ನಮ್ಮ ಉಸಿರಿನಷ್ಟೇ ಸಹಜವಾಗಿ ಕನ್ನಡ ಭಾಷೆಯನ್ನು ಮಾತನಾಡಬೇಕು : ಪ್ರೊ ಸಂಜೀವ ಕುದ್ಪಾಜೆ

0

 

ಕನ್ನಡಿಗರು ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿದಷ್ಟು ಭಾಷೆ ಸಶಕ್ತವಾಗುತ್ತದೆ.ಭಾಷೆ ನಮ್ಮ ಮಣ್ಣಿನ ಗುಣ,ಕನ್ನಡಿಗರು ಶಕ್ತಿವಂತರಾಗಲು ಆರ್ಥಿಕ ಶಕ್ತಿ ಹೆಚ್ಚಿಸಬೇಕು.ನಮ್ಮ ಉಸಿರಿನಷ್ಟೇ ಸಹಜವಾಗಿ ಭಾಷೆಯನ್ನು ಮಾತನಾಡಬೇಕು.ಭಾಷೆ ಬತ್ತಳಿಕೆಯಲ್ಲಿ ಬಾಣ ಇದ್ದಂತೆ. ಭಾಷೆಯನ್ನು ಬೆಳೆಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದು ಅಲ್ಲ.ಪರಸ್ಪರ ಕೊಡು -ಕೊಳ್ಳುವಿಕೆಯಿಂದ ಜ್ಞಾನ ವಿಸ್ತರಿಸುವುದು ಎಂದು ಸುಳ್ಯ ಎನ್ನೆoಸಿಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ಸಂಜೀವ ಕುದ್ಪಾಜೆ ಅವರು ಹೇಳಿದರು.

 

ಅವರು ಸುಳ್ಯದ ನೆಹರು ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತೃ ಸಂಸ್ಥೆ ಎನ್ನೆoಸಿಯ ಪ್ರಾಚಾರ್ಯರಾದ ಪ್ರೊ ರುದ್ರ ಕುಮಾರ್ ಎಂ ಎಂ ಅವರು ಮಾತನಾಡಿ ನಾವು ಕನ್ನಡವನ್ನು ಅತೀ ಹೆಚ್ಚು ಪ್ರೀತಿಸಬೇಕು, ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು .ನಾವು ಹೊರ ಪ್ರದೇಶಗಳಿಗೆ ಹೋದಾಗ ನಮ್ಮ ಭಾಷೆ ನಮಗೆ ಅಭಿಮಾನ ಉಂಟು ಮಾಡುತ್ತದೆ,ನಮ್ಮ ಭಾಷೆಯಲ್ಲಿ ಸಂವಹನ ಮಾಡಿದ್ದೇ ನಮ್ಮ ಮನಸ್ಸಿಗೆ ನಾಟುವುದು.ಹಾಗಾಗಿ ಎಲ್ಲರೂ ಭಾಷಾ ಪ್ರೇಮ ಹೊಂದಬೇಕು ಎಂದು ಕರೆ ನೀಡಿದರು.ವೇದಿಕೆಯಲ್ಲಿ ಪ.ಪೂ.ವಿಭಾಗದ ಪ್ರಾoಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ, ಪಿಯು ವಿಭಾಗದ ವಿದ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಮತಿ ಸಾವಿತ್ರಿ ಕೆ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಕನ್ನಡ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.ವಿದ್ಯಾರ್ಥಿಗಳಾದ ನಿಶ್ವಿತ ಮತ್ತು ತಂಡದವರು ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಗೀತೆಗಳನ್ನು ಹಾಡಿದರು.ಹಿಂದಿ ಉಪನ್ಯಾಸಕಿ ಶ್ರೀಮತಿ ರಾಜೇಶ್ವರಿ.ಎ.ಸ್ವಾಗತಿಸಿ,ಕನ್ನಡ ಉಪನ್ಯಾಸಕಿ,ಕಾರ್ಯಕ್ರಮ ಸಂಯೋಜಕಿ ಕು.ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.ವಿ.ಕ್ಷೇಮಾಧಿಕಾರಿ ಸಾವಿತ್ರಿ ಕೆ ವಂದಿಸಿದರು.ಬೋಧಕ ಬೋಧಕೇತರ ವೃಂದದವರು , ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here