ಒಡಿಯೂರು ಶ್ರೀಗುರುದೇವ ಸೇವಾ ಬಳಗ, ವಜ್ರಮಾತ ಮಹಿಳಾ ಭಜನಾ ಮಂಡಳಿಯಿಂದ ಮಹಿಳಾ ದಿನಾಚರಣೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು, ಒಡಿಯೂರು ಶ್ರೀ ವಜ್ರಮಾತ ಮಹಿಳಾ ಭಜನಾ ಮಂಡಳಿ ಪುತ್ತೂರು ಘಟಕದ ವತಿಯಿಂದ ಮಾ. ೧೭ರಂದು ನೆಲ್ಲಿಕಟ್ಟೆ ನೇಹಾ ನಿಲಯದಲ್ಲಿ ಮಹಿಳಾ ದಿನಾಚರಣೆ ನಡೆಯಿತು.

 


ವಿಶೇಷ ಪ್ರತಿಭೆಗಳಾದ ನೇಹಾ ರೈ ಹಾಗೂ ನಂದಿತಾ ನಾಯಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗ್ದೆ, ಒಕ್ಕೂಟದ ಗೌರವಾಧ್ಯಕ್ಷೆ ಪ್ರೇಮಲತಾ ರಾವ್ ಹಾಗೂ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಭಿತಾ ಭಂಡಾರಿ ಅವರು ಮಹಿಳಾ ದಿನಾಚಣೆಯ ಬಗ್ಗೆ ಮಾತನಾಡಿ, ಶುಭ ಕೋರಿದರು. ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡ ಹಾಗೂ ಲಯನ್ಸ್ ಕಾರ್ಯದರ್ಶಿ ಕೇಶವ ನಾಯ್ಕ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಒಡಿಯೂರು ವಜ್ರಮಾತ ಮಹಿಳಾ ಭಜನಾ ಮಂಡಳಿಯ ಸದಸ್ಯೆ ವತ್ಸಲ ನಾಯಕ್ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಕವಿತಾ ದಿನಕರ್ ಅವರನ್ನು ಗೌರವಿಸಲಾಯಿತು. ಕವಿತಾ ದಿನಕರ್ ಪ್ರಾರ್ಥಿಸಿದರು. ವಜ್ರಮಾತ ಮಂಡಳಿ ಅಧ್ಯಕ್ಷೆ ನಯನ ರೈ ಸ್ವಾಗತಿಸಿ, ಕಾರ್ಯದರ್ಶಿ ಶಾರದಾ ಕೇಶವ್ ವಂದಿಸಿದರು. ಉಪಾಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಭ್ರಷ್ಟಾಚಾರ ವಿರೋಧಿ ಘೋಷಣೆ:
ಭ್ರಷ್ಟಾಚಾರ ವಿರೋಧಿ ಸುದ್ದಿಯ ಆಂದೋಲನದ ಘೋಷಣೆಯನ್ನು ಕಾರ್ಯಕ್ರಮದಲ್ಲಿ ಬೋಧಿಸಲಾಯಿತು. ಬಳಿಕ ಕಾರ್ಯಕ್ರಮದ ಸಂಘಟಕರಿಗೆ ಭ್ರಷ್ಟಾಚಾರ ವಿರೋಧಿ ಫಲಕವನ್ನು ಹಸ್ತಾಂತರಿಸಲಾಯಿತು. ಸುದ್ದಿ ಜನಾಂದೋಲನ ವೇದಿಕೆಯ ಪುತ್ತೂರು ಮುಖ್ಯಸ್ಥ ಗಣೇಶ್ ಎನ್. ಕಲ್ಲರ್ಪೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here