ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ಬಿಸಿ ನೀರಿನ ಘಟಕ ಉದ್ಘಾಟನೆ

0

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ
ಸರಕಾರಿ ಪ್ರೌಢಶಾಲೆ ಎಲಿಮಲೆಗೆ ಕೊಡಮಾಡಿದ ಕುಡಿಯುವ ಬಿಸಿ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮವು ಅ.17ರಂದು ನಡೆಯಿತು.
ರೂ.37,500 ಮೌಲ್ಯದ ಕುಡಿಯುವ ಬಿಸಿ ನೀರಿನ ಘಟಕವನ್ನು ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ರವರು ಉದ್ಘಾಟಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಧ್ಯೇಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಶುದ್ಧ ನೀರಿನ ಉಪಯೋಗದಿಂದ ವಿಧ್ಯಾರ್ಥಿಗಳು ನಿರಂತರ ಆರೋಗ್ಯವಂತರಾಗಿರಲಿ ಎಂದು ಶುಭಹಾರೈಸಿದರು.
ಎಸ್. ಡಿ.ಎಂ.ಸಿ ಅಧ್ಯಕ್ಷ ಜಯಂತ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಲಿಮಲೆ ಪ್ರೌಢಶಾಲೆ ಎಸ್. ಡಿ. ಎಂ. ಸಿಯ ನಿಕಟ ಪೂರ್ವ ಕಾರ್ಯಾಧ್ಯಕ್ಷರಾದ ವಿಶ್ವನಾಥ ಗೋಕುಲ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ದೇವಚಳ್ಳ ಗ್ರಾಮ ಪಂಚಾಯತು ಸದಸ್ಯ ಶೈಲೇಶ್ ಅಂಬೆಕಲ್ಲು , ದೇವಚಳ್ಳ- ಮಾವಿನಕಟ್ಟೆ ಒಕ್ಕೂಟದ ಉಪಾಧ್ಯಕ್ಷ ಸತೀಶ್ ಕುಲಾಲ್ , ಪ್ರಭಾರ ಸೇವಾಪ್ರತಿನಿಧಿ ಲೋಕೇಶ್ ಡಿ.ಆರ್., ಸಹಾಯಕ ಅಭಿಯಂತರಾದ ಮಣಿಕಾಂತ್, ಎಸ್.ಡಿ.ಎಂ.ಸಿ. ಸದಸ್ಯರಾದ ಧನಂಜಯ ಬಾಳೆ ತೋಟ, ಲೀಲಾಧರ ಗುಡ್ಡೆ ಬಟ್ಟೆಕಜೆ, ಶ್ರೀಮತಿ ವೀಣಾ ಪರ್ಲೆಡಿ, ಶ್ರೀಮತಿ ಪ್ರೇಮಲತಾ ರೈ ಸಂಕೇಶ, ಶ್ರೀಮತಿ ತಾಹಿರಾ ಹಾಗು ಪ್ರೌಢಶಾಲೆಯ ಎಲ್ಲಾ ಶಿಕ್ಷಕ ವರ್ಗ, ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಸಮಾಜವಿಜ್ಞಾನ ಶಿಕ್ಷಕ ವಸಂತ ನಾಯಕ್ ಡಿ ಸ್ವಾಗತಿಸಿ, ಮುಖ್ಯಶಿಕ್ಷಕ ಶ್ರೀಮತಿ ಸಂಧ್ಯಾ ಕೆ. ಪ್ರಾಸಾವಿಕ ನುಡಿಗಳನ್ನಾಡಿದರು. ಆಂಗ್ಲಭಾಷಾ ಶಿಕ್ಷಕ ಸುಂದರ ಕೆ. ಧನ್ಯವಾದ ಸಮರ್ಪಿಸಿ , ಗಣಿತ ಶಿಕ್ಷಕ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here