ಕೊಕ್ಕೋ ಬೀಜ ಸರಬರಾಜು ವ್ಯವಹಾರದಲ್ಲಿ ಕ್ಯಾಂಪ್ಕೋಗೆ ವಂಚನೆ ಪ್ರಕರಣ ಆರೋಪಿಗೆ ಜಾಮೀನು ಮಂಜೂರು

0

ಪುತ್ತೂರು:ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಬೀಜ ಸರಬರಾಜು ವ್ಯವಹಾರದಲ್ಲಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬಂಟ್ವಾಳ ತಾಲೂಕಿನ ಶಂಭೂರು ಎಂಬಲ್ಲಿರುವ ಕೋಸ್ಪಾಕ್ ಏಶಿಯಾ ಇಂಟರ್‌ನ್ಯಾಷನಲ್ ಕಂಪೆನಿ ಲಿ.ಎಂಬ ಕೊಕ್ಕೋ ಸರಬರಾಜು ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಬಂಟ್ವಾಳ ಶಂಭೂರು ಪಿಂಟೋ ಕಾಟೇಜ್ ನಿವಾಸಿ ವಿನ್ಸಿ ಡೆನಿಯಲ್ ಪಿಂಟೋ ಎಂಬವರನ್ನು ಪ್ರಕರಣದ ಆರೋಪಿಯಾಗಿ ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ಆರೋಗ್ಯದಲ್ಲಿ ಏರುಪೇರುಂಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಚೇತರಿಕೆಯಾದ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ನ್ಯಾಯಾಲಯ ಆರೋಪಿಯನ್ನು 4 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಪೊಲೀಸ್ ಕಸ್ಟಡಿ ಅವಧಿ  ಮುಕ್ತಾಯಗೊಂಡ ಬಳಿಕ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ಮಂಗಳೂರು ನ್ಯಾಯವಾದಿಗಳಾದ ಅರುಣ್ ಬಂಗೇರ ಮತ್ತು ರಾಕೇಶ್ ಬಲ್ನಾಡ್ ವಾದಿಸಿದರು.

 

ಕೊಕ್ಕೋ ಬೀಜ ಸರಬರಾಜು ವ್ಯವಹಾರದಲ್ಲಿ ಕ್ಯಾಂಪ್ಕೋಗೆ ವಂಚನೆ

LEAVE A REPLY

Please enter your comment!
Please enter your name here