ಬೆಳ್ಳಾರೆ ಕೆಪಿಎಸ್‌ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

0

ಕೆಪಿಎಸ್ ಬೆಳ್ಳಾರೆಯ ಪ್ರಾಥಮಿಕ ವಿಭಾಗದ ಸಭಾಂಗಣದಲ್ಲಿ ಮುಖ್ಯಶಿಕ್ಷಕರಾದ ಮಾಯಿಲಪ್ಪರವರ ಅಧ್ಯಕ್ಷತೆಯಲ್ಲಿ ೫೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿವೃತ್ತ ಪ್ರಾಂಶುಪಾಲರಾದ ಸೂರ್ಯನಾರಾಯಣ ಬಿ.ವಿ.ಯವರು ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ, ಕನ್ನಡ ಭಾಷೆಯನ್ನು ಪ್ರೀತಿಸೋಣ ಕನ್ನಡಪುಸ್ತಕ ಓದುವುದg ಮೂಲಕ ಕನ್ನಡ ಸಿನಿಮಾ ನೋಡುವುದರ ಮೂಲಕ ಕನ್ನಡ ಹಾಡುಗಳನ್ನು ಹಾಡುವುದರ ಮೂಲಕ ಕನ್ನಡ ನಾಟಕಗಳನ್ನು ನೋಡಿ ಅಭಿನಯಿಸುವುದರ ಮೂಲಕ ಬೆಳೆಸೋಣ ಉಳಿಸೋಣ ಎಂಬುದಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕರಾದ ಮಾಯಿಲಪ್ಪರವರು ಅಧ್ಯಕ್ಷತೆ ವಹಿಸಿದ್ದು, ಕನ್ನಡ ಪ್ರೀತಿಸುವುದರೊಂದಿಗೆ ಇತರ ಭಾಷೆಗಳನ್ನು ಗೌರವಿಸಬೇಕು ಎಂಬುದಾಗಿ ಕರೆ ನೀಡಿದರು.

ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕನ್ನಡನಾಡಿನ ಮಹತ್ವ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಹಾಡುಗಳನ್ನು ಹಾಡಿದರು.
ಶಾಲಾ ಸಹಶಿಕ್ಷಕಿ ಶ್ರೀಮತಿ ಸಾವಿತ್ರಿಯವರು ಸ್ವಾಗತಿಸಿ, ಶ್ರೀಮತಿ ಶಾಂತಕುಮಾರಿಯವರು ಧನ್ಯವಾದಗೈದರು. ಶಿಕ್ಷಕರಾದ ರಾಜನಾಯಕಟಿ ಇವರು ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here