ಕರ್ನಾಟಕ ಚೇತನ ಮತ್ತು ಅರಳು ಮಲ್ಲಿಗೆ ಪ್ರಶಸ್ತಿಗೆ ಅರ್ಜಿ ಆಹ್ವಾನ

0

ಬೆಂಗಳೂರಿನ ಶ್ರೀ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಕಲಾ ಪ್ರತಿಭೋತ್ಸವ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 9೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿ ಹಾಗೂ ಭರತನಾಟ್ಯ, ಸಂಗೀತ, ಯಕ್ಷಗಾನ, ಕ್ರೀಡೆ, ಚಿತ್ರಕಲೆ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ಅರಳು ಮಲ್ಲಿಗೆ ಪ್ರಶಸ್ತಿ ನೀಡಲಿದ್ದಾರೆ. ಆಸಕ್ತರು ವಿವರಗಳನ್ನೊಳಗೊಂಡ ಮನವಿಯನ್ನು ಅ. ೨೫ರ ಒಳಗೆ ನಿರ್ದೇಶಕರು ಜ್ಞಾನಮಂದಾರ ಅಕಾಡೆಮಿ ನಂ. 113, ವಾಸ್ತು ಗ್ರೀನ್ ಕೋಡಿಪಾಲ್ ಗೇಟ್, ಕೆಂಗೇರಿ ಬೆಂಗಳೂರು -06 ಇಲ್ಲಿಗೆ ಕಳುಹಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here