ಯಾವ್ಯಾವ ಕೆಲಸಕ್ಕೆ ಎಷ್ಟೆಷ್ಟು ಲಂಚ ಕೊಡಬೇಕು – ಲಂಚ ಕೊಟ್ಟರೆ ಎಷ್ಟು ದಿನದಲ್ಲಿ ಕೆಲಸ-ಕೊಡದಿದ್ದರೆ?

0

ಸಾರ್ವಜನಿಕರ ಗಮನಕ್ಕೆ :ಪತ್ರಿಕೆಯಲ್ಲಿ ಪಟ್ಟಿ ಬಿಡುಗಡೆ ಮಾಡಲು ಮಾಹಿತಿ ನೀಡಿ

ಸುದ್ದಿಯ ಕಾರ್ಯಕ್ಕೆ ನಮೋ..ನಮೋ… ಕೈಜೋಡಿಸಿ ನಮಸ್ಕಾರ, ಸುದ್ದಿ ಬಿಡುಗಡೆಯಲ್ಲಿ “ಯಾವ ಕೆಲಸಕ್ಕೆ ಎಷ್ಟು? ದರ ನಿಗದಿ” ಒಳ್ಳೆಯ ವಿಚಾರ, ತಾಲೂಕು ಕಛೇರಿಯಲ್ಲಿ ಅರ್ಜಿ ಕೊಡುವುದಕ್ಕೆ ಯಾವುದೇ ಲಂಚ ಬೇಡ. (ಪುಣ್ಯಕ್ಕೆ) ಆಮೇಲೆ ಆಭಿಲೇಖಾಲಯದ ಭೇಟಿಯಾಗದೇ ಆಗುವುದಿಲ್ಲ. ಕಾರಣ ಭೂ ದಾಖಲೆ, ನಕ್ಷೆ, NCRSR, LRYT   ಇತ್ಯಾದಿ ಇತ್ಯಾದಿ ದಾಖಲೆ ಸಿಗುವುದೇ ಅಲ್ಲಿ ಹೀಗೆ ಅರ್ಜಿ ಕೊಟ್ಟು ಹೋದರೆ ೧೫ ದಿನ ಬಿಡಿ, ತಿಂಗಳುಗಟ್ಟಲೆಯಾದರೂ ದಾಖಲೆ ಸಿಗುವುದಿಲ್ಲ. ನಿಮ್ಮ ಅರ್ಜಿಯಲ್ಲಿ ನಾವು ಕೇಳಿದ್ದು ಇಲ್ಲ. ರೂ 100 ಕೊಟ್ಟರೆ 2 ದಿನದಲ್ಲಿ ರೆಡಿ. ರೂ.200/- ಕೊಟ್ಟರೆ ನಾಳೆಗೆ ರೆಡಿ. ರೂ. 500/- ಕೊಟ್ಟರೆ ಇತ್ತೆ ಕೊರ್ಪೆ. D.T ಸಹಿ ಪಾಡ್‌ಪ್ಪಾದ್ ಕೊರ್‍ಪೆ. ದುಡ್ಡು ಕೊಡದಿದ್ರೆ ಜೆರಾಕ್ಸ್ ಮೆಶಿನ್ ಸರಿ ಇಲ್ಲ. D.T R.I ಇಲ್ಲ. ನನಗೆ ಇದೊಂದೇ ಕೆಲ್ಸ ಅಲ್ಲ. ಮೀಟಿಂಗ್ ಇದೆ. ನಾನೊಬ್ಬನೇ ಇರೋದು. ಇನ್ನು ಸರ್ವೆ ಸೆಕ್ಷನ್ ಅಬ್ಬಾ ಅಲ್ಲೊಬ್ಬ FMB ಹುಡುಕುವವ ಭಾರಿ ಗಡಿಬಿಡಿ. ಅರ್ಜಿ… ಅರ್ಜಿ… ಕೊ…ಕೊರ್ತಾರಾ… ಇಪ್ಪಡ್.. ಅದು ಇಲ್ಲ. ಮಿಸ್ ಆಗಿದೆ. ಯಾವಾಗ ಕೊಟ್ಟದ್ದು.. ದಬಾಯಿಸಿದಾಗ ನಾವು ಅಲ್ಲಿಂದ ಓಡಿ ಬರಬೇಕಷ್ಟೇ. ರೂ.100, 200 ಕೊಟ್ಟ ಕೂಡ್ಲೆ ಈಗ… ಇತ್ತೆ ಕೊರ್ಪೆ. ಇನ್ನು ಗಡಿ ಗುರುತು ಅರ್ಜಿಕೊಟ್ಟು ಅಳತೆಗೆ ಸೆರ್ವೆಯರ್ ಬಂದ್ರೆ ಕಥೆ ಬೇರೆಯೇ. ಏನ್ರೀ… ನನಗೆ ಪುರುಷೋತ್ತಿಲ್ಲ. ಇಡೀ ತಾಲೂಕು ಜವಾಬ್ದಾರಿ ನಮಗಿದೆ. ನಾಳೆ ಬನ್ನಿ. ಯಾವಾಗ ಹೇಳ್ತೇನೆ. ನಾಳೆ ಹೋದಾಗ 2೨ದಿನ ಕಳೆದು ಹೋದಾಗ ಆ ಆಸಾಮಿ ಇಲ್ಲ. ಫೋನ್ ಮಾಡಿದ್ರೆ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಸಿಕ್ಕಿದರೆ ನನ್ನೊಟ್ಟಿಗೆ ಬರುವವರಿಗೆ ಚೈನು ಹಿಡಿಯುವವರಿಗೆ ನನ್ನ ಕಾರಿನ ಪೆಟ್ರೋಲ್ ಎಲ್ಲ ಸೇರಿ (FMB ನಕ್ಷೆ ನಾನು ಹೇಗಾದರೂ ಮಾಡಿ ಆಫೀಸ್‌ನಿಂದ ತರ್ತೇನೆ. ಇಲ್ಲದಿದ್ದರೆ ಸರೀ ನಕ್ಷೆ ಆಗುವುದಿಲ್ಲ). 8-9000 ರೂ . ಸಾಕು. ರೂ.8000/-, 9000/- . ಯಾಕೆ ಗೊತ್ತೇ? ನಮಗೆ ಅಷ್ಟು ಕೆಲ್ಸ ಇದೆ. ಅದ್ರಲ್ಲಿ ನಮ್ಮ ಮೇಲಾಧಿಕಾರಿಗಳಿಗೆ ಕೊಡಬೇಕು. ಇಲ್ಲದಿದ್ದರೆ ಅವ್ರು ಸಹಿ ಹಾಕುವುದಿಲ್ಲ. ಯಾರತ್ರ ಹೇಳುವುದು ಈ ಗೋಳಾಟ? ಇಲ್ಲಿ ಮೊದಲ ಪ್ರಾಶಸ್ತ್ಯ ರಿಯಲ್ ಎಸ್ಟೇಟ್ ಮಾಡುವವರ ಅಳತೆ. ಕಾರಣ ದುಡ್ಡು ಎಳೆಯಲು ಸುಲಭ ಅಲ್ಲ. 420 ಎಲ್ಲಾ ಕೆಲಸ ಮಾಡಬಹುದು-ಮಾಡಿ ಕೊಡಬೇಕು. ಇನ್ನೂ ಅಕ್ರಮ ಸಕ್ರಮ ಫೈಲ್, ಉಗ್ರಾಣಿ ರೇಟು-20,000/- , VA 40,000/ RT 30-40,000/ ತಹಶೀಲ್ದಾರರು, AC ಎಲ್ಲಾ Setting  ಒಟ್ಟು 3 ಲಕ್ಷ , ಈ ಎಲ್ಲಾ ಬ್ರೋಕರ್ ಕೆಲ್ಸ, ಖ್ಯಾತ ನಾಮವೆತ್ತರಿಂದ ಇನ್ನು ಸಬ್‌ರಿಜಿಸ್ಟಾರ್ ಕಛೇರಿ, ಸಿ.ಸಿ ಕ್ಯಾಮೆರಾ ಇದೆ. ಲಂಚ ಇಲ್ಲ. ಛೀ… ನಾಚಿಕೆ ಆಗಬೇಕು. ರೋಸಿ ಹೋಗಿದೆ. ವಾಸನೆ ಇಲ್ಲ. ನಾಚಿಕೆ ಇಲ್ಲ. ಮಾನ ಮರ್ಯಾದೆ ಇಲ್ಲವೇ ಇಲ್ಲ. Document writter advoca ಅವರ fees ಜೊತೆಯಲ್ಲಿ ಸೇರಿಸ್ತಾರೆ. ಫೋಟೋ ತೆಗೆದವರಿಗೆ ರೂ.500/- ದಸ್ಕತ್ ಹಾಕಿದವರಿಗೆ ರೂ. 500/- ಫೈಲ್  ಬರೆದವರಿಗೆ ರೂ.೫೦೦, ಆಚೆಯವರಿಗೆ 500, ಸಬ್‌ರಿಜಿಸ್ಟಾರ್‌ಗೆ ಫೈಲ್ ನೋಡಿಕೊಂಡು ರೂ. 6000ರೂ ರಿಂದ ಪ್ರಾರಂಭ. ಇನ್ನು ಟೋಕನ್ ಬೇಕಾ ೫ ಟೋಕನ್ Black  ನಲ್ಲಿ ಲಭ್ಯವಿದೆ. ೧ಟೋಕನ್ ಗೆ 20-25,00 ದಿನಾ ೫ ಟೊಕನ್ ಮಾರಾಟಕ್ಕಿದೆ. ಲಂಚ. ಇಲ್ಲಪ್ಪಾ… ಪಾಪ … Document writter  ಇಲ್ಲಾ advocaters ಅವರವರ ಮನೆಗೆ ಯಾ ಒಂದು ನಿರ್ದಿಷ್ಟ ಸ್ಥಳದಲ್ಲಿ ಜಮೆ. ಇನ್ನು ಟ್ರೆಜರಿ Register benifishar 2% ನ ವರೆಗೆ ಕೊಟ್ಟರೆ ತಕ್ಷಣ ಪಾಸ್. ಇಲ್ಲದಿದ್ರೆ ಕುಣಿ ಕುಣಿದಾಡೋ…

ತಾಲೂಕು ಕಚೇರಿಯ ಪ್ರಾಮಾಣಿಕ ವ್ಯಕ್ತಿ: ಪುತ್ತೂರು ತಾಲೂಕು ಕಛೇರಿಯ ಓರ್ವ ಪ್ರಾಮಾಣಿಕ ವ್ಯಕ್ತಿ ಯಾರು ಗೊತ್ತೇ? ಸದ್ದಿಲ್ಲದೇ ತನ್ನ ಕರ್ತವ್ಯ ನಿಷ್ಠೆಯಿಂದಲಾಗಿ ಲಂಚ ಕೋರನಲ್ಲದೇ ನಿಯತ್ತಿನ ವ್ಯಕ್ತಿ “ಶ್ರೀ ನಾಗೇಶ” ಚುನಾವಣಾ ವಿಭಾಗದಲ್ಲಿ ಕೆಲ್ಸ ಮಾಡ್ತಿದ್ದಾರೆ. ಆ ವ್ಯಕ್ತಿ ಕನ್ನಡಕ ಹಾಕಿಕೊಂಡು ಶುಭ್ರ ಬಟ್ಟೆ, ಮಿತವಾದ ಹಿತವಾದ ಮಾತು. ಉದ್ದವಾದ ಶರೀರ, ಸೌಜನ್ಯತೆಯ ಸಾಕಾರ ಮೂರ್ತಿ. ನಿಜವಾದ ಪುತ್ತೂರು ತಾಲೂಕು ಕಛೇರಿಯ ಹೀರೋ! ಇದುವರೆಗೆ ತನ್ನ ಸರ್ವಿಸ್‌ನಲ್ಲಿ ಲಂಚ ತೆಗೆದುಕೊಳ್ಳದೆ ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಾಗೇಶ್ ಮಾತ್ರ. ಮತ್ತೆ ಕಳೆದ ಸಲ ಸನ್ಮಾನ ಸ್ವೀಕರಿಸಿದವರೆಲ್ಲಾ….. ನುಂಗಣ್ಣ.. ಲಂಚಕೋರರು, ಲೂಟಿಕೋರರು.
                                                                                                                                                                                                                            ಸುದರ್ಶನ

LEAVE A REPLY

Please enter your comment!
Please enter your name here