ಕುರಿಯ ಮಾಪಲ ಬಾರಿಕೆ ಬಂಗೇರ ಕುಟುಂಬದ ದೈವಗಳ ನೇಮೋತ್ಸವ ಸಂಪನ್ನ

0

ಪುತ್ತೂರು : ಕುರಿಯ ಮಾಪಲ ಬಾರಿಕೆ ಬಂಗೇರ ಕುಟುಂಬಿಕರ ಮೂಲಸ್ಥಾನದಲ್ಲಿ ಕುಟುಂಬದ ಧರ್ಮದೈವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವವೂ ಮಾ.18ರಿಂದ 20 ತನಕ ಮಾಪಲ ಬಾರಿಕೆಯಲ್ಲಿ ವೇ.ಮೂರ್ತಿ ರಾಘವೇಂದ್ರ ಅಸ್ರಣ್ಣ ರವರ ಮಾರ್ಗದರ್ಶನದಲ್ಲಿ ನಡೆಯಿತು.

 

ಮಾ.18ರಂದು ಸಂಜೆ, ದುರ್ಗಾ ನಮಸ್ಕಾರ ಪೂಜೆ,19ರಂದು ಗಣಪತಿ ಹೋಮ, ಸತ್ಯ ನಾರಾಯಣ ಪೂಜೆ, ದೈವಗಳಿಗೆ ಕಲಶಾಭಿಷೇಕ, ಮುಡಿಪು ಪೂಜೆ, ನಾಗ ತಂಬಿಲ, ಪ್ರಸಾದ ಭೋಜನ ಬಳಿಕ ಸಂಜೆ, ಧರ್ಮರಸು ಉಳ್ಳಾಯ, ರಕ್ತೇಶ್ವರಿ, ಮಹಿಷಂತಾಯ, ವ್ಯಾಘ್ರ ಚಾಮುಂಡಿ, ಧೂಮಾವತಿ ಬಂಟ ವರ್ಣರ ಪಂಜುರ್ಲಿ ದೈವಗಳಿಗೆ ಹಾಗೂ ಮಾ.೨೦ರ ಸಂಜೆ ಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ, ಅಗ್ನಿ ಕೊರತಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಿತು. ಬಂಗೇರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here