ಮಾ.28: ಎಸ್‌ಎಸ್‌ಎಲ್‌ಸಿ  ವಾರ್ಷಿಕ ಪರೀಕ್ಷೆ

0

  • ಪುತ್ತೂರು, ಕಡಬದಲ್ಲಿ 5080 ವಿದ್ಯಾರ್ಥಿಗಳು
  • ಎಂಡೋಪೀಡಿತರಿಗೆ ರಾಮಕುಂಜದಲ್ಲಿ ಉಪಕೇಂದ್ರ

  •  ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್ ಸೌಲಭ್ಯ

 

ಪುತ್ತೂರು:2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾ.28ಕ್ಕೆ ಪ್ರಾರಂಭಗೊಂಡು ಏ.11ರ ತನಕ ನಡೆಯಲಿದ್ದು, ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ರವರ ನೇತೃತ್ವದಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ 14 ಕೇಂದ್ರಗಳಲ್ಲಿ ಒಟ್ಟು ೫೦೮೫ ವಿದ್ಯಾರ್ಥಿಗಳು ಈ ವರ್ಷದ ಪರೀಕ್ಷೆ ಬರೆಯಲಿದ್ದಾರೆ.

ಮಾ.28ರಂದು ಪ್ರಥಮ ಭಾಷೆ, ಮಾ.೩೦ರಂದು ದ್ವಿತೀಯ ಭಾಷೆ, ಏ.೪ರಂದು ಗಣಿತ, ಏ.6ರಂದು ಸಮಾಜ ವಿಜ್ಞಾನ ಹಾಗೂ ಏ.೧೧ರಂದು ವಿಜ್ಞಾನ ವಿಷಯಗಳ ಪರೀಕ್ಷೆಯು ನಡೆಯಲಿದೆ. ಪರೀಕ್ಷೆಯು ಪ್ರತಿದಿನ ಬೆಳಿಗ್ಗೆ ೧೦.೩೦ಕ್ಕೆ ಪ್ರಾರಂಭಗೊಳ್ಳಲಿದೆ.

೫೦೮೦ ವಿದ್ಯಾರ್ಥಿಗಳು: ಪುತ್ತೂರಿನಲ್ಲಿ ೩೩೪೮ ಹಾಗೂ ಕಡಬ ತಾಲೂಕಿನಲ್ಲಿ ೧೫೯೬ ಸೇರಿದಂತೆ ಒಟ್ಟು ೫೦೮೦ ಮಂದಿ ವಿದ್ಯಾರ್ಥಿಗಳು ಈ ಸಾಲಿನ ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ೨೮೭೧ ಕನ್ನಡ ಮಾಧ್ಯಮ ಹಾಗೂ ೨೦೭೩ ಮಂದಿ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಹೊಸದಾಗಿ ೪೮೦೦ ವಿದ್ಯಾರ್ಥಿಗಳು, ಸುಳ್ಯ, ಪುತ್ತೂರು, ಬೆಳ್ತಂಗಡಿಯ ಒಟ್ಟು ೨೮೦ ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ.ಈ ವರ್ಷ ಪುತ್ತೂರಿನಲ್ಲಿ ಒಟ್ಟು ೫೦೮೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆಲಾಗಿದೆ.

೧೪ ಪರೀಕ್ಷಾ ಕೇಂದ್ರಗಳು: ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಒಟ್ಟು ೧೪ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ.ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಪುತ್ತೂರು, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕಡಬ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಉಪ್ಪಿನಂಗಡಿ ಸೈಂಟ್ ಮೇರಿಸ್ ಪ್ರೌಢಶಾಲೆ, ಕುಂಬ್ರ ಕೆ.ಪಿಎಸ್(ಪ್ರೌಢಶಾಲಾ ವಿಭಾಗ),ಈಶ್ವರಮಂಗಲ ಶ್ರೀಗಜಾನನ ಪ್ರೌಢಶಾಲೆ, ಸವಣೂರು ವಿದ್ಯಾರಶ್ಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನೆಲ್ಯಾಡಿ ಸಂತಜಾರ್ಜ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ತೆಂಕಿಲ ವಿವೇಕಾನಂದ ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಎಂಡೋಸಲಾನ್ ಪೀಡಿತರಿಗೆ ಉಪಕೇಂದ್ರ: ಈ ಬಾರಿಯ ಪರೀಕ್ಷೆಯಲ್ಲಿ ಕಡಬದ ಎಂಡೋಸಲಾನ್ ಪೀಡಿತ ೫ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರಿಗೆ ಪ್ರತ್ಯೇಕವಾಗಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಉಪಕೇಂದ್ರವನ್ನು ತೆರೆಯಲಾಗಿದ್ದು ಅಲ್ಲಿ ಅವರು ಪರೀಕ್ಷೆ ಬರೆಯಲಿದ್ದಾರೆ.

ಎರಡು ಕಡೆ ಕೋವಿಡ್ ಸೆಂಟರ್: ಒಂದು ಡೆಸ್ಕ್‌ನಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳಂತೆ ಪ್ರತಿಕೊಠಡಿಯಲ್ಲಿ ೨೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಪ್ರತಿ ಕೇಂದ್ರಗಳಲ್ಲಿಯೂ ಒಂದು ವಿಶ್ರಾಂತಿ ಕೊಠಡಿ ಹಾಗೂ ಜ್ವರ ಶೀತ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿದೆ.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ವರದಿ ಬಂದ ವಿದ್ಯಾರ್ಥಿಗಳಿಗೆ ಪುತ್ತೂರಿನಲ್ಲಿ ಬಲ್ನಾಡು ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಕಡಬ ತಾಲೂಕಿನಲ್ಲಿ ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗಿದೆ.

ಅಽಕಾರಿ, ಸಿಬಂದಿಗಳ ನೇಮಕ: ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಕೇಂದ್ರಗಳಿಗೆ ತಲಾ ಒಂದು ಮುಖ್ಯ ಅಽಕ್ಷಕರಂತೆ ಒಟ್ಟು ೧೪ ಮಂದಿ ಮುಖ್ಯ ಅಽಕ್ಷಕರು, ೬ ಮಂದಿ ಉಪ ಅಽಕ್ಷಕರು, ೬ ಮಂದಿ ಕಸ್ಟೋಡಿಯನ್, ೧೪ ಮಂದಿ ಸ್ಥಾನಿಕ ಜಾಗೃತ ದಳ, ೧೪ ಮಂದಿ ಮೊಬೈಲ್ -ನ್ ಸ್ವಾಽನಾಽಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.೫ ಮಾರ್ಗಗಳಲ್ಲಿ ಪ್ರಶ್ನಾಪತ್ರಿಕೆಗಳ ಸಾಗಾಟ ನಡೆಯಲಿದ್ದು ಇದಕ್ಕಾಗಿ ೫ ಮಂದಿ ಮಾರ್ಗಾಽಕಾರಿಗಳು, ಪ್ರತಿಕೊಠಡಿಗಳಿಗ ತಲಾ ಓರ್ವ ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಹಾಗೂ ಶಿಸ್ತು ಪಾಲನೆಗಾಗಿ ಪ್ರತಿ ಕೇಂದ್ರಗಳಿಗೆ ಓರ್ವ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲಾಗಿದೆ.ಆರೋಗ್ಯ ಸುರಕ್ಷತೆಗಾಗಿ ಪ್ರತಿ ಕೇಂದ್ರಗಳಲ್ಲಿಯೂ ಓರ್ವ ಆರೋಗ್ಯ ಇಲಾಖೆಯ ಸಿಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಉಚಿತ ಬಸ್ ಸೌಲಭ್ಯ: ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ.ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಇತರ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬರಬೇಕು: ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆರೋಗ್ಯದ ದೃಷ್ಠಿಯಿಂದ ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಗಳಿಗೆ ಬರಬೇಕು.ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿಗಳನ್ನು ಪರೀಕ್ಷೆಗೆ ಮೊದಲು ಹಾಗೂ ಪರೀಕ್ಷೆ ಮುಗಿದ ಬಳಿಕ ಸ್ಯಾನಿಟೈಸಿಂಗ್ ಮಾಡಲಾಗುತ್ತದೆ.ಸ್ಥಳೀಯಾಡಳಿತಗಳು ಸ್ಯಾನಿಟೈಸಿಂಗ್ ಮಾಡಲಿದೆ.ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂ ದಿಗಳಿಗೆ ಪರೀಕ್ಷಾ ಮಂಡಳಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ನ್ನು ಒದಗಿಸಿದೆ ಎಂದು ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.

ಸೆಕ್ಷನ್ ಜಾರಿ:ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್ ಜಾರಿಗೊಳಿಸಲಾಗಿದೆ.ಪರೀಕ್ಷಾ ಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ.ಪರೀಕ್ಷೆಯ ಕುರಿತು ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಭಯ, ಒತ್ತಡ, ಆತಂಕಗಳು ಬೇಡ.ಯಾವುದೇ ಆತಂಕವಿಲ್ಲದೆ ಶೇ.೧೦೦ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.ಎಲ್ಲಾ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದು ಹಬ್ಬದಂತೆ ಸಂಭ್ರಮಿಸಬೇಕು.ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು. ಲೋಕೇಶ್ ಸಿ.,ಕ್ಷೇತ್ರ ಶಿಕ್ಷಣಾಧಿಕಾರಿಗಳು

ವಿದ್ಯಾರ್ಥಿಗಳು ಸಮವಸ ಧರಿಸಿ ಹಾಜರಾಗಬೇಕು ರಾಜ್ಯ ಸಚಿವಾಲಯ ಆದೇಶ

ಪುತ್ತೂರು : ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳು ಸಮವಸ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕೆಂದು ರಾಜ್ಯ ಸರಕಾರದ ಸಚಿವಾಲಯ ಆದೇಶ ಹೊರಡಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿದ ಸಚಿವಾಲಯ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯು ಮಾ.28ರಿಂದ ಎ.11ರವರೆಗೆ ನಡೆಯಲಿದ್ದು ರಾಜ್ಯದ ಎಲ್ಲಾ ಸರಕಾರಿ ಶಾಲಾ ಕಾಲೇಜುಗಳಲ್ಲಿನ ವಸಸಂಹಿತೆ ಕುರಿತ ಆದೇಶದಂತೆ ಸರಕಾರ ನಿಗದಿಪಡಿಸಿದ ಶಾಲಾ ಸಮವಸವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸತಕ್ಕದ್ದು. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸವನ್ನು ವಿದ್ಯಾರ್ಥಿಗಳು ಧರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here