ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೊಗೇರ ಸಮುದಾಯದ ಚಾಕ್ರಿ ವಿಚಾರ: ತಾಲೂಕು ಮೊಗೇರ ಸಂಘದಿಂದ ಸಭೆ

0


ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೊಗೇರ ಸಮುದಾಯದವರ ಚಾಕ್ರಿ ವಿಚಾರಕ್ಕೆ ಸಂಬಂಧಿಸಿ ತಾಲೂಕು ಮೊಗೇರ ಸಂಘದಿಂದ ಹಾರಾಡಿ ಎ.೩ರಂದು ಮೊಗೇರ ನಿಲಯದಲ್ಲಿ ತಾಲೂಕು ಅಧ್ಯಕ್ಷ ರಘು ಬೆಳ್ಳಿಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ದೇವಳದ ಚಾಕ್ರಿ ವಿಚಾರಕ್ಕೆ ಸಂಬಂಧಿಸಿ ಗುರಿಕಾರ ಮೋಂಟ ಮೊಗೇರ ಅವರ ಅಭಿಪ್ರಾಯವನ್ನು ಮಂಡಿಸಿದರು. ಚೌತಿಯಂದು ಕೊರಳು ಹಬ್ಬ ಕಾರ್ಯದ ಸಂಬಂಧಪಟ್ಟ ಸಲಕರಣೆಗಳನ್ನು ದೇವಸ್ಥಾನಕ್ಕೆ ಒಪ್ಪಿಸುವುದು, ನಂತರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆಯುವ ಲಕ್ಷದೀಪ ಉತ್ಸವದ ಐದು ದಿನಗಳ ಹಿಂದೆ ಬಾಕಿತುಮರು ಗದ್ದೆಯಲ್ಲಿ ಬಾಳೆ ಹಾಕುವ ಮತ್ತು ಪೂಕರೆ ಹಾಕುವ ಕಾರ್ಯವನ್ನು ಮೋಂಟ ಮೊಗೇರ ಇವರ ಮುಂದಾಳತ್ವದಲ್ಲಿ ನಡೆಯುತ್ತಿದ್ದು, ಈ ಸಮಯದಲ್ಲಿ ದೇವಸ್ಥಾನದ ವತಿಯಿಂದ ನೀಡಲಾದ ಸೀಯಾಳವನ್ನು ಶ್ರೀ ಆದಿ ನಾಗ ಬ್ರಹ್ಮ ಮೊಗೇರ್ಕಳ ದೈವಗಳಿಗೆ ಅವರ ಮನೆಯಲ್ಲಿ ಮಂಜದ ರೂಪದಲ್ಲಿ ಸಮರ್ಪಸಿಕೊಂಡು ಅನ್ನಸಂತರ್ಪಣೆ ನಡೆಸಿಕೊಂಡು ಬಂದಿರುತ್ತಾರೆ. ಈ ನಿಟ್ಟಿನಲ್ಲಿ ಅನಾದಿ ಕಾಲದಿಂದ ಬಂದಿರುವ ದೇವರ ಚಾಕ್ರಿ ಕೆಲಸವನ್ನು ನಿರ್ವಹಿಸುತ್ತಿರುವ ಗುರಿಕಾರ ಮೋಂಟ ಮೊಗೇರರ ಕುಟುಂಬವೇ ಮುಂದೆಯೂ ನಿರ್ವಹಿಸಲಿದೆ ಎಂದು ಸಭೆಯಲ್ಲಿ ತೀರ್ಮಾಣಿಸಲಾಗಿದೆ ಮತ್ತು ಈ ಕುರಿತು ದೇವಳದ ಆಡಳಿತ ಮಂಡಳಿಗೆ ಮನವಿ ಸಲ್ಲಿಸುವುದಾಗಿ ಮೋಗೇರ ಸಂಘದ ಅಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ ಮತ್ತು ಕಾರ್ಯದರ್ಶಿ ಅಂಗಾರ ಪಿ ಹಾಋಆಡಿ ಅವರು ತಿಳಿಸಿದ್ದಾರೆ. ಸಭೆಯಲ್ಲಿ ಸುಂದರ ಕೇಪುಳು, ದಿನೇಶ್ ಬೆಳ್ಳಿಪ್ಪಾಡಿ, ಮುಕೇಶ್ ಕೆಮ್ಮಿಂಜೆ, ಸುಂದರ ನರಿಮೊಗರು, ಕರುಣಾಕಾರ ಸಂಪ್ಯ, ಕೃಷ್ಣಪ್ರಸಾದ್ ಬಪ್ಪಳಿಗೆ ಬಾಲಕೃಷ್ಣ ಬಪ್ಪಳಿಗೆ, ಸುರೇಶ್ ಬಪ್ಪಳಿಗೆ, ಲೋಕೇಶ್ ತೆಂಕಿಲ, ಲೋಹಿತ್ ತೆಂಕಿಲ, ಅಖಿಲೇಶ್ ತೆಂಕಿಲ, ಚೆನ್ನಪ್ಪ ಆನೆಮಜಲು, ರಾಮ.ಪಿ, ಬಾಬು ಹಾರಾಡಿ, ಹರೀಶ್ ಹಾರಾಡಿ, ನವೀನ್, ಅಶೋಕ, ಶರತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here