ಐತ್ತೂರು ಕಲ್ಲಾಜೆಯಲ್ಲಿ ಕೆಟ್ಟು ನಿಂತ ಕ್ರೇನ್ ಕೊನೆಗೂ ಸ್ಥಳಾಂತರ

0

ಕಡಬ: ಕಳೆದ ಒಂದೂವರೆ ವರ್ಷಗಳಿಂದ ಐತ್ತೂರು ಗ್ರಾಮದ ಕಲ್ಲಾಜೆ ಸಮೀಪ ರಸ್ತೆ ಬದಿಯಲ್ಲಿ ಕೆಟ್ಟು ನಿಂತ ಕ್ರೇನ್ ನ್ನು ತುಸು ದೂರಕ್ಕೆ ಸ್ಥಳಾಂತರಿಸುವ ಮೂಲಕ ಸಮಸ್ಯೆಗೆ ಮುಕ್ತಿ ನೀಡಲಾಗಿದೆ. ಈ ಬಗ್ಗೆ ಐತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್.ಕೆಯವರ ನೇತೃತ್ವದಲ್ಲಿ ತಹಸೀಲ್ದಾರ್, ಪೋಲಿಸ್ ಇಲಾಖೆಗೆ ತೆರವುಗೊಳಿಸುವಂತೆ ಮನವಿ ನೀಡಲಾಗಿತ್ತು.

 

 

ಈ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಕಡಬ ತಹಸೀಲ್ದಾರ್ ಅವರು ಪೊಲೀಸ್, ಲೋಕೋಪಯೋಗಿ, ಅರಣ್ಯ ಇಲಾಖೆಯ ಹಾಗೂ ಸ್ಥಳೀಯರ ಸಹಕಾರದಿಂದ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ಮಣ್ಣು ತೆಗೆದು ಸಮತಟ್ಟುಗೊಳಿಸಿ ಬೇರೊಂದು ಕ್ರೆನ್ ಮೂಲಕ ಕಾರ್ಯಾಚರಣೆ ನಡೆಸಿ ಕ್ರೇನ್ ನ್ನು ಸ್ಥಳಾಂತರಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಕಡಬ ತಹಸೀಲ್ದಾರ್ ಅನಂತಶಂಕರ್.ಬಿ., ಕಡಬ ಎಸ್.ಐ. ರುಕ್ಮ ನಾಯ್ಕ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್, ವಲಯಾರಣ್ಯಧಿಕಾರಿ ರಾಘವೇಂದ್ರ, ಎ.ಎಸ್.ಐ. ಸುರೇಶ್, ಗ್ರಾಮಕರಣಿಕ ಶ್ರೀರಾಜ್ ಪ್ರಮುಖರಾದ ಐತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್.ಕೆ, ಪ್ರಮುಖರಾದ ನವೀನ್ ಕಲ್ಲಾಜೆ, ಸುರೇಶ್ ಕೋಟೆಗುಡ್ಡೆ, ಉಮೇಶ್ ಕೇನ್ಯ, ತೀರ್ಥೇಶ್ ಮೊದಲಾದವರು ಲಉಪಸ್ಥಿತರಿದ್ದರು. ಕೆಟ್ಟು ನಿಂತ ಕ್ರೇನ್ ಮಾಲಕ ಈ ಹಿಂದೆ ಕಡಬ ಠಾಣೆಗೆ ಬಂದು ಕೂಡಲೇ ಕ್ರೇನ್ ನ್ನು ದುರಸ್ತಿ ಗೊಳಿಸಿ ಕೊಂಡೊಯ್ಯಲಾಗುವುದು ಎಂದು ಹೇಳಿಕೆ ನೀಡಿದ್ದರು, ಆದರೆ ಕ್ರೇನ್ ಮಾಲಕ ಮಾತ್ರ ಬಾರದೆ ಕ್ರೇನ್ ರಸ್ತೆ ಬದಿಯಲ್ಲಿ ಅನಾಥವಾಗಿತ್ತು, ಕ್ರೇನ್ ಕೆಟ್ಟು ನಿಂತ ರಸ್ತೆಯಲ್ಲಿ ತಿರುವು ಕೂಡ ಇದ್ದು ಒಂದು ಭಾಗದಿಂದ ಬರುವ ವಾಹನ ಸವಾರರಿಗೆ ಈ ಕ್ರೇನ್ ಕಾಣದೆ ಕೆಲವೊಂದು ಅಪಘಾತಗಳು ನಡೆದಿತ್ತು. ಈ ಬಗ್ಗೆ ಹಲವಾರು ಬಾರಿ ಮಾಧ್ಯಮಗಳಲ್ಲಿ ವರದಿ ಕೂಡ ಪ್ರಕಟವಾಗಿತ್ತು.

LEAVE A REPLY

Please enter your comment!
Please enter your name here