ಮಧುರಾ ಎಜುಕೇಶನಲ್ ಟ್ರಸ್ಟ್‌ನಿಂದ ಶೈಕ್ಷಣಿಕ ಮಾರ್ಗದರ್ಶನ

0

  • ಪೋಷಕರು ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು-ರಫೀಕ್ ಮಾಸ್ಟರ್

ಪುತ್ತೂರು: ಮಧುರಾ ಎಜುಕೇಶನಲ್ ಟ್ರಸ್ಟ್ ವತಿಯಿಂದ ‘ಮಕ್ಕಳ ಶಿಕ್ಷಣ ಹೇಗಿರಬೇಕು..? ಎಂಬ ವಿಷಯದ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ ಎ.2ರಂದು ಕೂರ್ನಡ್ಕ ಮಧುರಾ ಬಿಲ್ಡಿಂಗ್‌ನಲ್ಲಿ ನಡೆಯಿತು.

 


ಶೈಕ್ಷಣಿಕ ಮಾರ್ಗದರ್ಶನ ನೀಡಿದ ಖ್ಯಾತ ಮೋಟಿವೇಶನಲ್ ಸ್ಪೀಕರ್ ಹಾಗೂ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಮೇನಾಲ ಇದರ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಫ್ ಅಕಾಡೆಮಿಕ್ ಅಫೈರ್ಸ್ ಆದಂತಹ ರಫೀಕ್ ಮಾಸ್ಟರ್ ಮಾತನಾಡಿ ಮಕ್ಕಳ ಶಿಕ್ಷಣದ ಅಡಿಪಾಯ ಮಗು ಜನಿಸಿದ ಕ್ಷಣದಿಂದಲೇ ಪ್ರಾರಂಭವಾಗಬೇಕು ಹಾಗೂ ಹೆತ್ತವರು ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು ಉತ್ತಮ ಸಂಸ್ಕಾರದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿದರೆ ಭವಿಷ್ಯದಲ್ಲಿ ಅವರೇ ಹೆತ್ತವರ ಆಸ್ತಿಯಾಗುತ್ತಾರೆ ಎಂದು ಅವರು ಹೇಳಿದರು.

ಮಧುರಾ ಗ್ರೂಪ್ ಸ್ಥಾಪಕರಾದ ಡಿ.ಎ ಖಾದರ್ ಹಾಜಿ ಮಧುರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೂರ್ನಡ್ಕ ಜುಮಾ ಮಸ್ಜಿದ್ ಖತೀಬ್ ಉನೈಸ್ ಫೈಝಿಯವರು ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೂರ್ನಡ್ಕ ಜುಮಾ ಮಸ್ಜಿದ್‌ನ ಅಧ್ಯಕ್ಷ ಕೆ.ಎಚ್ ಖಾಸಿಂ ಹಾಜಿ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ಉಪಾಧ್ಯಕ್ಷ ಜಾವೇದ್ ಇಬ್ರಾಹಿಂ, ಪ್ರ.ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್, ಟ್ರಸ್ಟಿ ಖತೀಜಮ್ಮ ಮಧುರಾ, ಆಡಳಿತಾಧಿಕಾರಿ ನಝೀರ್ ಅಹಮ್ಮದ್ ಉಪಸ್ಥಿತರಿದ್ದರು. ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಮುಖ್ಯ ಶಿಕ್ಷಕಿ ಹಾಗೂ ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ ಸ್ವಾಗತಿಸಿದರು. ಶಿಕ್ಷಕಿ ಫಾತಿಮತ್ ಝಿಯಾನ ವಂದಿಸಿದರು.

LEAVE A REPLY

Please enter your comment!
Please enter your name here