ಸುಳ್ಯ :ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ವಾರ್ಡಿಗೆ ಸಿಹಿ ತಿಂಡಿ ವಿತರಣೆ ನಡೆಸಿ ಸೌಹಾರ್ದತೆ ಮೆರೆದ ನಗರ ಪಂಚಾಯತ್ ಸದಸ್ಯ

0

 

ಸುಳ್ಯ ನಗರ ಪಂಚಾಯತ್ ಕೆರೆಮೂಲೆ ವಾರ್ಡಿನ ಸದಸ್ಯ ಎಂ ವೆಂಕಪ್ಪಗೌಡ ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 25 ರಂದು ತಾನು ಪ್ರತಿನಿಧಿಸಿದ ವಾರ್ಡಿನ ಪ್ರತಿಯೊಂದು ಮನೆ ಮನೆಗೆ ತೆರಳಿ ಸಿಹಿತಿಂಡಿ ವಿತರಿಸಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಶುಭ ಹಾರೈಸಿದರು.


ತನ್ನ ವಾರ್ಡಿನ ವಿನಾಯಕ ಹೋಟೆಲ್ ನವರ ಮನೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂದರ್ಭದಲ್ಲಿ ವಿನಾಯಕ ಹೋಟೆಲ್ ಮಾಲಕ ಪ್ರಸಾದ್, ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕರ್, ಇಂಟಕ್ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಫಿ ಕುತ್ತಮೊಟ್ಟೆ  ಸ್ಥಳೀಯ ನಿವಾಸಿಗಳಾದ ರಾಜೇಂದ್ರ ಭಟ್, ಹಿರಿಯರಾದ ಬಾಬಾ ಹಾಜಿ, ಸ್ಥಳೀಯರಾದ ನೌಶಾದ್ ಕೆರೆಮೂಲೆ, ಶಹೀದ್ ಪಾರೆ, ರಘು ಕೆರೆಮೂಲೆ, ಕಯ್ಯುಬ್ ಕಟ್ಟೆಕಾರ್,ಶಿಯಾಬ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಿಹಿ ತಿಂಡಿ ವಿತರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಧರ್ಮದಲ್ಲೂ ಹಬ್ಬಾಚರಣೆ ಕೇವಲ ಅವರವರ ಧರ್ಮಕ್ಕೆ ಮಾತ್ರ ಸೀಮಿತ ಎಂಬ ರೀತಿಯಲ್ಲಿ ಆಚರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಕಾರಣ ಮತಸಾಮರಸ್ಯ ಎಲ್ಲಿಯೂ ಕೂಡ ಕಂಡು ಬರುತ್ತಿಲ್ಲ.
ಹಬ್ಬ ಆಚರಣೆಯಲ್ಲಿಯೂ ಕೂಡ ಜನರು ಭಯಭೀತರಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಈ ಬಾರಿಯ ದೀಪಾವಳಿ ಹಬ್ಬವನ್ನು ನಮ್ಮ ಪೂರ್ವಿಕರು ಹಬ್ಬ ಹರಿದಿನ ಆಚರಿಸಿಕೊಂಡತೆ ಮಾಡಬೇಕು ಎನ್ನುವ ಉದ್ದೇಶದಿಂದ ನನ್ನ ವಾರ್ಡಿನ ಪ್ರತಿಯೊಂದು ಮನೆ ಮನೆಗಳಿಗೂ ತೆರಳಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಬೇದಭಾವವಿಲ್ಲದೆ ಎಲ್ಲರ ಮನೆಗಳಿಗೂ ಸಿಹಿತಿಂಡಿಯನ್ನು ಹಂಚಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದೇನೆ. ಇದರಿಂದ ಮನಸ್ಸಿಗೆ ತುಂಬಾ ಸಂತೋಷ ತಂದಿದೆ ಎಂದು ಅವರು ಹೇಳಿದರು.
ಸುಮಾರು 160ಕ್ಕೂ ಹೆಚ್ಚು ಮನೆಗಳಿಗೆ ಇಂದು ಭೇಟಿ ನೀಡಿ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದೇನೆ ಅಷ್ಟೇ ಪ್ರೀತಿಯಿಂದ ಎಲ್ಲರೂ ನನ್ನನ್ನು ಬರಮಾಡಿಕೊಂಡಿದ್ದಾರೆ. ಅದು ತುಂಬಾ ಸಂತೋಷ ತಂದಿದೆ.
ನನ್ನ ವಾರ್ಡಿನ ಇಬ್ಬರು ಪುಟಾಣಿಗಳಾದ ಸಂತೋಷ್ ಮತ್ತು ದ್ದ್ರಿಶಾಂತ್ ಎಂಬ ಮಕ್ಕಳು ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಾರಣ ಸಣ್ಣ ಮಕ್ಕಳಲ್ಲಿ ಯಾವುದೇ ರೀತಿಯ ಜಾತಿ ಭೇದ ಮನೋಭಾವ ಇರುವುದಿಲ್ಲ. ಅವರ ನಿಷ್ಕಳಂಕ ಮನಸ್ಸು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು.
ನಗರ ಪಂಚಾಯತಿ ಸದಸ್ಯರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here