್ಪಡಿಸುವಿಕೆ, ಮರುಬಳಕೆಗೆ
  `ಮೆಟೀರಿಯಲ್ ರಿಕವರಿ -ಸಿಲಿಟಿ’
 • ತೆರಿಗೆ, ಶುಲ್ಕ ಪಾವತಿಗೆ
  ಇ-ಸ್ವೀಕೃತಿ ತಂತ್ರಾಂಶ
  ಸಾರ್ವಜನಿಕ ದೂರುಗಳಿಗಾಗಿ
  ಜನಹಿತ ತಂತ್ರಾಂಶ
 • ಜಲಸಿರಿ ಮೂಲಕ ೨೪ ಗಂಟೆಗಳ ಕಾಲ ನಿರಂತರ ನೀರು
  ಜಪಾನ್ ಮಿಯಾವಾಕಿ ಮಾದರಿಯಲ್ಲಿ
  ಗಿಡಮರಗಳ ನೆಡುವಿಕೆ
 • ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ

LEAVE A REPLY

Please enter your comment!
Please enter your name here