ಮುಕ್ರಂಪಾಡಿ ಅಪಘಾತ ವಲಯದ ಹೆದ್ದಾರಿ ಬದಿ ಮಾವಿನ ಮಿಡಿ ವ್ಯಾಪಾರಿಗಳ ತೆರವು – ಮನವಿಗೆ ಸ್ಪಂದಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ನಗರ ಸಭೆಗೆ ಸಾರ್ವಜನಿಕರಿಂದ ಪ್ರಶಂ

0

  • ನಗರ ಸಭೆ, ಸಂಚಾರಿ ಪೋಲಿಸರಿಂದ ಕಾರ್ಯಚರಣೆ

 

ಪುತ್ತೂರು:ತೀವ್ರ ಅಪಘಾತ ವಲಯವಾದ ಮುಕ್ರಂಪಾಡಿ ಸಾಂತೋಮ್ ಗುರುಮಂದಿರ ಬಳಿ ರಸ್ತೆ ಬದಿ ಅನಧಿಕೃತವಾಗಿ ಮಾವಿನ ಮಿಡಿಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿರುವುದನ್ನು ನಗರ ಸಭೆ ಹಾಗೂ ಸಂಚಾರಿ ಪೊಲೀಸರು ಜಂಟಿ  ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.

 

ಮಾಣಿ-ಮೈಸೂರು ಹೆದ್ದಾರಿಯ ಮುಕ್ರಂಪಾಡಿ ಬಳಿ ಅಪಘಾತ ವಲಯದಲ್ಲಿ ರಸ್ತೆ ಬದಿ ಮಾವಿನ ಮಿಡಿ ಮಾರಾಟ ಮಾಡುತ್ತಿದ್ದು ಇದಕ್ಕಾಗಿ ಗ್ರಾಹಕರು ಹೆದ್ದಾರಿ ಬದಿ ತಮ್ಮ ವಾಹನಗಳನ್ನು ನಿಲ್ಲಿಸಿ ಮಾವಿನ ಮಿಡಿ ಖರೀದಿಸುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಅವರನ್ನು ತೆರವುಗೊಳಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸುವಂತೆ ಸ್ಥಳೀಯರು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ವಾರ್ಡ್ ಸದಸ್ಯೆ ಇಂದಿರಾ ಪುರುಷೋತ್ತಮ ಆರ್ಚಾರ್ಯ ಹಾಗೂ ಪೌರಾಯುಕ್ತ ಮಧು ಎಸ್.ಮನೋಹರ್‌ರವರಿಗೆ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪುತ್ತೂರು ನಗರ ಸಭೆಯು ಮಾ.8ರಂದು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿ ಬದಿ ಮಾವಿನ ಮಿಡಿ ಮಾರಾಟ ಮಾಡುತ್ತಿದ್ದವರನ್ನು ತೆರವುಗೋಳಿಸಿದ್ದಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಕೂಡಲೇ ಸ್ಪಂದನೆ ನೀಡಿರುವ ನಗರ ಸಭೆಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here