ಜಾರ್ಖಂಡ್ ಮೂಲದ ಕಾರ್ಮಿಕ ದಿಢೀರ್ ಅಸ್ವಸ್ಥನಾಗಿ ಮೃತ

0

ಉಪ್ಪಿನಂಗಡಿ:ಗೋಳಿತೊಟ್ಟುವಿನಲ್ಲಿ ಕೆಲಸ ಮಾಡಿಕೊಂಡಿದ್ದ ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಜಾರ್ಖಂಡ್ ಮೂಲದ ರಾಜೇಂದ್ರ ಯಾದವ್(೪೪ವ.)ಸಾವಿಗೀಡಾದವರು.ಈ ಕುರಿತು ಅವರ ಸಂಬಂಽಕ, ಪ್ರಸ್ತುತ ಗೋಳಿತೊಟ್ಟು ಕಾಂಚನದಲ್ಲಿ ಕೆಎನ್‌ಆರ್ ಕನ್‌ಸ್ಟ್ರಕ್ಷನ್‌ನಲ್ಲಿ ಟಿಪ್ಪರ್ ಚಾಲಕನಾಗಿರುವ ವಿಕಾಸ್ ಎಂಬವರು ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ತನ್ನ ಚಿಕ್ಕಪ್ಪನ ಮಗ ರಾಜೇಂದ್ರ ಯಾದವ್ ಜೊತೆ ತಾನು ಕೆಎನ್‌ಆರ್ ಕನ್‌ಸ್ಟ್ರಕ್ಷನ್‌ನಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಗೊಳಿತೊಟ್ಟು ಗ್ರಾಮದ ಕಾಂಚನ ಎಂಬಲ್ಲಿರುವ ಕ್ಯಾಂಪಸ್‌ನಲ್ಲಿ ವಾಸವಾಗಿದ್ದು ಮಾ.೨೩ರಂದು ಬೆಳಿಗ್ಗೆ ಕ್ಯಾಂಪಸ್‌ನಲ್ಲಿರುವಾಗ ರಾಜೇಂದ್ರ ಯಾದವ್‌ರಿಗೆ ವಿಪರೀತ ಎದೆನೋವು ಕಾಣಿಸಿಕೊಂಡಿತ್ತು.ಚಿಕಿತ್ಸೆಯ ಬಗ್ಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ವಿಪರೀತ ಆಸ್ವಸ್ಥಗೊಂಡು ಮಾತನಾಡದ ಸ್ಥಿತಿಯಲ್ಲಿದ್ದ ರಾಜೇಂದ್ರರನ್ನು ತುರ್ತು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಅಲ್ಲಿ ವೈದ್ಯರು ಪರೀಕ್ಷಿಸಿ ಆತ ಮೃತಪಟ್ಟಿರುವ ಬಗ್ಗೆ ತಿಳಿಸಿರುವುದಾಗಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದರು.

LEAVE A REPLY

Please enter your comment!
Please enter your name here