ಮಾ.31:ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕ ರಿಚರ್ಡ್ ವೇಗಸ್ ಸೇವಾ ನಿವೃತ್ತಿ

0

ಪುತ್ತೂರು: ಶಿಕ್ಷಕ ವೃತ್ತಿಯಲ್ಲಿ ಸುದೀರ್ಘ 31 ವರ್ಷಗಳ ಸೇವೆ ಸಲ್ಲಿಸಿರುವ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕರಾದ ರಿಚರ್ಡ್ ವೇಗಸ್‌ರವರು ಮಾ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

 

ದರ್ಬೆ ಜೆರೋಮ್ ವೇಗಸ್ ಹಾಗೂ ಸೆವರಿನ್ ತಾವ್ರೋ ದಂಪತಿಯ ಎಂಟು ಮಕ್ಕಳಲ್ಲಿ ಐದನೇಯವರಾಗಿ ಜನಿಸಿದ ರಿಚರ್ಡ್ ವೇಗಸ್‌ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ದರ್ಬೆ ಸಂತ ಝೇವಿಯರ್ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು, ಬಿಎಡ್ ಪದವಿಯನ್ನು ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪೂರೈಸಿದ್ದರು. ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ 1989ರಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆಗೈದಿದ್ದರು.

ಶಿಕ್ಷಕ ವೃತ್ತಿಯಲ್ಲಿ ತನ್ನಲ್ಲಿರುವ ಅಗಾಧ ಜ್ಞಾನ ಹಾಗೂ ಕೌಶಲ್ಯತೆಯನ್ನು ಧಾರೆ ಎರೆಯುವ ಮೂಲಕ ಗಣಿತ, ವಿಜ್ಞಾನ ಬೋಧನೆಯ ಜೊತೆಗೆ ೨೫ ವರ್ಷ ಸ್ಕೌಟ್ ಮಾಸ್ಟರ್ ಆಗಿ ಅನೇಕ ವಿದ್ಯಾರ್ಥಿಗಳನ್ನು ರಾಷ್ಟ್ರಪತಿ ಪುರಸ್ಕಾರಕ್ಕೆ ಬೆಳೆಸಿದ ಹಿರಿಮೆ ಹಾಗೂ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟ ಪ್ರಶಸ್ತಿಗಾಗಿ ತರಬೇತಿ ನೀಡಿದ ಕೀರ್ತಿ, ಕಥೋಲಿಕ್ ಶಿಕ್ಷಣ ಮಂಡಳಿ ನಡೆಸಿದ ಮಕ್ಕಳ ಮನೋವಿಜ್ಞಾನದಲ್ಲಿ ಡಿಪ್ಲೋಮ ಪ್ರಶಸ್ತಿ, ನಾಟಕರಂಗದಲ್ಲಿ ಅಭಿನಯ ಮತ್ತು ನಿರ್ದೇಶನ, ಶಿಕ್ಷಣ ಇಲಾಖೆ ನಡೆಸಿದ ರಚನಾ ತರಬೇತಿ, ಮೌಲ್ಯಮಾಪನಾ ತರಬೇತಿಯಲ್ಲಿ ಭಾಗವಹಿಸುವಿಕೆ ಅಲ್ಲದೆ ವಿಜ್ಞಾನ ಸಂಘ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ 16 ವರ್ಷಗಳ ನಿರಂತರ ಸೇವೆಯನ್ನು ರಿಚರ್ಡ್ ವೇಗಸ್‌ರವರು ನೀಡಿರುತ್ತಾರೆ. ಪ್ರಸ್ತುತ ಮರೀಲು ಕ್ಯಾಂಪ್ಕೋ ಬಳಿಯ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ರಿಚರ್ಡ್ ವೇಗಸ್‌ರವರು ಪತ್ನಿ ಫೆಲ್ಸಿಟ ಡಿ’ಕುನ್ಹಾ, ಪುತ್ರಿ ಶ್ವೇತಲ್ ವೇಗಸ್, ಪುತ್ರ ಬೆನ್ಹರ್ ವೇಗಸ್‌ರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here