ಕಾಣಿಯೂರು ಗ್ರಾ.ಪಂ.ಆಡಳಿತ ಅವಧಿ ಒಂದು ವರ್ಷ ಪೂರೈಸಿದ ಹಿನ್ನಲೆ- ಗ್ರಾಮಸ್ಥರ ಸಭೆ

0

  • ಮೆಸ್ಕಾಂ ಸಬ್‌ಸ್ಟೇಶನ್ ಸ್ಥಾಪನೆಗೆ ಸರಕಾರಕ್ಕೆ ಮನವಿ ಮಾಡಲು ನಿರ್ಧಾರ
  • ಜನತೆಯ ಸಹಕಾರದಿಂದ ಗ್ರಾಮದ ಅಭಿವೃದ್ದಿ ಸಾಧ್ಯವಾಗಿದೆ- ಗಣೇಶ್ ಉದನಡ್ಕ

ಚಿತ್ರ: ಸುಧಾಕರ್ ಕಾಣಿಯೂರು

 

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ಆಡಳಿತ ಅವಧಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನಲೆಯಲ್ಲಿ ಪಂಚಾಯತ್ ವ್ಯಾಪ್ತಿಯ ಮುಂದಿನ ಅಭಿವೃದ್ಧಿಯ ಬಗ್ಗೆ ಗ್ರಾಮಸ್ಥರ ಪ್ರಮುಖರ ಸಭೆಯು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಣಿಯೂರಿನ ಸಭಾಭವನದಲ್ಲಿ ಮಾ.15ರಂದು ನಡೆಯಿತು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷರು, ಬೆಳಂದೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಕಾಣಿಯೂರು ಗ್ರಾಮ ಪಂಚಾಯತ್ ಆಡಳಿತ ಅವಧಿಯು ಗ್ರಾಮಸ್ಥರ ಸಹಕಾರದಿಂದ ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದ್ದು, ಗ್ರಾಮದ ಜನತೆಯ ಸಹಕಾರದಿಂದ ಗ್ರಾಮದ ಅಭಿವೃದ್ದಿ ಸಾಧ್ಯವಾಗಿದೆ. ಈಗಾಗಲೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೆಸ್ಕಾಂ ಸಬ್‌ಸ್ಟೇಶನ್ ಸ್ಥಾಪಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದು, ಚಾರ್ವಾಕ ಗ್ರಾಮದ ಮುದುವ ಎಂಬಲ್ಲಿ ಈಗಾಗಲೇ ಸುಮಾರು 70ಸೆಂಟ್ಸ್ ನಿವೇಶನವನ್ನು ಕಾದಿರಿಸಲಾಗಿದೆ. ಈ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿದೆ. ಮುಂದಿನ ಹಂತವಾಗಿ ಸಮಿತಿಗಳನ್ನು ರಚಿಸಿಕೊಂಡು ಸಬ್‌ಸ್ಟೇಶನ್‌ನ ಬೇಡಿಕೆ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೇ ಕಾಣಿಯೂರಿನಲ್ಲಿ ಮೆಸ್ಕಾಂ ಶಾಖಾ ಕಚೇರಿಯನ್ನು ತೆರೆಯಲು ಗ್ರಾ.ಪಂ.ನಲ್ಲಿಯೇ ಉಚಿತವಾಗಿ ಕಚೇರಿಯನ್ನು ನೀಡಲು ನಿರ್ಧರಿಸಿದೆ ಎಂದರು. ರಾಜ್ಯ ಸಚಿವರಾದ ಎಸ್ ಅಂಗಾರ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಅವರ ವಿಶೇಷ ಅನುದಾನದಲ್ಲಿ ದೋಳ್ಪಾಡಿ ರಸ್ತೆ ಅಭಿವೃದ್ಧಿಗೆ ೨ಕೋಟಿ, ಕಾಣಿಯೂರು ಭಜನಾ ಮಂದಿರ ರಸ್ತೆ ಅಭಿವೃದ್ಧಿಗೆ 30ಲಕ್ಷ, ಚಾರ್ವಾಕ ಓಡದಕರೆ ರಸ್ತೆ ಅಭಿವೃದ್ಧಿಗೆ 10ಲಕ್ಷ, ಕೂರೇಲು ರಸ್ತೆ ಅಭಿವೃದ್ಧಿಗೆ ೧೦ಲಕ್ಷ, ಬೈತಡ್ಕ – ಗುಜ್ಜರ್ಮೆ ರಸ್ತೆ ಅಭಿವೃದ್ಧಿಗೆ ೩ಕೋಟಿ, ಕಾಣಿಯೂರು ಗ್ರಾ.ಪಂ.ಸಭಾಂಗಣ ನಿರ್ಮಾಣಕ್ಕೆ 20ಲಕ್ಷ, ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ 25ಲಕ್ಷದಲ್ಲಿ ಕಾಮಗಾರಿಗಳು ನಡೆಯುತ್ತಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಜಲಜೀವನ ಮಿಷನ್ ಮನೆ ಮನೆಗೆ ಗಂಗೆ ಅತ್ಯುತ್ತಮ ಯೋಜನೆಯು ಇದಾಗಿದ್ದು, ಈಗಾಗಲೇ ೧ಕೋಟಿ ೯೦ಲಕ್ಷ ಮಂಜೂರುಗೊಂಡಿದ್ದು, ಮುಂದೆ ಪಂಚಾಯತ್ ವ್ಯಾಪ್ತಿಯ ೩ಗ್ರಾಮಕ್ಕೆ ಸಂಬಂಧಪಟ್ಟ ಹಾಗೇ ಪ್ರತಿ ಮನೆಗೆ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.

ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಬನೇರಿ ವೇದಿಕೆಯಲ್ಲಿ ಉಪಸ್ಥಿತರದ್ದರು. ಧರ್ಮೇಂದ್ರ ಗೌಡ ಕಟ್ಟತ್ತಾರು, ರಾಮಣ್ಣ ಗೌಡ ಮುಗರಂಜ, ವಿಶ್ವನಾಥ ರೈ ಮಾದೋಡಿ, ವಿಶ್ವನಾಥ ದೇವಿನಗರ, ಸತ್ಯೇಶ್ ಕಲ್ಲೂರಾಯ, ವಸಂತ ದಲಾರಿ, ನೋಣಪ್ಪ ಗೌಡ ಕೀಲೆ, ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಅಂಬಾಕ್ಷಿ ಕೂರೇಲು, ಗಂಗಮ್ಮ ಗುಜ್ಜರ್ಮೆ, ಸುರೇಶ್ ಬಂಡಾಜೆ, ರಾಮಚಂದ್ರ ಗೌಡ ಕೋಲ್ಪೆ, ಉಮೇಶ್ ಮರ್ಲಾಣಿ, ಬಾಲಕೃಷ್ಣ ಗೌಡ ಇಡ್ಯಡ್ಕ, ತಾರಾನಾಥ ಇಡ್ಯಡ್ಕ, ಕೊರಗಪ್ಪ ಗೌಡ ಇಡ್ಯಡ್ಕ, ಸುಂದರ ಬೆದ್ರಾಜೆ, ಲಕ್ಷ್ಮಣ ಬೆದ್ರಂಗಳ, ಲಕ್ಷ್ಮಣ ಗೌಡ ಮುಗರಂಜ, ಪುಟ್ಟಣ್ಣ ಗೌಡ ಮುಗರಂಜ, ಪರಮೇಶ್ವರ ಗೌಡ ಅನಿಲ, ಬೆಳಿಯಪ್ಪ ಗೌಡ ದೇವರತ್ತಿಮಾರು, ವೆಂಕಪ್ಪ ಗೌಡ. ಗೋಪಾಲಕೃಷ್ಣ ಬಾರೆಂಗಳ, ರಾಜೇಶ್ ಮೀಜೆ, ತಿಮ್ಮಪ್ಪ ಮೀಜೆ, ಯಶೋಧರ ಬಿರೋಳಿಗೆ, ರಾಧಾಕೃಷ್ಣ ಎಂ, ಜಯರಾಮ ಕೊಪ್ಪ, ಆನಂದ ಇಡ್ಯಡ್ಕ, ಮುರಳೀಧರ. ಟಿ, ಧರ್ಮಪಾಲ ರೈ ಪಿಜಕ್ಕಳ, ಹರೀಶ್ ಪೈಕ, ವೀರಪ್ಪ ಗೌಡ ಉದ್ಲಡ್ಡ, ಜನಾರ್ಧನ ಗೌಡ ಕೆಳಗಿನಕೇರಿ, ವಿಶ್ವನಾಥ ಖಂಡಿಗ, ದಯಾನಂದ ಅಂಬುಲ, ಶಿವಪ್ಪ, ಸುರೇಶ್ ಓಡಬಾಯಿ, ಶೀನಪ್ಪ ಮೀಜೆ, ಪದ್ಮನಾಭ ಅಂಬುಲ, ಗೋಪಾಲ ಗುಜ್ಜರ್ಮೆ, ರಾಮಯ್ಯ ಗೌಡ ಕೂರೇಲು, ಉಲ್ಲಾಸ್, ಆನಂದ, ಸತೀಶ್ ಅಂಬುಲ, ಜಯಚಂದ್ರ, ಯಶವಂತ್ ಗೌಡ, ಪುಟ್ಟಣ್ಣ ಗೌಡ ಅಕ್ಕಾಜೆ,ಕುಲಕೀರ್ತಿ ಉಪ್ಪಡ್ಕ ಮತ್ತೀತರರು ಉಪಸ್ಥಿತರಿದ್ದರು. ಶಿವರಾಮ ರೈ ಪಿಜಕ್ಕಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾಣಿಯೂರು ಗ್ರಾಮ ಪಂಚಾಯತ್ ಉತ್ತಮ ಆಡಳಿತದೊಂದಿಗೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದು, ಕೊರೋನಾ ಸಂದರ್ಭದಲ್ಲಿ ಪಂಚಾಯತ್ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಉತ್ತಮವಾಗಿ ಸ್ಫಂದಿಸಿದೆ ಎಂದರು.

ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ರಾಜ್ಯದ ಸಚಿವ ಎಸ್ ಅಂಗಾರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಅವರ ವಿಶೇಷ ಅನುದಾನದಲ್ಲಿ ದೋಳ್ಪಾಡಿ ರಸ್ತೆ ಅಭಿವೃದ್ಧಿಗೆ ೨ಕೋಟಿ, ಕಾಣಿಯೂರು ಭಜನಾ ಮಂದಿರ ರಸ್ತೆ ಅಭಿವೃದ್ಧಿಗೆ ೩೦ಲಕ್ಷ, ಚಾರ್ವಾಕ ಓಡದಕರೆ ರಸ್ತೆ ಅಭಿವೃದ್ಧಿಗೆ ೧೦ಲಕ್ಷ, ಕೂರೇಲು ರಸ್ತೆ ಅಭಿವೃದ್ಧಿಗೆ ೧೦ಲಕ್ಷ, ಬೈತಡ್ಕ – ಗುಜ್ಜರ್ಮೆ ರಸ್ತೆ ಅಭಿವೃದ್ಧಿಗೆ ೩ಕೋಟಿ, ಕಾಣಿಯೂರು ಗ್ರಾ.ಪಂ.ಸಭಾಂಗಣ ನಿರ್ಮಾಣಕ್ಕೆ ೨೦ಲಕ್ಷ, ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ೨೫ಲಕ್ಷದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು

LEAVE A REPLY

Please enter your comment!
Please enter your name here