ದೋಳ್ಪಾಡಿ : ಮರದಿಂದ ಬಿದ್ದು ಶಾಲಾ ಬಾಲಕ ಮೃತ್ಯು

0

ಕಾಣಿಯೂರು : ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಪೇರಾಳ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಮಾ.17ರ ಸಂಜೆ ನಡೆದಿದೆ.

 

 

ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬವರ ಪುತ್ರ ಉಲ್ಲಾಸ್ ಡಿ.ಎಂ (8 ವ.) ಮೃತ ಬಾಲಕ. ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಉಲ್ಲಾಸ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ಉಲ್ಲಾಸ್ ಎಂದಿನಂತೆ ಮಾ.17ರಂದು ಕೂಡ ಶಾಲೆಗೆ ಹೋಗಿದ್ದು ಸಂಜೆ ಮನೆಗೆ ಹಿಂತಿರುಗಿದ್ದಾನೆ. ಮನೆಗೆ ಬಂದ ಬಳಿಕ ಮನೆ ಸಮೀಪದ ಪೇರಳೆ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ್ದು ಈ ವೇಳೆ ಅಯತಪ್ಪಿ ಕೆಳಕ್ಕೆ ಉರುಳಿದಾಗ ಕೆನ್ನಿ ಭಾಗಕ್ಕೆ ಏಟಾಗಿ ಮೃತಪಟ್ಟಿದ್ದಾನೆ. ಮೃತ ಉಲ್ಲಾಸ್ ತಂದೆ ದಿವಾಕರ್, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here