ನೆಟ್ಟಾರು:ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರ ಸಾವರ್ಕರ್ ಶಾಖೆ ವತಿಯಿಂದ ಸಾರ್ವಜನಿಕ ಗೋಪೂಜೆ

0

 

 

ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರ ಸಾವರ್ಕರ್ ಶಾಖೆ ನೆಟ್ಟಾರು ವತಿಯಿಂದ ಸಾರ್ವಜನಿಕ ಗೋಪೂಜೆ ಕಾರ್ಯಕ್ರಮವು ಅಕ್ಟೋಬರ್ 26ರಂದು ಬೆಳ್ಳಾರೆ ಬಿಜೆಪಿ ಶಕ್ತಿ ಕೇಂದ್ರ ಕಚೇರಿ ನೆಟ್ಟಾರಿನಲ್ಲಿ ನಡೆಯಿತು.ಸಿ ವಿ ಭಟ್ ಕಜೆ ಗೋಪೂಜೆ ನೆರವೇರಿಸಿದರು. ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಸ್ವರಾಜ್ಯ ತಂಡದ ನಾಯಕರಾದ, ಸ್ವಯಂ ನಿವೃತ್ತ ಕಸ್ಟಮ್ಸ್ ಅಧಿಕಾರಿ ಶ್ರೀ ಆರ್ ಕೆ ಭಟ್ ಕುರುಂಬುಡೇಲುರವರು ಗೋಪೂಜೆಯ ಮಹತ್ವದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.ಸಭಾಧ್ಯಕ್ಷತೆಯನ್ನು ವಿ ಹೆಚ್ ಪಿ ವೀರ ಸಾವರ್ಕರ್ ಶಾಖೆಯ ಅಧ್ಯಕ್ಷ ದಯಾ ಸಾಲ್ಯಾನ್ ವಹಿಸಿದ್ದರು.

ವೇದಿಕೆಯಲ್ಲಿ ಬಜರಂಗದಳ ಸಂಚಾಲಕ ಮಧುಪ್ರಸಾದ್ ನೆಟ್ಟಾರು,ಪ್ರಗತಿಪರ ಕೃಷಿಕರಾದ ಅರುಣ ಶಂಕರ ನೆಟ್ಟಾರು ಉಪಸ್ಥಿತರಿದ್ದರು. ಸಭೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ, ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು,ವಾರ್ಡ್ ಸದಸ್ಯೆ ಶ್ವೇತಾ ನೆಟ್ಟಾರು,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಚಾವಡಿಬಾಗಿಲು,ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ಅಧ್ಯಕ್ಷ ಮನೋಜ್ ರೈ,ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷ ರಾಜೇಶ್ ಶಾನುಭೋಗ್,ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಶ್ರೀಜಿತ್ ರೈ,ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಊರವರು ಹಾಜರಿದ್ದರು. ವೆಂಕಟ್ರಮಣ ಗೌಡ ನೆಟ್ಟಾರು ಸಿಹಿತಿಂಡಿ ಹಾಗೂ ಪಾನೀಯದ ವ್ಯವಸ್ಥೆ ಮಾಡಿದರು. ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ವಸಂತ್ ನೆಟ್ಟಾರು ಸ್ವಾಗತಿಸಿ, ಅಧ್ಯಕ್ಷ ದಯಾ ಸಾಲ್ಯಾನ್ ಧನ್ಯವಾದವಿತ್ತರು. ಶೈಲೇಶ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here