ವಿಟ್ಲ‌: ಸಾಮಾಜಿಕ‌ ಜಾಲತಾಣದಲ್ಲಿ ಸಂಸದರ ವಿರುದ್ಧ ಆಕ್ಷೇಪಾರ್ಹ ಸಂದೇಶ ರವಾನೆ ಆರೋಪ – ಯುವಕನ ವಿಚಾರಣೆ – ಬಿಡುಗಡೆ

0

ವಿಟ್ಲ: ಸಾಮಾಜಿಕ ಜಾಲ ತಾಣದಲ್ಲಿ ಸಂಸದರ ಬಗ್ಗೆ ಆಕ್ಷೇಪಾರ್ಹ ಸಂದೇಶ ರವಾನಿಸಲಾಗಿದೆ  ಎಂದು ಆರೋಪಿಸಿ ಬಿಜೆಪಿ ಪಕ್ಷದ  ಕಾರ್ಯಕರ್ತರೋರ್ವರನ್ನು ವಿಟ್ಲದ ಬಿಜೆಪಿ ಮುಖಂಡರೊಬ್ಬರ ಮೌಖಿಕ ದೂರಿನಂತೆ ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ವಾಟ್ಸಪ್ ಗ್ರೂಪ್ ಒಂದರಲ್ಲಿ ದಿನಗಳ ಹಿಂದೆ ಸ್ವಪಕ್ಷದ ಕಾರ್ಯಕರ್ತರೋರ್ವರು ಸಂಸದರ ಬಗ್ಗೆ ಆಕ್ಷೇಪಾರ್ಹ ಸಂದೇಶ ರವಾನೆ ಮಾಡಿದ್ದರು ಎನ್ನಲಾಗಿದೆ‌. ಆನಂತರ ಸಂದೇಶ ರವಾನಿಸಿದ ವ್ಯಕ್ತಿ ಗ್ರೂಪ್ ನಿಂದ ಹೊರ ಹೋಗಿದ್ದರೆನ್ನಲಾಗಿದೆ. ಬಳಿಕದ ಬೆಳವಣಿಗೆಯಲ್ಲಿ  ಬಿಜೆಪಿ ಮುಖಂಡರ ಮೌಖಿಕ ದೂರಿನಂತೆ ಆ ಯುವಕನನ್ನು ವಿಟ್ಲ ಪೋಲಿಸ್ ಠಾಣೆಗೆ ಕರೆ ತಂದ ವಿಷಯ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ವಶದಲ್ಲಿದ್ದ ವ್ಯಕ್ತಿ ಮಾಡಿದ ಪೋಸ್ಟ್ ನಲ್ಲಿ ಯಾವುದೇ ಕೆಟ್ಟ ಹಾಗೂ ಅವಮಾನ ಮಾಡುವಂತಹ ಯಾವುದೇ ವಿಷಯ ಇಲ್ಲ ಎಂವುದುದನ್ನು ಪೊಲೀಸರಿಗೆ ಮನವರಿಕೆ ಮಾಡಿದ್ದರೆನ್ನಲಾಗಿದೆ‌‌.

ಬಳಿಕ ಪೊಲೀಸರು ಆತನನ್ನು ಬಿಡುಗಡೆ ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಸಂದೇಶ ರವಾನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ‌ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

LEAVE A REPLY

Please enter your comment!
Please enter your name here