ನಿಡ್ಪಳ್ಳಿ: 18 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟದ ಪದಗ್ರಹಣ ಸಮಾರಂಭ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಿಡ್ಪಳ್ಳಿ, ಹಾಗೂ ಶ್ರೀ ಶಾಂತದುರ್ಗಾ ದೇವಸ್ಥಾನ ನಿಡ್ಪಳ್ಳಿ ಇವುಗಳ ಸಹಕಾರದೊಂದಿಗೆ  18 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನಿಡ್ಪಳ್ಳಿ ಒಕ್ಕೂಟದ ಪದಗ್ರಹಣ ಸಮಾರಂಭ ಫೆ.26 ರಂದು ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನಡೆಯಿತು ಪದಗ್ರಹಣ  ಸಭಾ ಸಮಾರಂಭವನ್ನು ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಿಯದರ್ಶಿನಿ ಅಂಗ್ಲಮಾಧ್ಯಮ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ ಮುಖ್ಯ ಭಾಷಣ ಮಾಡಿದರು. ಯೋಜನೆಯ ದ.ಕ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್,  ಒಕ್ಕೂಟದ ಬೆಟ್ಟಂಪಾಡಿ ವಲಯಾಧ್ಯಕ್ಷ ನವೀನ್ ಕುಮಾರ್.ಎಂ  ನಿಡ್ಪಳ್ಳಿ ಶಾಲಾ ಮುಖ್ಯ ಗುರು ಉದಯ ಕುಮಾರ್ ಶರವು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಯೋಜನೆಯ 

ತಾಲೂಕು ಯೋಜನಾದಿಕಾರಿ ಆನಂದ, ಪೂಜಾ ಸಮಿತಿ ಅಧ್ಯಕ್ಷ ಬಾಲಕೃಷ್ಣ. ಸಿ.ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ. ಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಒಕ್ಕೂಟದ ಪದಾಧಿಕಾರಿಗಳು ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ವೀಳ್ಯದೆಲೆ ಆಡಿಕೆ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ನವೀನ್ ಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು.ಒಕ್ಕೂಟದ ನೂತನ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ಸಹಕಾರ ಕೋರಿದರು.ಮಾಜಿ ಒಕ್ಕೂಟದ ಕಾರ್ಯದರ್ಶಿ ಲತಾ ನೂತನ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿಯವರಿಗೆ ದಾಖಲಾತಿ ಪುಸ್ತಕ ಹಸ್ತಾಂತರಿಸಿದರು.

ಬ್ರಹ್ಮಶ್ರೀ ದಿನೇಶ ಮರಡಿತ್ತಾಯ ಗುಮ್ಮಟಗದ್ದೆ ನೇತೃತ್ವದಲ್ಲಿ ಪೂಜಾ ವಿದಿ ವಿದಿ ವಿಧಾನಗಳು ನೆರವೇರಿತು. ಪೂಜಾ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಪಾಟಾಳಿ ಬಡಕ್ಕಾಯೂರು ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಾಲಿನಿ ಒಕ್ಕೂಟದ ಸಾಧನಾ ವರದಿ ವಾಚಿಸಿದರು.  ಗಂಗಾಧರ ಸಿ.ಎಚ್ ವಂದಿಸಿ, ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಪೂಜಾ ಸಮಿತಿ ಪದಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here