ನೆಲ್ಯಾಡಿ: ಜೋಸೆಫ್ ಡಿಜಿಟಲ್ ಸ್ಟುಡಿಯೋ & ವೀಡಿಯೋ, ವರ್ಣ ಫ್ಯಾನ್ಸಿ ಸ್ಥಳಾಂತರಗೊಂಡು ಶುಭಾರಂಭ

0

 


ನೆಲ್ಯಾಡಿ: ಇಲ್ಲಿನ ಲೋಟಸ್ ಕಾಂಪ್ಲೆಕ್ಸ್‌ನಲ್ಲಿದ್ದ ಜೋಸೆಫ್ ಡಿಜಿಟಲ್ ಸ್ಟುಡಿಯೋ ಹಾಗೂ ವೀಡಿಯೋ, ಜೋಸೆಫ್ ಫ್ರೇಮ್ ವರ್ಕ್ಸ್ ಮತ್ತು ವರ್ಣ ಫ್ಯಾನ್ಸಿ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಂಭಾಗದಲ್ಲಿರುವ ಅವನಿ ಆರ್ಕೇಡ್‌ಗೆ ಫೆ.28ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.


ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್‌ನ ಧರ್ಮಗುರು ವಂ.ಫಾ.ಜಗದೀಶ್ ಪಿಂಟೋರವರು ಆಶೀರ್ವಚನ ವಿಧಿ ವಿಧಾನ ನೆರವೇರಿಸಿ ಶುಭಹಾರೈಸಿದರು. ಮಾಲಕ ಜೋಸೆಫ್ ಡಿ.ಸೋಜರವರ ತಾಯಿ ಪೌವ್ಲಿನ್ ಡಿ.ಸೋಜರವರು ಜೋಸೆಫ್ ಸ್ಟುಡಿಯೋವನ್ನು ಮತ್ತು ಅತ್ತೆ ಲೂಸಿ ಡಿ.ಸೋಜರವರು ವರ್ಣ ಫ್ಯಾನ್ಸಿ ಮಳಿಗೆ ಉದ್ಘಾಟಿಸಿದರು. ಅವನಿ ಆರ್ಕೇಡ್ ಮಾಲಕರೂ ಆದ, ಸಿದ್ಧಿವಿನಾಯಕ ಹೋಮಿಯೋಕ್ಲಿನಿಕ್‌ನ ವೈದ್ಯ ಡಾ.ಪ್ರಸಾದ್, ದ.ಕ ಹಾಗೂ ಉಡುಪಿ ಜಿಲ್ಲಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್‌ನ ಪುತ್ತೂರು ವಲಯ ಅಧ್ಯಕ್ಷರೂ ಆದ ಪುತ್ತೂರು ಭೂಮಿ ಸ್ಟುಡಿಯೋ ಮಾಲಕ ನಾಗೇಶ್, ನೆಲ್ಯಾಡಿ ಗಣೇಶ್ ಕಾಂಪ್ಲೆಕ್ಸ್ ಮಾಲಕ ರಾಮಣ್ಣ ಗೌಡ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್, ಉಪ್ಪಿನಂಗಡಿ ಪ್ರಸಾದ್ ಸ್ಟುಡಿಯೋ ಮಾಲಕ ಪ್ರಸಾದ್, ಫೋಟೋಗ್ರಾಫರ್ ಗಣೇಶ್ ಕಟ್ಟಪುಣಿ, ಉಪ್ಪಿನಂಗಡಿ ರೂಪಕಲಾ ಸ್ಟುಡಿಯೋ ಮಾಲಕ ಸುತನ್, ಪುತ್ತೂರು ಉದಯ ಸ್ಟುಡಿಯೋ ಮಾಲಕ ಉದಯಕುಮಾರ್, ಬೆಟ್ಟಂಪಾಡಿ ಛಾಯಾ ಕುಟೀರ ಸ್ಟುಡಿಯೋ ಮಾಲಕ ಮುರಳಿ ರಾಯರಮನೆ, ನೆಲ್ಯಾಡಿ ಓಂಕಾರ್ ಸ್ಟುಡಿಯೋ ಮಾಲಕ ಸುರೇಂದ್ರ, ನೆಲ್ಯಾಡಿ ಯತಿ ಸ್ಟುಡಿಯೋ ಮಾಲಕ ಯತೀಶ್, ನೆಲ್ಯಾಡಿ ನಿಸರ್ಗ ಸ್ಟುಡಿಯೋ ಮಾಲಕ ವಿಶ್ವನಾಥ್, ನೆಲ್ಯಾಡಿಯ ಫೋಟೋ ಗ್ರಾಫರ್ ಜೋಬ್ ನೆಲ್ಯಾಡಿ, ನೆಲ್ಯಾಡಿ ದುರ್ಗಾಶ್ರೀ ಟವರ್ ಮಾಲಕ ಸತೀಶ್ ಕೆ.ಎಸ್.ದುರ್ಗಾಶ್ರೀ, ಉದ್ಯಮಿ ರವಿಪ್ರಸಾದ್ ಆಚಾರ್ಯ, ಡಾ.ರವಿಶಂಕರ್ ನೆಲ್ಯಾಡಿ, ರಬ್ಬರ್ ವ್ಯಾಪಾರಸ್ಥ ಜಾನ್ಸನ್ ನೆಲ್ಯಾಡಿ, ಸೇರಿದಂತೆ ನೆಲ್ಯಾಡಿಯ ವರ್ತಕರು, ಮಾಲಕರ ಅಣ್ಣಂದಿರು, ಅತ್ತಿಗೆಯಂದಿರು, ಕುಟುಂಬಸ್ಥರು ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಶುಭಹಾರೈಸಿದರು.


ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಮಾಲಕ ಜೋಸೆಫ್ ಡಿ.ಸೋಜರವರು, ೧೯೯೦ರಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಂಡ ಜೋಸೆಫ್ ಸ್ಟುಡಿಯೋ ಈಗ ಆಧುನಿಕತೆಗೆ ತಕ್ಕಂತೆ ಡಿಜಿಟಲ್ ಆಗಿ ಬದಲಾವಣೆಗೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಇದೀಗ ಗ್ರಾಹಕರ ಅನುಕೂಲಕ್ಕಾಗಿ ನೆಲ್ಯಾಡಿ ಸರಕಾರಿ ಶಾಲೆಯ ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅವನಿ ಆರ್ಕೇಡ್‌ನ ನೆಲಮಹಡಿಗೆ ಸ್ಥಳಾಂತರಗೊಳಿಸಲಾಗಿದೆ. ಇಲ್ಲಿ ಫೋಟೋ, ವಿಡಿಯೋ, ೧೨*೧೮ ವರೆಗಿನ ಎಲ್ಲಾ ಕಲರ್ ಪ್ರಿಂಟ್‌ಗಳನ್ನು ಮಾಡಿಕೊಡಲಾಗುವುದು, ೧೨*೪೦ರ ವರೆಗಿನ ಫೋಟೋಗಳನ್ನು ಗ್ಲೋಸಿ, ಸ್ಪೈರಲ್, ಸ್ಪಾರ್‍ಕೆಲ್ ಲ್ಯಾಮಿನೇಶನ್, ಎಲ್ಲಾ ಸೈಜ್‌ನ ಫೋಟೋಗಳಿಗೆ ಫ್ರೇಮ್ ಹಾಕಿ ಕೊಡಲಾಗುವುದು. ಕಲರ್ ಜೆರಾಕ್ಸ್ ಹಾಗೂ ಇಂಟರ್‌ನೆಟ್ ಸೌಲಭ್ಯವೂ ಇದೆ. ವರ್ಣ ಫ್ಯಾನ್ಸಿಯಲ್ಲಿ ಎಲ್ಲಾ ರೀತಿಯ ಫ್ಯಾನ್ಸಿ ಐಟಂಗಳು, ಒನ್ ಗ್ರಾಂ ಗೋಲ್ಡ್ ಹಾಗೂ ಶೂಗಳು ಲಭ್ಯವಿದೆ. ಗ್ರಾಹಕರು ಈ ಹಿಂದಿನಂತೆ ನಮ್ಮೊಂದಿಗೆ ವ್ಯವಹರಿಸಿ ಪ್ರೋತ್ಸಾಹಿಸುವಂತೆ ಹೇಳಿದರು. ಮಾಲಕ ಜೋಸೆಫ್ ಡಿ.ಸೋಜರವರ ಪತ್ನಿ ಆಲೀಸ್ ಡಿ.ಸೋಜ, ಮಗ ಜೋಯಲ್ ಡಿ.ಸೋಜ, ಇನ್ನೊಬ್ಬ ಪುತ್ರ ಫೋಟೋಗ್ರಾಫರ್ ಆಗಿರುವ ಜೀವನ್ ಡಿ.ಸೋಜ, ಪುತ್ರಿ ಜಾಸ್ಮಿನ್ ಡಿ.ಸೋಜ, ಸಿಬ್ಬಂದಿಗಳಾದ ಶಾಲಿನಿ, ರಂಜಿತಾ, ಫೋಟೋಗ್ರಾಫರ್ ಸುಂದರ್‌ರವರು ಸಹಕರಿಸಿದರು.

LEAVE A REPLY

Please enter your comment!
Please enter your name here