ಮಾರ್ಚ್ 29ರಂದು ಪುತ್ತೂರಿನಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ಪೂರ್ವಭಾವಿ ಸಭೆ

0

  • ಸಮ್ಮೇಳನ ಅಭೂತಪೂರ್ವ ವಿಜಯಕ್ಕೆ ಪ್ರಾಂತೀಯ ಅಧ್ಯಕ್ಷ ಹೇಮನಾಥ ಶೆಟ್ಟಿ ಕರೆ


ಪುತ್ತೂರು: ಲಯನ್ಸ್ ಜಿಲ್ಲೆ 317ಡಿ 7 ರ ಪ್ರಾಂತೀಯ ಸಮ್ಮೇಳನ ಮಾರ್ಚ್ 29ರಂದು ಪುತ್ತೂರಿನಲ್ಲಿ ನಡೆಯಲಿದ್ದು ಈ ಕುರಿತು ಪೂರ್ವಭಾವಿ ಸಭೆಯು ಪುತ್ತೂರು ಬೈಪಾಸ್ ರಸ್ತೆಯ ಅಶ್ಮಿ ಸಬಾಭವನದಲ್ಲಿ ಫೆ. 24 ರಂದು ಪ್ರಾಂತೀಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯನ್ನುದ್ದೇಶಿಸಿ ಮಾತನಾಡಿದ ಕಾವು ಹೇಮನಾಥ ಶೆಟ್ಟಿ ಮಾರ್ಚ್ 29 ರಂದು ಪುತ್ತೂರಿನಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ನಡೆಯಲಿದ್ದು ಸಮ್ಮೇಳನವು ಅದ್ದೂರಿಯಾಗಿ ನಡೆಯಲಿದ್ದು ಇದರ ಬಗ್ಗೆ ಚರ್ಚೆ ನಡೆಸಲು ವಿವಿಧ ಕ್ಲಬ್‌ಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಜಿಲ್ಲೆಯ ಹತ್ತು ಪ್ರಾಂತ್ಯಗಳ ಸಮ್ಮೇಳನದ ನಡೆದು ಕೊನೇಯ ಸಮ್ಮೇಳನ ಪುತ್ತೂರಿನಲ್ಲಿ ನಡೆಯಲಿದೆ. 10 ಪ್ರಾಂತೀಯ ಸಮ್ಮೇಳನಗಳೂ ಅದ್ದೂರಿಯಾಗಿ ನಡೆದಿದೆ. ಕೊಡಗು ಜಿಲ್ಲೆಯಲ್ಲೂ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಎಲ್ಲರ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಎಲ್ಲರ ಒಗ್ಗೂಡುವಿಕೆಯಿಂದ ನಮ್ಮ ಸಮ್ಮೇಳನ ಯಶಸ್ವಿಯಾಗಿ ನಡೆಯಲಿದೆ ಎಂದು ಹೇಳಿದರು.

ಮಾಜಿ ಗವರ್ನರ್ ಎಂ ಬಿ ಸದಾಶಿವರವರು ಮಾತನಾಡಿ ಲಯನ್ಸ್ ಪ್ರಾಂತೀಯ ಸಮ್ಮೇಳನ ಯಶಸ್ವಿಯಾಗುವಲ್ಲಿ ಎಲ್ಲರೂ ಸಹಕರಿಸಬೇಕು. ನಮ್ಮ ಸಮ್ಮೇಳನದಿಂದ ಸಮಾಜಕ್ಕೆ ಏನಾದರೂ ಪ್ರಯೋಜವಾಗುವ ರೀತಿಯಲ್ಲಿ ಮಾಡಬೇಕಿದೆ. ಹೊಸ ಇತಿಹಾಸವನ್ನೇ ನಿರ್ಮಿಸುವಲ್ಲಿ ನಾವೆಲ್ಲರೂ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಕ್ಲಬ್‌ಗಳ ಅಧ್ಯಕ್ಷರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಪೂರ್ವಭಾವಿ ಸಭೆಯಲ್ಲಿ ಪುತ್ತೂರ್‍ದ ಮುತ್ತು ಕ್ಲಬ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಆಲಂಕಾರು ದುರ್ಗಾಂಬಾ ಕ್ಲಬ್ ಅಧ್ಯಕ್ಷ ದಯಾನಂದ ರೈ ಮನವಳಿಕೆ,ಪಾಣಾಜೆ ಕ್ಲಬ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ,ಸುಳ್ಯ ಕ್ಲಬ್ ಅಧ್ಯಕ್ಷ ಆನಂದ ಪೂಜಾರಿ ,ಪಂಜ ಲಯನ್ಸ್ ಕ್ಲಬ್ ಸಂತೋಷ್ ಜಾಕೆ,ಸಂಪಾಜೆ ಲಯನ್ಸ್ ಕ್ಲಬ್ ಟೀನಾ ಚರಣ್,ಪುತ್ತೂರು ಲಯನ್ಸ್ ಕ್ಲಬ್ ರಾಜೇಶ್ ಶೆಟ್ಟಿ,ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಂಗಯ್ಯ ಶೆಟ್ಟಿ,ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೇಶ್ ಶೆಟ್ಟಿ,ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಆಚಾರ್ಯ,ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಲಿಜೋಜೋಶ್,ಪುತ್ತೂರ್‍ದ ಮುತ್ತು ಲಿಯೋ ಕ್ಲಬ್ ಅಧ್ಯಕ್ಷೆರಂಜಿತಾ ಸೇರಿದಂತೆ ಕ್ಲಬ್‌ನ ಸದಸ್ಯರುಗಳು ಉಪಸ್ಥಿತರಿದ್ದರು. ಪ್ರಾಯೋಜಕತ್ವ ಪುತ್ತೂರು ಕಾವು ಕ್ಲಬ್ ಅಧ್ಯಕ್ಷ ಪವನ್ ರಾಮ ಸ್ವಾಗತಿಸಿದರು. ಸುದರ್ಶನ್ ಪಡಿಯಾರ್ ವಂದಿಸಿದರು.

LEAVE A REPLY

Please enter your comment!
Please enter your name here