ನೆಲ್ಯಾಡಿ: ಬೆಥನಿ ಶಾಲಾ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ

0

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಜೆಸ್ಸಿಯಮ್ಮ ಹಾಗೂ18ವರ್ಷ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೀಣಾರವರಿಗೆ ಶಾಲಾ ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ ರೆ.ಫಾ.ಸತ್ಯನ್ ತೋಮಸ್ ಒಐಸಿಯವರು ಸನ್ಮಾನಿಸಿ ಮಾತನಾಡಿ, ತನ್ನ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಯಿಂದ ಎಲ್ಲರಿಗೂ ಪ್ರೀತಿ ಪಾತ್ರರಾದ ಇಬ್ಬರೂ ಶಿಕ್ಷಕಿಯವರನ್ನು ಸನ್ಮಾನಿಸಲು ಸಂತೋಷವಾಗುತ್ತದೆ. ಬೆಥನಿ ವಿದ್ಯಾಸಂಸ್ಥೆಗೆ ಇವರು ನೀಡಿದ ಸೇವೆ ಅವಿಸ್ಮರಣೀಯವಾಗಿದೆ. ದೇವರ ಆಶೀರ್ವಾದ ಇವರ ಮೇಲೆ ಇರಲಿ ಎಂದು ಹೇಳಿ ಶುಭಹಾರೈಸಿದರು.

ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರು ಮಾತನಾಡಿ, ತಾನು ಮಾಡುವ ವೃತ್ತಿಯನ್ನು ಪ್ರೀತಿಸಿ, ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ತನ್ನನ್ನು ಸಮರ್ಪಿಸಿಕೊಂಡಾಗ ವೃತ್ತಿ ಗೌರವವೂ ಮತ್ತು ವ್ಯಕ್ತಿ ಗೌರವವೂ ಹೆಚ್ಚಾಗುತ್ತದೆ. ಈ ಇಬ್ಬರೂ ಶಿಕ್ಷಕಿಯರು ಬೆಥನಿ ವಿದ್ಯಾಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ ವೃತ್ತಿ ಗೌರವವನ್ನು ಮತ್ತು ವ್ಯಕ್ತಿತ್ವನ್ನು ಹೆಚ್ಚಿಸಿಕೊಂಡು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರೆ.ಫಾ.ತೋಮಸ್ ಬಿಜಲ ಒಐಸಿ, ಉಪಪ್ರಾಂಶುಪಾಲ ಜೋಸ್ ಎಂ.ಜೆ., ಶಿಕ್ಷಕ-ರಕ್ಷಕ ಸಮಿತಿಯ ಉಪಾಧ್ಯಕ್ಷ ಎ.ಎ ಅಬ್ರಹಾಂ, ಪ್ರೌಢ ಶಾಲಾ ಮುಖ್ಯಗುರು ಜಾರ್ಜ್ ಕೆ. ತೋಮಸ್, ಶಿಕ್ಷಣ ಸಂಸ್ಥೆಯ ಹೆಚ್‌ಒಡಿ ಸುಶೀಲ್ ಕುಮಾರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥ ಜೋಸ್ ಪ್ರಕಾಶ್, ಶಿಕ್ಷಕ ರಕ್ಷಕ ಸಮಿತಿಯ ಪದಾಧಿಕಾರಿಗಳಾದ ಬೇಬಿಲಾಲ್, ತೋಮಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here