ಬನ್ನೂರು ಶಿವಪಾರ್ವತಿ ಮಂದಿರದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ತಿಂಗಳ ಸರಣಿ ತಾಳಮದ್ದಳೆ ಮಾ.21ರಂದು ನಡೆಯಿತು.


” ಶ್ರೀ ವನಗಮನ ” ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ದಶರಥ ( ಶುಭಾ ಗಣೇಶ್ ), ಕೈಕೇಯೀ ( ಕಿಶೋರಿ ದುಗ್ಗಪ್ಪ ನಡುಗಲ್ಲು ), ಶ್ರೀರಾಮ ( ಶಾರದಾ ಅರಸ್ ), ಲಕ್ಷ್ಮಣ ( ಶುಭಾ ಜೆ ಸಿ ಅಡಿಗ ), ಮಂಥರೆ ( ಮನೋರಮಾ ಜಿ ಭಟ್ ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ದುಗ್ಗಪ್ಪ ಯನ್ ವಂದಿಸಿದರು. ನಿವೃತ್ತ ಮೆಸ್ಕ೦ ಅಧಿಕಾರಿ ಶೇಷಪ್ಪ ಪೂಜಾರಿ ಪ್ರಾಯೋಜಿಸಿದ್ದರು. ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ , ಚಂದ್ರಶೇಖರ್ , ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here